January 10, 2025

Newsnap Kannada

The World at your finger tips!

ekadashi

ಮೋಕ್ಷವನ್ನು ನೀಡುವ “ಮೋಕ್ಷದಾ ಏಕಾದಶಿ (ವೈಕುಂಠ ಏಕಾದಶಿ )”

Spread the love

ಧನುರ್ಮಾಸದಲ್ಲಿ ಬರುವ ಏಕಾದಶಿ ಮೋಕ್ಷದಾ ಏಕಾದಶಿ ಇದನ್ನು ವೈಕುಂಠ ಏಕಾದಶಿ ಎಂದೂ ಕರೆಯುತ್ತಾರೆ. ಮಾರ್ಗಶಿರ ಅಥವಾ ಪುಷ್ಯ ಮಾಸದಲ್ಲಿ (ಧನುರ್ಮಾಸ ) ಬರುವ ಈ ಏಕಾದಶಿಯಂದು ತಿರುಪತಿಯಲ್ಲಿ ವೆಂಕಟರಮಣನ ದರ್ಶನ ಬಹಳ ಶ್ರೇಷ್ಠವಾದುದು. ನಾರಾಯಣನ ವೈಕುಂಠದ ದ್ವಾರ ಧನುರ್ಮಾಸದ ಈ ಏಕಾದಶಿಯಂದು ತೆರೆಯುತ್ತದೆ ಎಂಬ ನಂಬಿಕೆ ತಿರುಪತಿಯಲ್ಲಿ ಕೂಡ ವೈಕುಂಠ ದ್ವಾರವನ್ನು ತೆಗೆಯುವ ಕಾರಣ ಅಂದು ಶ್ರೀನಿವಾಸನ ದರ್ಶನಕ್ಕೆ ಹೋಗುವ ಜನರು ಬಹಳ ಜನ. ಆದ್ದರಿಂದ ವೈಕುಂಠ ಏಕಾದಶಿಯ ದಿನ ವೆಂಕಟ ರಮಣನ ದರ್ಶನ ಮಾಡಲೇ ಬೇಕೆಂದು ಜನರು ಭಕ್ತಿಯಿಂದ ಹೋಗುತ್ತಾರೆ.

ಭಾಗವತದಲ್ಲಿ ವೈಕುಂಠ ಏಕಾದಶಿ ಮಹತ್ವ ಹೇಳುತ್ತಾರೆ, ನಂದಗೋಪನು ಏಕಾದಶಿ ವ್ರತವನ್ನು ಮಾಡುತ್ತಿದ್ದನು ಆಗ ದ್ವಾದಶಿ ದಿನ ಮುಂಜಾನೆ ಬೇಗ ಸ್ನಾನ ಮಾಡಲು ಯಮುನಾ ನದಿಗೆ ಹೋಗುತ್ತಾನೆ, ಆಗ ಇನ್ನೂ ರಾಕ್ಷಸರ ಸಂಚಾರದ ಸಮಯವಾದ್ದರಿಂದ ವರುಣ ಲೋಕಕ್ಕೆ ನಂದ ಗೋಪನನ್ನು ಕರೆದು ಒಯ್ಯುತ್ತಾರೆ. ಬಹಳ ಹೊತ್ತು ನಂದ ಗೋಪ ಬಾರದ ಕಾರಣ ಗೋಕುಲದ ಜನ ಚಿಂತಿತರಾಗುತ್ತಾರೆ. ಆಗ ಶ್ರೀಕೃಷ್ಣನು ನಂದ ಗೋಪನನ್ನು ಕರೆತರಲು ವರುಣ ಲೋಕಕ್ಕೆ ಹೋಗುತ್ತಾನೆ. ಅಲ್ಲಿ ವರುಣ ದೇವನು ಶ್ರೀಕೃಷ್ಣನ ಪೂಜೆಯನ್ನು ಮಾಡುತ್ತಾನೆ ಅಲ್ಲಿ ಶ್ರೀ ಕೃಷ್ಣನ ನಿಜರೂಪವನ್ನು ಕಂಡ ನಂದಗೋಪನು ಗೋಕುಲಕ್ಕೆ ಬಂದ ನಂತರ ತಾನು ಕಂಡ ಕೃಷ್ಣನ ದಿವ್ಯ ರೂಪವನ್ನು ವರ್ಣಿಸುತ್ತಾನೆ. ಗೋಕಲುದಲ್ಲಿ ಸಜ್ಜನರಿಗೆ ವರ್ಣಿಸಿ ಕೃಷ್ಣನ ನಿಜರೂಪ ಹೇಳಿ
ಏಕಾದಶಿ ಮಹತ್ವವನ್ನು ಕೂಡ ನಂದಗೋಪನಿಂದ ತಿಳಿದ ಗೋಕಲುದ ಜನರೆಲ್ಲರೂ ಶ್ರೀಕೃಷ್ಣನಿಗೆ ಅವನ ಆ ದಿವ್ಯ ರೂಪವನ್ನು ತೋರಿಸೆಂದು ಪ್ರಾರ್ಥಿಸಿದಾಗ ಯಮುನಾ ನದಿಯ ಬ್ರಹ್ಮಕುಂಡದಲ್ಲಿ ಸ್ನಾನ ಮಾಡಿ ಬರಲು ಹೇಳುತ್ತಾನೆ. ಆಗ ಅವರೆಲ್ಲಿರಿಗೂ ವೈಕುಂಠದಲ್ಲಿರುವ ಶ್ರೀ ಕೃಷ್ಣನ ರೂಪ ಗೋಚರಿಸುತ್ತದೆ. ಮೋಕ್ಷದಾ ಏಕಾದಶಿಯ ಮಾರನೇ ದಿನ ಮುಕ್ಕೋಟಿ ದ್ವಾದಶಿಯಂದು ನಡೆದ ಕಾರಣ, ತಿರುಪತಿಯ ಸ್ವಾಮಿ ಪುಷ್ಕರಣಿಯಲ್ಲಿ ಮಿಂದು ಧನುರ್ಮಾಸದಲ್ಲಿ ಮಾರ್ಗಶೀರ/ಪುಷ್ಯ ಮಾಸದಲ್ಲಿ ಬರುವ ಮೋಕ್ಷದಾ ಏಕಾದಶಿಯ ದರ್ಶನ ವೈಕುಂಠದ ದರ್ಶನದ ಸಮಾನ ಎಂಬ ನಂಬಿಕೆ ಮಹಾಭಾರತದ ಕಾಲದಿಂದಲೂ ಇರುವುದರಿಂದ ಇಂದಿನ ದಿನ ವೆಂಕಟರಮಣ/ ಶ್ರೀನಿವಾಸನ ದರ್ಶನ ಶ್ರೇಷ್ಠ ಮತ್ತು ಮೋಕ್ಷದಾ ಏಕಾದಶಿಯ ದಿನ ಉಪವಾಸ ಮಾಡಿದರೆ 24 ಏಕಾದಶಿಗಳನ್ನೂ ಮಾಡಿದ ಪುಣ್ಯ ಎಂಬ ನಂಬಿಕೆ ಇದೆ.

ಏಕಾದಶಿ ಏಕೆ ಹೇಗೆ?

ನಾವು 15 ದಿನಗಳಿಗೆ ಒಮ್ಮೆ ಏಕಾದಶಿಯನ್ನು ಆಚರಿಸುತ್ತೇವೆ ಭಗವಂತ ನಮಗೆ ಯಥೇಚ್ಛವಾಗಿ ತಿನ್ನಲು 14 ದಿನಗಳನ್ನು ಕೊಟ್ಟಿರುತ್ತಾನೆ. ಬೇಕಾದ್ದನ್ನು ಬೇಕಾದಷ್ಟು ತಿನ್ನಬಹುದು. ಆದರೆ ಒಂದು ದಿನ ಏಕಾದಶಿಯನ್ನು ಕಡ್ಡಾಯ ಮಾಡಿರುತ್ತಾನೆ. ಅದರ ಅವಶ್ಯಕತೆ ಮತ್ತು ಮಹತ್ವವನ್ನು ಎಲ್ಲರೂ ತಿಳಿಯಬೇಕು. ನಮಗೆ ಪ್ರಪಂಚವನ್ನು ಅನುಭವಿಸಲು ತಿನ್ನಲು ಊಣ್ಣಲು ಸಕಲ ಐಶ್ವರ್ಯಗಳನ್ನು ಕೊಟ್ಟ ಭಗವಂತನ ಸಲುವಾಗಿ ಅವನ ಮಾತಿನಂತೆ ನಮ್ಮ ಸಲುವಾಗಿ ನಮ್ಮ ಹಿತಕ್ಕಾಗಿ ಏಕಾದಶಿಯನ್ನು ಆಚರಿಸಬೇಕು. ನಮ್ಮ ಆತ್ಮಬಲ, ನಮ್ಮ ಪ್ರಗತಿ ಮತ್ತು ಆರೋಗ್ಯಕ್ಕಾಗಿ ಒಂದು ದಿನ ಉಪವಾಸವನ್ನು ಮಾಡಬೇಕು ಅದರಿಂದ ಏನೆಲ್ಲಾ ಸಾಧಿಸಬಹುದೆಂದು ಭಗವಂತ ಘಂಟಾ ಘೋಷವಾಗಿ ಹೇಳಿದ್ದಾನೆ. ನಮಗೆ ವಾಸ ಮಾಡಲು ಮನೆಯಲ್ಲಿ ಅವಕಾಶ ಕೊಟ್ಟ ವ್ಯಕ್ತಿ ಕುಳಿತುಕೊಳ್ಳಲು ಅವಕಾಶ ಮಾಡಿಕೊಡಲಿಲ್ಲ ಎಂದರೆ ಜನರು ಆ ವ್ಯಕ್ತಿಯನ್ನು ಬಯ್ಯುತ್ತಾರೆ. ಮನೆಯ ಮಾಲಿಕರಿಗೇ ಅವಕಾಶ ಕೊಡದಿರುವವ ಅತ್ಯಂತ ಮೂರ್ಖ ಹಾಗೇಯೇ ಮನುಷ್ಯನಿಗೆ ಯಥೇಚ್ಛವಾಗಿ ತಿನ್ನಲು 14 ದಿನಗಳ ಅವಕಾಸವನ್ನು ಕೊಟ್ಟು ಪದಾರ್ಥಗಳನ್ನು ಒದಗಿಸಿರುತ್ತಾನೆ. 365ದಿನಗಳಲ್ಲಿ 24 ದಿನಗಳನ್ನು ಬಿಟ್ಟು ಮಿಕ್ಕೆಲ್ಲ ದಿನಗಳು ತಿನ್ನುವ ಅವಕಾಶ ಇದ್ದೇ ಇರುತ್ತದೆ, ತಿನ್ನಲು ಆಹಾರ ಮತ್ತು ಆಸ್ವಾದಿಸಲು ದೇಹವನ್ನು ಕೊಟ್ಟವನು ಕೂಡ ಭಗವಂತನೇ.

15 ದಿನಗಳಲ್ಲಿ ಅದೊಂದೇ ದಿನವನ್ನು ತನಗಾಗಿ ಮೀಸಲಿಡಲು ಭಗವಂತ ಹೇಳಿದ್ದಾನೆ. ಅದಕ್ಕೆ ಹರಿದಿನ ಎಂದೇ ಹೆಸರು ಅದೊಂದು ದಿನ ಆಹಾರ ಸೇವನೆ ಮಾಡಬೇಡ ಎಂದರೆ ನಾವು ಮನುಷ್ಯರು ಕೇಳುವುದಿಲ್ಲ. ಆರ್ಯುವೇದ ಶಾಸ್ರ್ತ ಹೇಳುತ್ತದೆ, ಅನೇಕ ರೋಗಗಳಿಗೆ ಪರಿಹಾರ ಏಕಾದಶಿ ಉಪವಾಸ ಎನ್ನುತ್ತದೆ. “ಲಂಘನಮ್‌ ಪರಮೌಷಧಮ್‌ ಉಪವಾಸ ಇದು ಬಹಳ ದೊಡ್ಡ ಔಷಧ, ಎಲ್ಲ ರೀತಿಯ ರೋಗಗಳಿಗೆ ಮೂಲ ಭೂತ ಔಷಧ ಇಂತಹ ಉಪವಾಸವನ್ನು ನಮ್ಮ ಆರೋಗ್ಯದ ಸಲುವಾಗಿಯೇ ಮಾಡಲು ಭಗವಂತ ಹೇಳಿದ್ದಾನೆ. ಯಾರೋ ಪ್ರೀತಿ ಪಾತ್ರರಿಗೆ ಮಾಡಿದ ತ್ಯಾಗದ ಪ್ರತೀಕವೇ ಈ ಉಪವಾಸ ನಿಮ್ಮ ಹೆಂಡತಿ, ಮಕ್ಕಳು, ತಂದೆ, ತಾಯಿ ಬಾಂಧವರು ಮಾಡಿದ ಸಣ್ಣ ಉಪಕಾರವನ್ನು ನೆನಸಿಕೊಂಡು ಈ ರೀತಿಯಾಗಿ ಅವರು ಬರುವವರೆಗೂ ತಿನ್ನದೇ ತ್ಯಾಗದಿಂದ ಉಪಕಾರವನ್ನು ತೋರಿಸುವುದಾದರೆ ಅನಂತ ಕಾಲದಿಂದ ನಮ್ಮ ದೇಹದೊಳಗಿದ್ದು ನಮ್ಮ ಆತ್ಮವನ್ನು ನಿಯಮನವನ್ನು ಮಾಡುವ ಇಡೀ ವಿಶ್ವ ನಿಯಾಮಕನಾದ ಭಗವಂತನಿಗಾಗಿ ನಾವು ಉಪವಾಸವನ್ನು ಮಾಡುವುದಿಲ್ಲ ಅವನಿಗಾಗಿ ಕಾಯುವುದಿಲ್ಲವೆಂದರೆ ಅಪರಾಧ.ಇದನ್ನು ಓದಿ –ತಿರುಪತಿ ಕಾಲ್ತುಳಿತದಲ್ಲಿ ಗಾಯಗೊಂಡವರಿಗೆ ಟಿಟಿಡಿಯಿಂದ ತಿಮ್ಮಪ್ಪನ ವಿಶೇಷ ದರ್ಶನ ಭಾಗ್ಯ

ದೇವರು ನಮ್ಮ ಮನವೆಂಬ ಮಂದಿರಕ್ಕೆ ಬರಬೇಕಾಗಿದೆ ಅದಕ್ಕೆಂದು ಅವನಿಗೆ ನಾವು ಅವನನ್ನು ಭಕ್ತಿ ಮಾಡುತ್ತೇವೆ ಎಂದು ತಿಳಿಸಲು ಉಪವಾಸವನ್ನು ಮಾಡಬೇಕು. ಭಗವಂತನಿಗಾಗಿ ನಾವು ಅವನು ಬರುವವರೆಗೂ ಉಪವಾಸ ಇರಬೇಕು. ಈ ರೀತಿಯ ಭಕ್ತಿಯನ್ನು ಧ್ರುವ ರಾಜರು ಮಾಡಿದರು. ಭಗವಂತನ ದರ್ಶನವನ್ನು ಮಾಡಿಯೇ ಆಹಾರ ಸೇವಿಸುತ್ತೇನೆ ಎಂದರು ಅಷ್ಟು ದೊಡ್ಡ ಯೋಗ್ಯತೆ ನಮಗೆ ಇರುವುದಿಲ್ಲ ನಮ್ಮ ಯೋಗ್ಯತೆಯನ್ನು ಅರಿತ ಭಗವಂತ ಕನಿಷ್ಟ ಪಕ್ಷ ದಿನಕ್ಕೆ ಒಮ್ಮೆ ಆದರೂ ಉಪವಾಸ ಮಾಡು ಎಂದು ಹೇಳಿದ, ಹೀಗೆ ಒಂದು ದಿನವಾದರೂ ಉಪವಾಸ ಮಾಡಿದರೆ ನನ್ನ ಮೇಲೆ ಪ್ರೀತಿಯಿದೆ ಎಂದು ತಿಳಿಯುತ್ತೇನೆ ಎಂದು ಭಗವಂತ ಹೇಳಿದ. ಆತ್ಮಬಲವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಏಕಾದಶಿಯನ್ನು ಮಾಡಿರೆಂದು ಭಗವಂತ ಹೇಳುತ್ತಾನೆ. ಮನುಷ್ಯನಿಗೆ ಇಂದಿನಕಾಲದಲ್ಲಿ ನೂರೆಂಟು ಬಗೆಯ ವ್ಯಸನಗಳಿರುತ್ತವೆ, ಅವುಗಳನ್ನು ಬಿಟ್ಟು ಬದುಕುವುದೇ ಇಲ್ಲವೆನ್ನುತ್ತಾರೆ. ಉತ್ತಮ ಸದ್ಗುಣಿಯಗಿರುವವನು ಮಾಡುವ ಒಂದೇ ಒಂದು ವ್ರತ ಎಂದರೆ ಅದು ಏಕಾದಶಿ ಉಪವಾಸವಾಗಿದೆ. ಇಂದಿನ ಜನರಿಗೆ ಚಟಗಳು ಅಭ್ಯಾಸಗಳು ಇಲ್ಲದೇ ಬದುಕುವುದು ಸಾಧ್ಯವಿಲ್ಲ ಎನ್ನುವುದು ಭ್ರಮೆ. ಇಂತಹ ಯಾವುದೇ ಅಭ್ಯಾಸ ಅಥವಾ ಚಟಗಳಿಂದ ದೂರ ಇರುವಂತೆ ಮಾಡುವ ಆತ್ಮಬಲವನ್ನು ಮನುಷ್ಯನಲ್ಲಿ ತುಂಬುವ ಶಕ್ತಿ ಈ ಏಕಾದಶಿಗೆ ಇದೆ.

image 7

ಮಾಧುರಿ ದೇಶಪಾಂಡೆ, ಬೆಂಗಳೂರು

Copyright © All rights reserved Newsnap | Newsever by AF themes.
error: Content is protected !!