ಬೆಂಗಳೂರು: ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಸ್ ಟಿಕೆಟ್ ದರ ಶೇಕಡಾ 15ರಷ್ಟು ಹೆಚ್ಚಳಕ್ಕೆ ಸರ್ಕಾರ ನಿರ್ಧಾರ ಕೈಗೊಂಡಿದ್ದರೆ, ಈಗ ಸಾರಿಗೆ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ ಲಭಿಸಿದೆ. ನೌಕರರ PF ಟ್ರಸ್ಟ್ ಗೆ 2 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಕಳೆದ ವರ್ಷ ನವೆಂಬರ್‌ನಲ್ಲಿ KSRTC, KKRTC, BMTC ಮತ್ತು NWKRTC ನಿಗಮಗಳು ನೌಕರರ ಪಿಎಫ್ ಟ್ರಸ್ಟ್‌ಗೆ ಸುಮಾರು 2972 ಕೋಟಿ ರೂಪಾಯಿ ಜಮೆ ಮಾಡದೆ ದುರ್ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತು ಉಂಟಾದ ವಾದ ವಿವಾದಗಳ ಬಳಿಕ, ಸರ್ಕಾರ ಈಗ ನೌಕರರ ಹಿತದೃಷ್ಟಿಯಿಂದ 2 ಸಾವಿರ ಕೋಟಿ ರೂ. ಬಿಡುಗಡೆಗೆ ಅನುಮೋದನೆ ನೀಡಿದೆ.
ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಪಿಎಫ್ ಟ್ರಸ್ಟ್‌ಗೆ ಹಣ ನೀಡಲು ನಾಲ್ಕು ಸಾರಿಗೆ ನಿಗಮಗಳು ಬ್ಯಾಂಕ್‌ಗಳಿಂದ ಸಾಲ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ಸರ್ಕಾರ ಈ ಸಾಲದ ಶೂರಿಟಿಯಾಗಿ ನಿಂತಿದ್ದು, ಮುಂದಿನ ಒಂದು ವಾರದಲ್ಲಿ 2 ಸಾವಿರ ಕೋಟಿ ರೂ. ಹಣ ಪಿಎಫ್ ಟ್ರಸ್ಟ್‌ಗೆ ಜಮೆ ಮಾಡಲಾಗುವುದು.ಇದನ್ನು ಓದಿ –ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ: ಚುನಾವಣೆಯ ಮೂಲಕ ತೀರ್ಮಾನ
ಈ ಕ್ರಮದಿಂದ ಸಾರಿಗೆ ನೌಕರರಿಗೆ ಇಳಿವು ದೊರೆಯಲಿದ್ದು, ಅವರ ಭವಿಷ್ಯನಿಧಿ ಸಂಬಂಧಿತ ಚಿಂತೆಗಳು ನಿಲುಗಡೆಗೊಳ್ಳಲಿವೆ.
More Stories
ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ
2024-25ನೇ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ
10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ