ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡಲು, ಬಿಬಿಎಂಪಿ (BBMP) ಹೊಸ ಯೋಜನೆಗೆ ಮುಂದಾಗಿದೆ. ಏರ್‌ಪೋರ್ಟ್ ರಸ್ತೆಯ ಸವಾರರಿಗೆ ಇದು ಒಂದು ಮಹತ್ವದ ಬೆಳವಣಿಗೆ.
ಬೃಹತ್ ಪ್ರಮಾಣದಲ್ಲಿ ವಾಹನ ಸಂಚಾರ ಇರುವ ಹೆಣ್ಣೂರು ಮತ್ತು ಬಾಗಲೂರು ಮಾರ್ಗಗಳಲ್ಲಿ ಇತ್ತೀಚೆಗೆ ತುಂಬಾ ಟ್ರಾಫಿಕ್ ಕಾಡುತ್ತಿದೆ. ಈ ಸಮಸ್ಯೆಯನ್ನು ಇರಿಸಲು , ಹೆಣ್ಣೂರು ಜಂಕ್ಷನ್‌ನಿಂದ ಬಾಗಲೂರುವರೆಗೆ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡುವ ಯೋಜನೆ ಬಿಬಿಎಂಪಿ ಕೈಗೊಂಡಿದೆ.
ಈ ಎಲಿವೇಟೆಡ್ ಕಾರಿಡಾರ್‌ನಿಂದಾಗಿ ಚಿಕ್ಕಗುಬ್ಬಿ, ಕೊತ್ನೂರು, ಹೆಣ್ಣೂರು, ಬಾಗಲೂರು, ಔಟರ್ ರಿಂಗ್ ರೋಡ್, ಬೈರತಿ ಭಾಗಗಳಲ್ಲಿ ಟ್ರಾಫಿಕ್ ಹೊರೆ ಹಗುರವಾಗಲಿದೆ. ಜೊತೆಗೆ, ಏರ್‌ಪೋರ್ಟ್ಗೆ ಸಂಪರ್ಕಿಸುವ ಮಾರ್ಗವು ಇನ್ನಷ್ಟು ಸುಗಮವಾಗಲಿದೆ.ಇದನ್ನು ಓದಿ –₹450 ಕೋಟಿ ವಂಚನೆ ಹಗರಣ: ಟೀಂ ಇಂಡಿಯಾ ಆಟಗಾರ ಶುಭಮನ್ ಗಿಲ್‌ಗೆ CID ಸಮನ್ಸ್
ಈ ಯೋಜನೆ 2025ರೊಳಗೆ ಪೂರ್ಣಗೊಳ್ಳಲು ಸಾಧ್ಯವೆಂದು ನಿರೀಕ್ಷಿಸಲಾಗಿದೆ. ಬಿಬಿಎಂಪಿಯ ಈ ಹೆಜ್ಜೆಯಿಂದಾಗಿ ಸಿಲಿಕಾನ್ ಸಿಟಿಯ ಸವಾರರಿಗೆ ವಾಹನ ಸಂಚಾರದಲ್ಲಿ ಹೊಸ ಅನುಭವ ಲಭಿಸಲಿದೆ.
More Stories
ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ
2024-25ನೇ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ
10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ