January 7, 2025

Newsnap Kannada

The World at your finger tips!

birds

“”ಇಚ್ಛಾಶಕ್ತಿ””

Spread the love

ಸಮುದ್ರ ತೀರದಲ್ಲಿ ಮರಳಿನಲ್ಲಿ ಹಕ್ಕಿಯೊಂದು ಗೂಡು ಕಟ್ಟಿತ್ತು. , ಸಾಗರದಲ್ಲಿ ಅಲೆಗಳು ಎದ್ದವು ಮತ್ತು ಅವುಗಳ ಅಬ್ಬರದ ಏರಿಳಿತದಿಂದ, ಆ ಗೂಡುಗಳು ಕೊಚ್ಚಿಹೋದುವು.. ಅದರಿಂದ ಆ ಪಕ್ಷಿಯು ಕೋಪಗೊಂಡು ಸಮುದ್ರವನ್ನು ಶಪಿಸುತ್ತಾ ಆ ಸಮುದ್ರವನ್ನು ಮುಚ್ಚಿಬಿಡುವಂತೆ ಸಣ್ಣ ಸಣ್ಣ ಮರಳಿನ ಉಂಡೆಗಳನ್ನು ಮಾಡಿ ಸಮುದ್ರದಲ್ಲಿ ಎಸೆಯತೊಡಗಿತು. ಕ್ರಮೇಣ ಎಲ್ಲ ಪಕ್ಷಿಗಳೂ ಜಾತಿ ಬೇಧವಿಲ್ಲದೆ ಅದರೊಂದಿಗೆ ಕೈ ಜೋಡಿಸಿದವು.

ತಮ್ಮ ಪಕ್ಷಿ ಜಾತಿಗೆ ಆಗಿರುವ ಅನ್ಯಾಯವನ್ನು ತಿಳಿದ ಅವರ ರಾಜ ಗರುಡನು ಕೆಳಗಿಳಿದು ದೊಡ್ಡ ಬೆಟ್ಟಗಳನ್ನು ನಿರ್ಮಿಸಿ ಅವುಗಳನ್ನು ಸಮುದ್ರಕ್ಕೆ ಅಡ್ಡಲಾಗಿ ಎಸೆಯತೊಡಗಿದನು. ತನ್ನ ವಾಹನವನ್ನು ಕಾಣದೆ ತಲ್ಲಣಗೊಂಡ ಶ್ರೀಹರಿಯು ಗರುಡನನ್ನು ಏನು ಮಾಡುತ್ತಿದ್ದೀಯಾ ಎಂದು ಕೇಳಿದನು. ಗರುಡನು ನಡೆದ ವಿಷಯ ತಿಳಿಸಿದನು.ಆಗ ಶ್ರೀ ಹರಿಯು ಸಮುದ್ರವನ್ನು ಕರೆದು ಏಕೆ ಈ ರೀತಿ ಮಾಡಿದೆ ಎಂದು ಕೇಳಿದನು. ಸಮುದ್ರ ತಾನು ಬೇಕoತಲೆ ಹೀಗೆ ಮಾಡಲಿಲ್ಲ,ನನ್ನ ವೃತ್ತಿಧರ್ಮ ನಿಭಾಯಿಸಿರುವೆ ಅಷ್ಟೇ ಎಂದನು. ಆಗ ಶ್ರೀಹರಿಯು ಸಮುದ್ರದಿಂದ ಗೂಡುಗಳನ್ನು ಹಿಂದಿರುಗಿಸುವುದಾಗಿ ಹೇಳಿ ಅವುಗಳನ್ನು ಆ ಹಕ್ಕಿಗೆ ವಾಪಾಸು ಕೊಡಿಸಿದನು,ಮತ್ತು ಇನ್ನು ಮುಂದೆ ಸಮುದ್ರದ ಬದಿಯಲ್ಲಿ ಗೂಡು ಕಟ್ಟದೆ ಮರಗಳ ಮೇಲೆ ಗೂಡುಗಳನ್ನು ಕಟ್ಟುವoತೆ ಹಕ್ಕಿಗೆ ತಿಳಿಹೇಳಿ ಗರುಡನೊಂದಿಗೆ ವೈಕುಂಠವನ್ನು ತಲುಪಿದನು.

ನೀತಿ:- ಒಂದು ದೊಡ್ಡ ಕಾರ್ಯಕ್ಕೆ ಹಕ್ಕಿ ಹೆದರಲಿಲ್ಲ. ತನ್ನ ಇಚ್ಛಾಶಕ್ತಿಯಿಂದ ಪಕ್ಷಿಗಳ ರಾಜನಾದ ಗರುಡನು ಸೇರಿದಂತೆ ತಮ್ಮ ಸಂಘಟಿತ,ಸಂಯೋಜಿತ ಶಕ್ತಿಯಿಂದ ಕೆಳಗಿರುವ ಸಾಗರವನ್ನು ಮತ್ತು ಮೇಲಿನ ಶ್ರೀಹರಿಯನ್ನು ಚಲಿಸುವಂತೆ ಮಾಡಿತು.

ನಾವಿಲ್ಲಿ ಅರಿಯಬೇಕಾದುದು ಇಸ್ಟೆ,,
ಯಾವುದೇ ಪ್ರಯಾಣವು ಒಂದೇ ಹೆಜ್ಜೆಯಿಂದ ಪ್ರಾರಂಭವಾಗುವುದು, ಯಾವುದೇ ಮಹತ್ತರವಾದ ಕೆಲಸವನ್ನು ಧೈರ್ಯ,ಆತ್ಮವಿಶ್ವಾಸದಿಂದ ಪ್ರಾರಂಭಿಸಬೇಕು. ಝಾನ್ಸಿ ಲಕ್ಷ್ಮೀಬಾಯಿಯಂತ ಮಹಿಳೆಯಿಂದ ಪ್ರಾರಂಭವಾದ ಸ್ವಾತಂತ್ರ್ಯ ಚಳುವಳಿಯು ಯಶಸ್ವಿಯಾಗಿ ಮುಂದುವರೆದು ಈ ದೇಶದಿಂದ ಬಿಳಿಯರನ್ನು ಹೊರ ಓಡಿಸಿತು. ಅವಳು ತನ್ನ ಕಷ್ಟದ ಫಲವನ್ನು ಆನಂದಿಸಲು ಸಾಧ್ಯವಾಗಿಲ್ಲದಿರಬಹುದು.ಆದರೆ ಇಡೀ ದೇಶವೇ ಅನುಭವಿಸುತ್ತಿದೆ!

sampige vaasu

~ಸಂಪಿಗೆ ವಾಸು, ಬಳ್ಳಾರಿ

Copyright © All rights reserved Newsnap | Newsever by AF themes.
error: Content is protected !!