ಮೈಸೂರು: ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಸಿಬ್ಬಂದಿ ಸುರಕ್ಷತೆಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ.
ಚಿರತೆಯ ಓಡಾಟ ಹಿನ್ನಲೆ ಮುನ್ನೆಚ್ಚರಿಕೆ ಕ್ರಮವಾಗಿ ಕ್ಯಾಂಪಸ್‌ಗೆ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ಇನ್ಫೋಸಿಸ್ ಹ್ಯೂಮನ್ ರಿಸೊರ್ಸ್ ವಿಭಾಗದಿಂದ ಎಲ್ಲಾ ಸಿಬ್ಬಂದಿಗೆ ಮನೆಯಲ್ಲಿಯೇ ಕೆಲಸ ನಿರ್ವಹಿಸಲು ಸೂಚನೆ ನೀಡಲಾಗಿದೆ.
ಇಂದು ಬೆಳಗಿನ ಜಾವ ಚಿರತೆ ಕ್ಯಾಂಪಸ್‌ನಲ್ಲಿನ ಸಿಸಿ ಕ್ಯಾಮೆರಾಗಳಲ್ಲಿ ಸೆರೆಹಿಡಿಯಲ್ಪಟ್ಟಿದ್ದು, ಅದರ ಚಲನವಲನಗಳನ್ನು ಗಮನಿಸಲಾಗುತ್ತಿದೆ. ಇದರಿಂದಾಗಿ ಯಾವುದೇ ಬಿಕ್ಕಟ್ಟು ಉಂಟಾಗುವ ಮುನ್ನ ಅಗತ್ಯ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.ಇದನ್ನು ಓದಿ –ಅಪ್ಪನ ಅಕ್ಕರೆ ಮತ್ತು ತ್ಯಾಗ: ಮಗನ ನೆನಪಿನಲ್ಲಿ ಉಳಿದ ಅನನ್ಯ ಕಥೆ
ಇನ್ಫೋಸಿಸ್ ಕ್ಯಾಂಪಸ್‌ನೊಳಗೆ ಯಾರನ್ನೂ ಪ್ರವೇಶಿಸಲು ಬಿಡಲಾಗುವುದಿಲ್ಲ ಎಂದು ಆದೇಶ ಹೊರಡಿಸಿದೆ.
More Stories
ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 6 ಜನರ ಮೃತದೇಹ ಪತ್ತೆ
ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ: DYSP ವಿರುದ್ಧ ಗಂಭೀರ ಆರೋಪ
ಐಶ್ವರ್ಯ ಗೌಡ ಪ್ರಕರಣ: ಸರ್ಕಾರದ ವಿರುದ್ಧ ಹೆಚ್ಡಿಕೆ ವಾಗ್ದಾಳಿ