ದಕ್ಷಿಣ ಕೊರಿಯಾದ ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೀಕರ ವಿಮಾನ ದುರಂತ ಸಂಭವಿಸಿದೆ. ಈ ದುರಂತದಲ್ಲಿ ಜೆಜು ಏರ್ ಫ್ಲೈಟ್‌ನ 179 ಪ್ರಯಾಣಿಕರು ದುರಂತ ಸಾವಿಗೀಡಾಗಿದ್ದಾರೆ. ಘಟನೆ ಭಾನುವಾರ, ಡಿಸೆಂಬರ್ 29ರಂದು ಮುಂಜಾನೆ ನಡೆದಿದ್ದು, ದಕ್ಷಿಣ ಕೊರಿಯಾದ ಇತಿಹಾಸದಲ್ಲೇ ಮಾರಕವಾದ ವಿಮಾನ ಪತನಗಳಲ್ಲಿ ಇದೂ ಒಂದು.
ಘಟನೆ ವಿವರಗಳು
ಬೋಯಿಂಗ್ 737-800 ಮಾದರಿಯ ವಿಮಾನವು ರನ್‌ವೇಯಲ್ಲಿ ಸ್ಕಿಡ್ ಆಗಿ ವೇಗವಾಗಿ ಗಾರ್ಡ್‌ರೈಲ್‌ಗೆ ಡಿಕ್ಕಿಯಾಗಿ, ತಕ್ಷಣವೇ ಬೆಂಕಿ ಹೊತ್ತಿಕೊಂಡಿತು. ಈ ಪರಿಣಾಮ ಇಡೀ ವಿಮಾನವು ಸುಟ್ಟು ಕರಕಿತು. ಸ್ಥಳದಲ್ಲಿ ಆಘಾತಕಾರಿ ದೃಶ್ಯಗಳು ಕಂಡುಬಂದಿದ್ದು, ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ರಕ್ಷಣೆ: ಈ ದುರಂತದಲ್ಲಿ ಇಬ್ಬರನ್ನು ರಕ್ಷಿಸಲಾಗಿದ್ದು, ಪ್ರಯಾಣಿಕ ಮತ್ತು ಇನ್ನೊಬ್ಬ ಸಿಬ್ಬಂದಿ ಮಾತ್ರ ಬದುಕುಳಿದಿದ್ದಾರೆ. ವಿಮಾನದಲ್ಲಿ ಒಟ್ಟು 175 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಇದ್ದರು.
ಲ್ಯಾಂಡಿಂಗ್ ಗೇರ್ ವೈಫಲ್ಯದ ಹಿನ್ನೆಲೆ
ಅಪಘಾತಕ್ಕೆ ಲ್ಯಾಂಡಿಂಗ್ ಗೇರ್ ವೈಫಲ್ಯ ಮುಖ್ಯ ಕಾರಣವೆಂದು ಶಂಕಿಸಲಾಗಿದೆ. ಲ್ಯಾಂಡಿಂಗ್ ಗೇರ್ ತೆರೆಯದ ಕಾರಣ ಪೈಲಟ್ ಬೆಲ್ಲಿ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದರು. ಅಂದರೆ, ವಿಮಾನದ ಅಡಿಭಾಗ ರನ್‌ವೇಯ ಮೇಲೆ ಉಜ್ಜಿಕೊಂಡು ಸಾಗಿತು. ಬಳಿಕ, ನಿಯಂತ್ರಣ ತಪ್ಪಿ ಗಾರ್ಡ್‌ರೈಲ್‌ಗೆ ಡಿಕ್ಕಿಯಾಯಿತು.
ಅಧಿಕಾರಿಗಳ ಪ್ರಕಾರ, ವಿಮಾನಕ್ಕೆ ಪಕ್ಷಿಗಳ ಹಿಂಡು ಡಿಕ್ಕಿ ಹೊಡೆದಿದ್ದೇ ತಾಂತ್ರಿಕ ದೋಷಗಳ ಸರಮಾಲೆಗೆ ಕಾರಣವಾಗಬಹುದು ಎಂದು ಶಂಕಿಸಲಾಗಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.
ಅಗ್ನಿಶಾಮಕ ಮತ್ತು ಹವಾಮಾನದ ಕಾರಣ
ಮುವಾನ್ ಅಗ್ನಿಶಾಮಕ ಕೇಂದ್ರದ ಮುಖ್ಯಸ್ಥ ಲೀ ಜಿಯೋಂಗ್-ಹ್ಯುನ್, ದುರಂತಕ್ಕೆ ಕೆಟ್ಟ ಹವಾಮಾನವೂ ಸಹ ಕಾರಣವಾಗಿದೆ ಎಂದು ತಿಳಿಸಿದ್ದಾರೆ. ಬೆಲ್ಲಿ ಲ್ಯಾಂಡಿಂಗ್‌ಗಿಂತ ಮೊದಲು ಅಗ್ನಿಶಾಮಕ ದಳ ಸ್ಥಳದಲ್ಲಿಲ್ಲದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಕೋಪಕ್ಕೆ ಕಾರಣವಾಗಿದೆ. 3 ಕಿ.ಮೀ.ಗಿಂತ ಕಡಿಮೆ ಇರುವ ರನ್‌ವೇಯಲ್ಲಿ ಬೆಲ್ಲಿಯ ಲ್ಯಾಂಡಿಂಗ್ ನಡೆದು ಅಗ್ನಿಶಾಮಕ ದಳ ದುರಂತ ಸ್ಥಳಕ್ಕೆ ತಡವಾಗಿ ತಲುಪಿದೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಪ್ರಯಾಣಿಕರ ಮಾಹಿತಿ
- ಪ್ರಯಾಣಿಕರು: 173 ಮಂದಿ ದಕ್ಷಿಣ ಕೊರಿಯನ್ನರು, 2 ಥಾಯ್ ಪ್ರಜೆಗಳು
- ಸಿಬ್ಬಂದಿ: 6 ಜನ
- ಬದುಕುಳಿದವರು: 2 ಜನ (ಒಬ್ಬ ಪ್ರಯಾಣಿಕ ಮತ್ತು ಒಬ್ಬ ಸಿಬ್ಬಂದಿ)
ವಿಮಾನ ಸಂಸ್ಥೆ ಕ್ಷಮೆಯಾಚನೆ
ಈ ದುರಂತಕ್ಕೆ ಸಂಬಂಧಿಸಿದಂತೆ ಜೆಜು ಏರ್ ಸಂಸ್ಥೆ ಸಾರ್ವಜನಿಕ ಕ್ಷಮೆಯಾಚನೆ ಮಾಡಿದ್ದು, ಘಟನೆಗೆ ನಿಖರ ಕಾರಣಗಳನ್ನು ಪತ್ತೆಹಚ್ಚಲು ಜಂಟಿ ತನಿಖೆ ನಡೆಯುತ್ತಿದೆ ಎಂದು ತಿಳಿಸಿದೆ.ಇದನ್ನು ಓದಿ –2025ನೇ ಸಾಲಿನ ರೈಲ್ವೆ ಗ್ರೂಪ್-ಡಿ ಹುದ್ದೆಗಳಿಗೆ 32,000ಕ್ಕೂ ಹೆಚ್ಚು ನೇಮಕಾತಿ
ಮುನ್ಸೂಚನೆ ಇಲ್ಲದ ಈ ದುರಂತವು ಹಲವರ ಹೃದಯವಿಗಲಿಸಿದೆ. ಜನತೆ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
More Stories
ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ: DYSP ವಿರುದ್ಧ ಗಂಭೀರ ಆರೋಪ
ಐಶ್ವರ್ಯ ಗೌಡ ಪ್ರಕರಣ: ಸರ್ಕಾರದ ವಿರುದ್ಧ ಹೆಚ್ಡಿಕೆ ವಾಗ್ದಾಳಿ
ಸಾರಿಗೆ ನೌಕರರಿಗೆ ಸರ್ಕಾರದ ಭರವಸೆ: 2 ಸಾವಿರ ಕೋಟಿ PF ನಿಧಿ ಬಿಡುಗಡೆ