December 27, 2024

Newsnap Kannada

The World at your finger tips!

cylinder

ಸಿಲಿಂಡರ್ ಸ್ಫೋಟ ಪ್ರಕರಣ: ಇಬ್ಬರು ಅಯ್ಯಪ್ಪ ಮಾಲಾಧಾರಿಗಳ ದುರ್ಮರಣ

Spread the love

ಹುಬ್ಬಳ್ಳಿ: ಮಲಗಿದ್ದ ಸಮಯದಲ್ಲಿ ಸಂಭವಿಸಿದ ಸಿಲಿಂಡರ್ ಸ್ಫೋಟದಲ್ಲಿ (Cylinder Blast) ಗಾಯಗೊಂಡ 9 ಅಯ್ಯಪ್ಪ ಮಾಲಾಧಾರಿಗಳಲ್ಲಿ (Ayyappa Devotees) ಇಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ದುರ್ದೈವ ನಡೆದಿದ್ದು, ಇದು ಎಲ್ಲರನ್ನು ದುಃಖಿಗೊಳಿಸಿದೆ.

ಮೃತರು ನಿಜಲಿಂಗಪ್ಪ ಮಲ್ಲಪ್ಪ ಬೇಪೂರು (58) ಮತ್ತು ಸಂಜಯ್ ಪ್ರಕಾಶ್ ಸವದತ್ತಿ (17) ಎಂದು ಗುರುತಿಸಲಾಗಿದೆ. ಹುಬ್ಬಳ್ಳಿಯ ಅಚ್ಚವನ ಕಾಲೋನಿಯ ಈಶ್ವರ ದೇವಾಲಯದಲ್ಲಿ ಮೂರು ದಿನಗಳ ಹಿಂದೆ ಗ್ಯಾಸ್ ಸಿಲಿಂಡರ್‌ನಿಂದ ಗ್ಯಾಸ್ ಸೋರಿಕೆಯಾಗಿ ಬೆಂಕಿ ಅವಘಡ ಸಂಭವಿಸಿತ್ತು.

ಘಟನೆಯ ಪರಿಣಾಮವಾಗಿ ಒಂಬತ್ತು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಗಾಯಾಳುಗಳಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಕಳೆದ ಮೂರು ದಿನಗಳಿಂದ ಚಿಕಿತ್ಸೆಯಲ್ಲಿದ್ದ ಇಬ್ಬರು ಇಂದು ಕೊನೆಯುಸಿರೆಳೆದಿದ್ದಾರೆ.

ಕುಟುಂಬಸ್ಥರ ಆಕ್ರಂದನ:
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ಮೃತರ ಸಂಬಂಧಿಕರು ಮತ್ತು ಅಯ್ಯಪ್ಪ ಮಾಲಾಧಾರಿಗಳು ಸೇರಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ದುರ್ಘಟನೆಯಲ್ಲಿ ಮನೆ ಮಕ್ಕಳನ್ನು ಕಳೆದುಕೊಂಡು ಕುಟುಂಬಗಳು ದಿಗ್ಭ್ರಮೆಯಲ್ಲಿವೆ.ಇದನ್ನು ಓದಿ –ಸಂಸತ್‌ ಭವನದ ಬಳಿಯ ದಾರುಣ ಘಟನೆ: ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ

ಈ ಘಟನೆ ಸ್ಥಳೀಯರಲ್ಲಿ ಭಾರೀ ಬೇಸರವನ್ನು ಉಂಟುಮಾಡಿದೆ, ಮತ್ತು ಗಾಯಗೊಂಡ ಇತರರ ತಕ್ಷಣದ ಚೇತರಿಕೆಗಾಗಿ ಪ್ರಾರ್ಥನೆಗಳು ನಡೆಯುತ್ತಿವೆ.

Copyright © All rights reserved Newsnap | Newsever by AF themes.
error: Content is protected !!