ಬೆಂಗಳೂರು: ಯೂಟ್ಯೂಬ್‌ನಿಂದ ಜಗತ್ತಿನಾದ್ಯಂತ ಎನನ್ನು ಬೇಕಾದರೂ ಕಲಿಯಬಹುದು. ಆದರೆ ಬೈಕ್ ಕಳವು ಮಾಡುವ ತರಬೇತಿ ಪಡೆದು ಕಳ್ಳತನ ಮಾಡುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಯೂಟ್ಯೂಬ್ ಮೂಲಕ ಬೈಕ್ ಕಳ್ಳತನ ಮಾಡುವುದನ್ನು ಕಲಿತು, ಕೃತ್ಯದಲ್ಲಿ ತೊಡಗಿದ್ದ ಇಬ್ಬರು ಯುವಕರನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ.
13 ಲಕ್ಷ ಮೌಲ್ಯದ 20 ಬೈಕ್‌ಗಳು ವಶಕ್ಕೆ
ಬಂಧಿತರಿಂದ 13 ಲಕ್ಷ ಮೌಲ್ಯದ 20 ಬೈಕ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಯುವಕರು ಯೂಟ್ಯೂಬ್ ಮೂಲಕ ಬೈಕ್ ಕೀ ಮುರಿಯುವುದು ಮತ್ತು ಸ್ಟಾರ್ಟ್ ಮಾಡುವ ವಿಧಾನವನ್ನು ಕಲಿತು ನಗರದೆಲ್ಲೆಡೆ ಕಳ್ಳತನ ಮಾಡಿದ್ದಾರೆ.ಇದನ್ನು ಓದಿ –ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ
ನಗರದಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳು
ನಿರಂತರವಾಗಿ ನಗರದಲ್ಲಿ ಬೈಕ್ ಕಳ್ಳತನ ಪ್ರಕರಣಗಳು ದಾಖಲಾಗುತ್ತಿದ್ದ ಕಾರಣ, ಪೊಲೀಸರು ವಿಶೇಷ ತಂಡ ರಚನೆ ಮಾಡಿದ್ದರು. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. 20 ಕ್ಕೂ ಹೆಚ್ಚು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತಷ್ಟು ಬೈಕ್ ಕಳ್ಳತನ ಪ್ರಕರಣಗಳ ಕುರಿತು ತನಿಖೆ ನಡೆಯುತ್ತಿದೆ.
More Stories
ಬಿಜೆಪಿ ಪರಿಷತ್ ಸದಸ್ಯ ಸಿ.ಟಿ. ರವಿ ಬಿಡುಗಡೆ: ಹೈಕೋರ್ಟ್ ತಕ್ಷಣ ಬಿಡುಗಡೆಗೆ ಆದೇಶ
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ
ಸಿ.ಟಿ. ರವಿ ಮೇಲೆ ಹಲ್ಲೆ: ಕೊಲೆಗೆ ಸಂಚು ರೂಪಿಸಿದ್ದಾರೆಂದು ಆರೋಪ