ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಪಡೆದ 14 ನಿವೇಶನ ಪ್ರಕರಣದಲ್ಲಿ ಹೊಸ ತಿರುವು ಬಂದಿದೆ.
ಈ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ, ತಮ್ಮ ಹೋರಾಟ ನಿಲ್ಲಿಸಲು ಹಣಕಾಸಿನ ಆಮಿಷ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಆಮಿಷದ ಆರೋಪದ ವಿವರ:
ಸಿಎಂ ಪತ್ನಿ ಪಾರ್ವತಿ ಅವರ ಆಪ್ತ ಸಹಾಯಕನ ಹೆಸರಿನಲ್ಲಿ ದೂರು ಹಿಂಪಡೆಯಲು ಆಮಿಷ ಒಡ್ಡಲಾಗಿದೆ ಎಂದು ಸ್ನೇಹಮಯಿ ಕೃಷ್ಣ ತಿಳಿಸಿದ್ದಾರೆ. ಸಿಬಿಐ ತನಿಖೆಗೆ ಸಲ್ಲಿಸಿದ ಅರ್ಜಿಯನ್ನು ವಾಪಸ್ ಪಡೆಯಲು, ಪತ್ರಕರ್ತನೊಬ್ಬನ ಮೂಲಕ ಹಣಕಾಸಿನ ಒತ್ತಡ ಹೇರಲಾಗಿದೆ. ಸ್ನೇಹಮಯಿ ಕೃಷ್ಣ ಈ ಆಮಿಷವನ್ನು ತಿರಸ್ಕರಿಸಿರುವುದರಿಂದ, ಅವರ ಮೇಲೆ ಮತ್ತು ಅವರ ಮಗನ ಮೇಲೆ ಒತ್ತಡ ತರಲು ಪ್ರಯತ್ನಿಸಲಾಗಿದೆ.
ಕುರಿತವರ ವಿರುದ್ಧ ದೂರು:
ಬಿಜೆಪಿ ಮುಖಂಡ ಹರ್ಷ, ಪಾರ್ವತಿ ಸಿದ್ದರಾಮಯ್ಯ ಅವರ ಆಪ್ತ ಸಹಾಯಕ ಎಂದು ಪರಿಚಯಿಸಿಕೊಂಡು, ಮೈಸೂರಿನ ಸ್ಥಳೀಯ ಪತ್ರಕರ್ತ ಶ್ರೀನಿಧಿಯೊಂದಿಗೆ ಸ್ನೇಹಮಯಿ ಕೃಷ್ಣರನ್ನು ಭೇಟಿಯಾಗಿದ್ದಾರೆ. ಈ ಭೇಟಿಯಲ್ಲಿ, “ಸಿಬಿಐ ತನಿಖೆ ನಮಗೆ ಸಮಸ್ಯೆಯಾಗುತ್ತದೆ, ನಿಮಗೆ ಬೇಕಾದಷ್ಟು ಹಣ ನೀಡುತ್ತೇವೆ” ಎಂದು ಹೇಳಲಾಗಿದೆ ಎಂದು ಸ್ನೇಹಮಯಿ ಆರೋಪಿಸಿದ್ದಾರೆ. ಸ್ನೇಹಮಯಿ ಈ ಕುರಿತು ಸಿಸಿಟಿವಿ ದೃಶ್ಯಗಳು ಮತ್ತು ಫೋನ್ ಕರೆಗಳ ಸಾಕ್ಷಿಗಳನ್ನು ಒದಗಿಸಿದ್ದಾರೆ.
ಹಣದ ಆಮಿಷದ ಗಂಭೀರ ಆರೋಪ :
ಡಿ.13 ರಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬಳಿ ಸ್ನೇಹಮಯಿ ಅವರನ್ನು ಭೇಟಿ ಮಾಡಿದ ಹರ್ಷ ಮತ್ತು ಶ್ರೀನಿಧಿ, “ಪಾರ್ವತಮ್ಮ ಮಾನಸಿಕವಾಗಿ ನೊಂದಿದ್ದಾರೆ. ಸಿಬಿಐ ತನಿಖೆ ಅರ್ಜಿ ವಾಪಸ್ ಪಡೆಯಿರಿ” ಎಂದು ಒತ್ತಾಯಿಸಿದ್ದಾರೆ. ಡಿ.15 ರಂದು ಸ್ನೇಹಮಯಿ ಅವರ ಮನೆಗೆ ತೆರಳಿ, ಅವರ ಮಗನ ಬಳಿ ಹಣದ ಆಮಿಷವನ್ನು ಪ್ರಸ್ತಾಪಿಸಿದ್ದಾರೆ. “ಇನ್ನೊಬ್ಬ ಹೋರಾಟಗಾರನಿಗೆ ₹3 ಕೋಟಿ ಮಾತುಕತೆ ಮಾಡಿ ₹1.5 ಕೋಟಿ ನೀಡಿದ್ದೇವೆ” ಎಂದು ಹರ್ಷ ಹಣದ ಬ್ಯಾಗ್ ತೋರಿಸಿದ್ದಾಗಿ ದೂರು ಉಲ್ಲೇಖಿಸುತ್ತದೆ.ಇದನ್ನು ಓದಿ –ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ರವಿಚಂದ್ರನ್ ಅಶ್ವಿನ್ ದಿಢೀರ್ ವಿದಾಯ
ಈ ಹಗರಣದಿಂದ ಸಿಎಂ ಮತ್ತು ಅವರ ಕುಟುಂಬ ತೀವ್ರ ವಿವಾದಕ್ಕೆ ಒಳಗಾಗಿದ್ದು, ಈ ಪ್ರಕರಣವು ಇನ್ನಷ್ಟು ಚರ್ಚೆಗೆ ಗ್ರಾಸವಾಗಿದೆ.
More Stories
ಬೊಲೆರೋ ಡಿಕ್ಕಿಯಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ
ಗೃಹಲಕ್ಷ್ಮಿ ಯೋಜನೆ ಸ್ಥಗಿತ ಮಾಡುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇತಿಹಾಸ ಸೃಷ್ಟಿಸಲಿದೆ: ಸಚಿವ ಚಲುವರಾಯಸ್ವಾಮಿ