December 18, 2024

Newsnap Kannada

The World at your finger tips!

WhatsApp Image 2024 12 17 at 1.05.37 PM

ಒಂದು ದೇಶ, ಒಂದು ಚುನಾವಣೆ ಮಸೂದೆ ಲೋಕಸಭೆಯಲ್ಲಿ ಮಂಡನೆ

Spread the love

ವಿರೋಧ ಪಕ್ಷಗಳ ತೀವ್ರ ಆಕ್ಷೇಪ

ನವದೆಹಲಿ: ಬಿಜೆಪಿ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದಂತೆ, ದೇಶದಾದ್ಯಂತ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯನ್ನು ಏಕಕಾಲದಲ್ಲಿ ನಡೆಸಲು ಅನುಮತಿ ನೀಡುವ “ಒಂದು ದೇಶ, ಒಂದು ಚುನಾವಣೆ” (One Nation One Election) ಮಸೂದೆ ಇಂದು ಲೋಕಸಭೆಯಲ್ಲಿ ಮಂಡನೆಯಾಗಿದೆ.

ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಇಂದು ಸಂವಿಧಾನ (121ನೇ ತಿದ್ದುಪಡಿ) ಮಸೂದೆ, 2024 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದರು.

ಮಸೂದೆ ಮಂಡನೆಯ ಬೆನ್ನಲ್ಲೇ INDIA ಒಕ್ಕೂಟದ ಸದಸ್ಯರು ಭಾರೀ ವಿರೋಧ ವ್ಯಕ್ತಪಡಿಸಿದರು. ಕಾಂಗ್ರೆಸ್ ಸಂಸದ ಮನೀಶ್ ತಿವಾರಿ, “ಕೇಂದ್ರ ಮತ್ತು ರಾಜ್ಯಗಳ ಅವಧಿಯನ್ನು ಏಕಕಾಲದಲ್ಲಿ ಹೇಗೆ ಮಾಡಬಹುದು? ಭಾರತ ಒಕ್ಕೂಟ ದೇಶ; ಇಂಥ ಕೇಂದ್ರೀಕರಣ ಸರಿಯಲ್ಲ. ಇದು ಸಂವಿಧಾನದ ವಿರೋಧಿ ತಿದ್ದುಪಡಿ” ಎಂದು ಟೀಕಿಸಿದರು.

“ಎಲ್ಲಾ ರಾಜ್ಯಗಳು ವೈವಿಧ್ಯತೆ ಹೊಂದಿವೆ. ಒಕ್ಕೂಟ ವ್ಯವಸ್ಥೆಯು ಇದನ್ನು ಗಮನದಲ್ಲಿಟ್ಟುಕೊಂಡು ರೂಪುಗೊಂಡಿದೆ. ಕೆಲವೇ ರಾಜ್ಯಗಳಲ್ಲಿ ಒಟ್ಟಿಗೆ ವಿಧಾನಸಭೆ ಚುನಾವಣೆ ನಡೆಸಲು ಸಾಧ್ಯವಾಗಿಲ್ಲ. ಇಡೀ ದೇಶದಲ್ಲಿ ಒಂದೇ ಸಮಯದಲ್ಲಿ ಚುನಾವಣೆಯನ್ನು ಹೇಗೆ ನಡೆಸುತ್ತೀರಿ?” ಎಂದು ಎಸ್‌ಪಿ ಸಂಸದ ಧರ್ಮೇಂದ್ರ ಯಾದವ್ ಆಕ್ಷೇಪಿಸಿದರು.

ಮಸೂದೆ ಮಂಡನೆಯ ಹಿನ್ನೆಲೆ, ಬಿಜೆಪಿಯು ಮತ್ತು ಎನ್‌ಡಿಎ ಮಿತ್ರಪಕ್ಷಗಳು, ಕಾಂಗ್ರೆಸ್ ಮತ್ತು ಟಿಡಿಪಿ ಸೇರಿದಂತೆ, ತಮ್ಮ ಸದಸ್ಯರಿಗೆ ವಿಪ್‌ ಜಾರಿ ಮಾಡಿವೆ.ಇದನ್ನು ಓದಿ –ಭೀಕರ ದುರಂತ: ಲಾರಿ ಪಲ್ಟಿಯಾಗಿ ಮೂವರು PWD ಅಧಿಕಾರಿಗಳ ಸಾವು

ಈ ಮಸೂದೆ ಮಂಡನೆಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಚರ್ಚೆ ಮತ್ತು ತೀವ್ರ ಪ್ರತಿಪಕ್ಷಗಳ ವಿರೋಧದ ನಿರೀಕ್ಷೆ ವ್ಯಕ್ತವಾಗಿದೆ.

Copyright © All rights reserved Newsnap | Newsever by AF themes.
error: Content is protected !!