ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಕ್ಲರಿಕಲ್ ಕೇಡರ್ನಲ್ಲಿ ಖಾಲಿ ಇರುವ ಜೂನಿಯರ್ ಅಸೋಸಿಯೇಟ್ (ಕಸ್ಟಮರ್ ಸಪೋರ್ಟ್ & ಸೇಲ್ಸ್) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.
ಈ ಹುದ್ದೆಗಳಿಗೆ ಆಸಕ್ತರು ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಓದಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಶುಲ್ಕ:
- ಸಾಮಾನ್ಯ/ ಓಬಿಸಿ/ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ: ₹750
- ಎಸ್ಸಿ / ಎಸ್ಟಿ / ಪಿಡಬ್ಲ್ಯೂಬಿಡಿ / ಇಎಸ್ಎಂ / ಡಿಇಎಸ್ಎಂ: ಶುಲ್ಕವಿಲ್ಲ
- ಪಾವತಿ ವಿಧಾನ: ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಆನ್ಲೈನ್ ಪಾವತಿ.
ಪ್ರಮುಖ ದಿನಾಂಕಗಳು:
- ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 17-12-2024
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07-01-2025
- ಪ್ರಿಲಿಮಿನರಿ ಪರೀಕ್ಷೆ (ತಾತ್ಕಾಲಿಕ): ಫೆಬ್ರವರಿ 2025
- ಮುಖ್ಯ ಪರೀಕ್ಷೆಯ ದಿನಾಂಕ: ಮಾರ್ಚ್ / ಏಪ್ರಿಲ್ 2025
ವಯಸ್ಸಿನ ಮಿತಿ (01-04-2024 ರಂತೆ):
- ಕನಿಷ್ಠ ವಯಸ್ಸು: 20 ವರ್ಷಗಳು
- ಗರಿಷ್ಠ ವಯಸ್ಸು: 28 ವರ್ಷಗಳು
(ಅಂದರೆ, ಅಭ್ಯರ್ಥಿಗಳು 02.04.1996 ಕ್ಕಿಂತ ಮೊದಲು ಮತ್ತು 01.04.2004 ನಂತರ ಜನಿಸಿರಬಾರದು. ಎರಡೂ ದಿನಗಳನ್ನು ಒಳಗೊಂಡಂತೆ). - ವಯಸ್ಸಿನ ಸಡಿಲಿಕೆ ಸರ್ಕಾರದ ನಿಯಮಗಳ ಪ್ರಕಾರ ಅನ್ವಯಿಸುತ್ತದೆ.
ಅರ್ಹತಾ ಮಾನದಂಡ:
- ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಾಸಾಗಿರಬೇಕು.
ಇದನ್ನು ಓದಿ – ಪವಿತ್ರಾ ಗೌಡ ಹಾಗೂ ಮತ್ತೊಬ್ಬ ಆರೋಪಿ ಜೈಲಿನಿಂದ ಬಿಡುಗಡೆ
ಹುದ್ದೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಓದುವುದು ಸೂಕ್ತ.
More Stories
ಸಿಎಂ ಪತ್ನಿಯ ನಿವೇಶನ ಹಗರಣ: ದೂರು ಹಿಂಪಡೆಯಲು ಆಮಿಷ ನೀಡಿದ ಆರೋಪ
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ರವಿಚಂದ್ರನ್ ಅಶ್ವಿನ್ ದಿಢೀರ್ ವಿದಾಯ
ಎಲ್ಲಾ ಶಾಸಕರ ಕ್ಷೇತ್ರಗಳಿಗೆ ₹2,000 ಕೋಟಿ ಅನುದಾನ: ಸಿಎಂ ಸಿದ್ದರಾಮಯ್ಯ ಘೋಷಣೆ