ಬೆಂಗಳೂರು: ಬೆಂಗಳೂರಿನ ಕೋಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾರುಣ ಘಟನೆ ನಡೆದಿದ್ದು , 35 ವರ್ಷದ ಕುಸುಮ ಎಂಬ ತಾಯಿ, ಮನಸ್ಥಾಪಗೊಂಡು ತನ್ನ 6 ವರ್ಷದ ಮಗ ಮತ್ತು 7 ವರ್ಷದ ಮಗಳನ್ನು ಉಸಿರುಗಟ್ಟಿಸಿ ಕೊಂದು, ತಾನೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಘಟನೆಗೆ ಹಿಂದಿನ ಕಾರಣ ಕೌಟುಂಬಿಕ ಕಲಹ ಎಂದು ತಿಳಿದುಬಂದಿದೆ. ಘಟನೆಯ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ “ನಮ್ಮ ಸಾವಿಗೆ ನಾವು ಕಾರಣ” ಎಂದು ಬರೆದಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆಯೇ ಕೋಡಿಗೆಹಳ್ಳಿ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಘಟನೆ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.ಇದನ್ನು ಓದಿ –ಜಾಮೀನು ನೀಡಲು 5 ಲಕ್ಷ ರೂ. ಲಂಚ ಕೇಳಿದ ನ್ಯಾಯಾಧೀಶ ಬಂಧನ
ಈ ದುರ್ಘಟನೆ ಸಾಮಾಜಿಕವಾಗಿ ಆಘಾತ ಮೂಡಿಸಿದೆ. ಪೊಲೀಸ್ ಇಲಾಖೆ ಮುಂದಿನ ತನಿಖೆ ಕೈಗೊಂಡಿದ್ದು, ಘಟನೆಯ ಸಂಪೂರ್ಣ ಕಾರಣಗಳನ್ನು ಹುಡುಕಲು ಪ್ರಯತ್ನಿಸುತ್ತಿದ್ದಾರೆ.
More Stories
ಕೆಪಿಎಸ್ಸಿಯಿಂದ ಮತ್ತೊಂದು ಎಡವಟ್ಟು: ಪಿಡಿಒ ನೇಮಕಾತಿ ಪ್ರಶ್ನೆ ಪತ್ರಿಕೆಯ ಸೀಲ್ ಓಪನ್ ಫೋಟೋ ವೈರಲ್!
ಭಾರತೀಯ ಆಹಾರ ನಿಗಮದಲ್ಲಿ 33,566 ಹುದ್ದೆಗಳಿಗೆ ನೇಮಕಾತಿ
ಜಾಮೀನು ನೀಡಲು 5 ಲಕ್ಷ ರೂ. ಲಂಚ ಕೇಳಿದ ನ್ಯಾಯಾಧೀಶ ಬಂಧನ