December 18, 2024

Newsnap Kannada

The World at your finger tips!

WhatsApp Image 2024 12 06 at 10.43.13 AM

ಬಿಮ್ಸ್‌ ಆಸ್ಪತ್ರೆಯಲ್ಲಿ 5 ಬಾಣಂತಿಯರ ಸಾವು: ಸ್ಫೋಟಕ ವಿಚಾರಗಳು ಬಯಲು, ಪರಿಹಾರ ಘೋಷಿಸಿದ ಸರ್ಕಾರ

Spread the love

ಬಳ್ಳಾರಿ: ಬಳ್ಳಾರಿ ಜಿಲ್ಲಾಸ್ಪತ್ರೆಯ (BIMS) ಐಸಿಯುನಲ್ಲಿ IV ದ್ರಾವಣ ನೀಡಿದ ನಂತರ ಐದು ಬಾಣಂತಿಯರು ಮೃತಪಟ್ಟಿರುವುದು ಆತಂಕ ಹುಟ್ಟಿಸಿರುವ ಸಂಗತಿಯಾಗಿದೆ. ನವೆಂಬರ್ 9ರಂದು ಒಂಬತ್ತು ಗರ್ಭಿಣಿಯರಿಗೆ ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಗಿದ್ದು, ಹೆರಿಗೆ ಬಳಿಕ IV ದ್ರಾವಣ ನೀಡಿದ ಎರಡು ಗಂಟೆಯೊಳಗೆ ಎಲ್ಲರೂ ಅಸ್ವಸ್ಥರಾಗಿದ್ದರು.

ಮೃತರಾದವರು ನಂದಿನಿ, ಲಲಿತಮ್ಮ, ರೋಜಾ, ಮುಸ್ಕಾನ್, ಮತ್ತು ಸುಮಯಾ. ಉಳಿದ ನಾಲ್ವರು ಮಹಿಳೆಯರು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬಾಣಂತಿಯರಲ್ಲಿ ಏಳು ಮಂದಿ ಕಿಡ್ನಿ ವೈಫಲ್ಯ ಮತ್ತು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಬಿಮ್ಸ್‌ನಲ್ಲಿ ನಡೆಸಿದ ಪರೀಕ್ಷೆಯಲ್ಲಿ ಮೂವರಿಗೆ ಇಲಿ ಜ್ವರ ಪತ್ತೆಯಾಗಿದೆ.

ಇಲಿ ಜ್ವರದಿಂದ ಬಳಲುತ್ತಿದ್ದ 25 ವರ್ಷದ ಸುಮಯಾ ಡಿಸೆಂಬರ್ 5ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಎಲ್ಲ ಮೃತರು 25 ವರ್ಷ ವಯಸ್ಸಿನ ಒಳಗಿನವರಾಗಿದ್ದು, ಇದು ಕುಟುಂಬಗಳಿಗೆ ತೀವ್ರ ಆಘಾತವನ್ನುಂಟು ಮಾಡಿದೆ.

ಆರೋಗ್ಯ ಸಚಿವರ ಪ್ರತಿಕ್ರಿಯೆ:
ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಈ ಘಟನೆ ಕುರಿತು ಮಾತನಾಡಿ, “ಆಸ್ಪತ್ರೆಯಲ್ಲಿ ಏನೆಲ್ಲಾ ತಪ್ಪುಗಳು ನಡೆದಿವೆ ಎಂಬುದರ ಕುರಿತು ಸಮಗ್ರ ತನಿಖೆ ನಡೆಸಲಾಗುತ್ತಿದೆ. IV ದ್ರಾವಣ ತಯಾರಿಸಿದ ಕಂಪನಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮೃತರ ಕುಟುಂಬಗಳಿಗೆ ಪರಿಹಾರವನ್ನು ಘೋಷಿಸಿದ್ದೇವೆ. ಇಂತಹ ಘಟನೆಗಳು ಪುನಃ ಸಂಭವಿಸದಂತೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ,” ಎಂದು ಭರವಸೆ ನೀಡಿದರು.ಇದನ್ನು ಓದಿ –ಮುಡಾ ಹಗರಣ: 13 ವರ್ಷಗಳಲ್ಲಿ 4,921 ಸೈಟ್‌ಗಳ ವಂಚನೆ

ಇತ್ತೀಚಿನ ಈ ಘಟನೆ ವೈದ್ಯಕೀಯ ವ್ಯವಸ್ಥೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದು, ಸರ್ಕಾರದ ತ್ವರಿತ ಕ್ರಮಗಳಿಗೆ ಅನೇಕರು ಕಣ್ತೋಪವಿಟ್ಟು ನೋಡುತ್ತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!