December 18, 2024

Newsnap Kannada

The World at your finger tips!

muda

ಮುಡಾ ಹಗರಣ: 13 ವರ್ಷಗಳಲ್ಲಿ 4,921 ಸೈಟ್‌ಗಳ ವಂಚನೆ

Spread the love

ಬೆಂಗಳೂರು: ಮುಖ್ಯಮಂತ್ರಿ ವಿರುದ್ಧದ ಮುಡಾ ಸಂಬಂಧಿತ ತನಿಖೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಪ್ರಾಥಮಿಕವಾಗಿ 1,095 ಸೈಟ್‌ಗಳಲ್ಲಿ ಅಕ್ರಮ ನಡೆದಿದೆ ಎಂದು ತಿಳಿಸಲಾಗಿತ್ತು. ಆದರೆ, ಇತ್ತೀಚಿನ ತನಿಖಾ ವರದಿ ಪ್ರಕಾರ 4,921 ಸೈಟ್‌ಗಳ ಅಕ್ರಮ ಹಂಚಿಕೆ ನಡೆದಿದೆ ಎಂಬ ಶೋಚನೀಯ ಸತ್ಯ ಹೊರಬಿದ್ದಿದೆ.

50:50 ಅನುಪಾತದ ಮೂಲಕ ಲೇಔಟ್‌ಗಳ ಹಂಚಿಕೆಯ ಅಕ್ರಮ ಮಾತ್ರವಲ್ಲ, 60:40 ಅನುಪಾತದಲ್ಲೂ ಅಕ್ರಮ ನಡೆದಿದ್ದು, ಅದಕ್ಕೆ ಪೂರಕ ದಾಖಲೆ ತಿದ್ದಿದ್ದಾರೆ ಎಂದು ಇ.ಡಿ. ತನಿಖೆಯಲ್ಲಿ ಕಂಡುಬಂದಿದೆ.

ಇದು 700 ಕೋಟಿ ರೂಪಾಯಿಗಳ ಅಕ್ರಮ ಅಲ್ಲ, ಬದಲಾಗಿ 2,800 ಕೋಟಿ ರೂಪಾಯಿಗಳ ಅಕ್ರಮ ಎಂಬ ಶಕ್ತಿ ತುಂಬಿದ ಸತ್ಯವನ್ನು ಇ.ಡಿ. ತನಿಖೆ ಬಿಚ್ಚಿಟ್ಟಿದೆ. 13 ವರ್ಷಗಳ ಅವಧಿಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ 4,921 ಕ್ಕೂ ಹೆಚ್ಚು ಸೈಟ್‌ಗಳನ್ನು ಕಬ್ಜೆ ಮಾಡಲಾಗಿದೆ.

ಅಕ್ರಮ ಸರಮಾಲೆಯ ಹಿಂದಿರುವುದು ಮುಡಾದ ಇಬ್ಬರು ಮಾಜಿ ಆಯುಕ್ತರು ಮತ್ತು ಕೆಲವು ರಿಯಲ್ ಎಸ್ಟೇಟ್ ಉದ್ಯಮಿಗಳು. ಇವರು ಲೇಔಟ್‌ಗಳ ಅನಧಿಕೃತ ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ.ಇದನ್ನು ಓದಿ –ಸಮಾವೇಶಕ್ಕೆ ತೆರಳುತ್ತಿದ್ದ ಸಚಿವ ಕೆ.ಹೆಚ್. ಮುನಿಯಪ್ಪ ಕಾರು ಅಪಘಾತ

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೈಟ್‌ಗಳನ್ನೇ ಮುಡಾ ಕಬ್ಜಾ ಮಾಡಿ, ಕನ್ವರ್ಷನ್ ಲೇಔಟ್‌ಗಳಲ್ಲಿ ಅಕ್ರಮ ನಡೆಸಿರುವುದು ಮತ್ತಷ್ಟು ಪರಿಶೀಲನೆಯಲ್ಲಿ ದೃಢಪಟ್ಟಿದೆ.

Copyright © All rights reserved Newsnap | Newsever by AF themes.
error: Content is protected !!