ಹೈದರಾಬಾದ್: ಬಹುಕಾಲದ ಪ್ರೀತಿಯ ನಂತರ, ತೆಲುಗು ನಟ ನಾಗಚೈತನ್ಯ ಮತ್ತು ನಟಿ ಶೋಭಿತಾ ಧುಲಿಪಾಲಾ ಡಿಸೆಂಬರ್ 4ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮದುವೆ ಡಿಸೆಂಬರ್ 4ರಂದು ರಾತ್ರಿ 8:15ಕ್ಕೆ, ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿರುವ ಅಕ್ಕಿನೇನಿ ನಾಗೇಶ್ವರ ರಾವ್ ಅವರ ಪ್ರತಿಮೆಯ ಮುಂದೆ ನಡೆಯಿತು. ನಾಗಚೈತನ್ಯ ಮತ್ತು ಶೋಭಿತಾ ಸಪ್ತಪದಿ ತುಳಿದು ದಾಂಪತ್ಯ ಜೀವನವನ್ನು ಆರಂಭಿಸಿದರು. ಈ ಮದುವೆಯನ್ನು ತಂದೆ ನಾಗಾರ್ಜುನ ಸಮರ್ಥವಾಗಿ ನಡೆಸಿದರು.
ಮಗನ ಮದುವೆ ಬಗ್ಗೆ ಭಾವುಕರಾದ ನಾಗಾರ್ಜುನ, ಈ ವಿಶೇಷ ಕ್ಷಣದ ಫೋಟೋವನ್ನು ಎಕ್ಸ್ (ಹಳೆಯ ಟ್ವಿಟರ್) ನಲ್ಲಿ ಹಂಚಿಕೊಂಡು, “ಮಗನ ಮದುವೆ ಭಾವನಾತ್ಮಕ ಕ್ಷಣ. ನನ್ನ ಪ್ರೀತಿಯ ಚೈಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ನಮ್ಮ ಕುಟುಂಬಕ್ಕೆ ಸ್ವಾಗತ ಶೋಭಿತಾ. ನೀವು ಇಬ್ಬರೂ ನಮ್ಮ ಜೀವನಕ್ಕೆ ಅಪಾರ ಸಂತೋಷವನ್ನು ತಂದಿದ್ದೀರಿ” ಎಂದು ಬರೆದಿದ್ದಾರೆ.ಇದನ್ನು ಓದಿ –ದೇವೇಂದ್ರ ಫಡ್ನವೀಸ್ ಮತ್ತೆ ಸಿಎಂ, ಶಿಂಧೆ-ಅಜಿತ್ ಪವಾರ್ ಡಿಸಿಎಂ ಆಗಿ ಪ್ರಮಾಣ ವಚನ
ಈ ಮದುವೆಗೆ 400 ಅತಿಥಿಗಳಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಅಲ್ಲು ಅರ್ಜುನ್, ರಾಮ್ ಚರಣ್, ಮಹೇಶ್ ಬಾಬು, ಪ್ರಭಾಸ್, ಎಸ್.ಎಸ್. ರಾಜಮೌಳಿ, ಪಿ.ವಿ. ಸಿಂಧೂ ಸೇರಿದಂತೆ ಅನೇಕ ಗಣ್ಯರು ಹಾಜರಾಗಿ ನವದಂಪತಿಗೆ ಶುಭಾಶಯ ಕೋರಿದರು.


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು