ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಮತ್ತು ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಇದೇ ಡಿ.22 ರಂದು ಉದಯಪುರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.
ಭಾನುವಾರ ಡಿ.01 ರಂದು ಲಕ್ನೋನಲ್ಲಿ ನಡೆದ 2024ರ ಸೈಯದ್ ಮೋದಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಸಿಂಧು, ಹೈದರಾಬಾದ್ ಮೂಲದ ಪೋಸಿಡೆಕ್ಸ್ ಟೆಕ್ನಾಲಜೀಸ್ ಖಾಸಗಿ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ವೆಂಕಟ ದತ್ತ ಸಾಯಿಯನ್ನು ವಿವಾಹವಾಗಲಿದ್ದಾರೆ.
ಈ ಬಗ್ಗೆ ಸಿಂಧು ತಂದೆ ಪಿವಿ ರಮಣ ಮಾಹಿತಿ ನೀಡಿದ್ದು, ಡಿ.20 ರಿಂದ ಮದುವೆ ಶಾಸ್ತ್ರಗಳು ಆರಂಭವಾಗಲಿದ್ದು, ಡಿ.22 ರಂದು ಉದಯಪುರದಲ್ಲಿ ಮದುವೆ ನಡೆಯಲಿದೆ. ಡಿ.24 ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ನಡೆಯಲಿದೆ ಎಂದು ತಿಳಿಸಿದ್ದಾರೆ.ಇದನ್ನು ಓದಿ –ವಿಧಾನ ಪರಿಷತ್ ಸಚಿವಾಲಯದಲ್ಲಿ ನೇಮಕಾತಿ: ಹುದ್ದೆಗಳ ವಿವರ, ವೇತನ ಮತ್ತು ಅರ್ಜಿ ದಿನಾಂಕ
ಸಿಂಧು ಇದುವರೆಗೆ ಒಂದು ಚಿನ್ನದ ಪದಕ ಸೇರಿದಂತೆ ಐದು ವಿಶ್ವ ಚಾಂಪಿಯನ್‌ಶಿಪ್ ಪದಕಗಳನ್ನು ಜಯಿಸಿರುವ ಸಾಧನೆ ಹೊಂದಿದ್ದಾರೆ.
More Stories
ಕರ್ನಾಟಕದಲ್ಲಿ ‘ಪುಷ್ಪ 2’ಗೆ ಶಾಕ್- ಪ್ರದರ್ಶನ ರದ್ದಿಗೆ ಆದೇಶ
ಮುಂದಿನ ಪೀಳಿಗೆಗೊಂದು ಉತ್ತಮ ಸಂದೇಶ
ಮೈಸೂರಿನಲ್ಲಿ ಚಲಿಸುತ್ತಿದ್ದ KSRTC ಬಸ್ಗೆ ಬೆಂಕಿ: 50 ಕ್ಕೂ ಹೆಚ್ಚು ಪ್ರಯಾಣಿಕರು ರಕ್ಷಣೆ