ಬೆಂಗಳೂರು, ಡಿಸೆಂಬರ್ 03: ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಉಳಿಕೆ ಮೂಲ ವೃಂದ ಮತ್ತು ಕಲ್ಯಾಣ ಕರ್ನಾಟಕ ವೃಂದದಲ್ಲಿನ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಪರಿಷ್ಕೃತ ದಿನಾಂಕವನ್ನು ಪ್ರಕಟಿಸಿದ್ದು, 3/1/2025ರೊಳಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.
ಒಟ್ಟು ಹುದ್ದೆಗಳು:
ಈ ನೇಮಕಾತಿಯಲ್ಲಿ 7 ಹುದ್ದೆಗಳಿಗಾಗಿ ಅರ್ಜಿ ಕರೆಯಲಾಗಿದೆ.
- ಉಳಿಕೆ ಮೂಲ ವೃಂದ: 6 ಹುದ್ದೆಗಳು
- ಕಲ್ಯಾಣ-ಕರ್ನಾಟಕ ವೃಂದ: 1 ಹುದ್ದೆ
ಹುದ್ದೆ ಹಾಗೂ ವೇತನ ಶ್ರೇಣಿ:
- ಹುದ್ದೆಯ ಹೆಸರು: ಕಿರಿಯ ಸಹಾಯಕರು
- ನೇಮಕಾತಿ ವಿಧಾನ: ನೇರ ನೇಮಕಾತಿ
- ವೇತನ ಶ್ರೇಣಿ: ₹34,100 – ₹67,600 (ಬಡ್ತಿ ಕ್ರಮದಂತೆ ವ್ಯತ್ಯಾಸವಿದೆ)
ಹುದ್ದೆಗಳ ಮೀಸಲಾತಿ:
- ಪರಿಶಿಷ್ಟ ಜಾತಿ ಇತರೆ: 1
- ಸಾಮಾನ್ಯ ಮಹಿಳೆ: 1
- ಗ್ರಾಮೀಣ: 1 (ಒಟ್ಟು 2)
- ಪರಿಶಿಷ್ಟ ಪಂಗಡ ಇತರೆ: 1
- ಪ್ರವರ್ಗ 1: 1
- ಪ್ರವರ್ಗ 2ಎ: 1
- ಕಲ್ಯಾಣ ಕರ್ನಾಟಕ ಪರಿಶಿಷ್ಟ ಜಾತಿ ಇತರೆ: 1
ಅರ್ಜಿ ಸಲ್ಲಿಕೆ ದಿನಾಂಕಗಳು:
- ಪ್ರಾರಂಭ ದಿನಾಂಕ: 4/12/2024
- ಕೊನೆಯ ದಿನಾಂಕ: 3/1/2025
- ಶುಲ್ಕ ಪಾವತಿಗೆ ಕೊನೆಯ ದಿನಾಂಕ: 4/1/2025
ವಯೋಮಿತಿ ಸಡಿಲಿಕೆ:
12/3/2024ರ ಅಧಿಸೂಚನೆಯಲ್ಲಿ ಗರಿಷ್ಠ ವಯೋಮಿತಿಗೆ 2 ವರ್ಷಗಳ ಸಡಿಲಿಕೆ ನೀಡಲಾಗಿತ್ತು. ಇದೀಗ ಅದನ್ನು 3 ವರ್ಷಗಳಿಗೆ ವಿಸ್ತರಿಸಲಾಗಿದೆ.ಇದನ್ನು ಓದಿ –ಅಕ್ರಮ ಆಸ್ತಿ ಆರೋಪ: ಇಂದು ಲೋಕಾಯುಕ್ತ ಮುಂದೆ ಹಾಜರಾಗುವಾರಾ ಸಚಿವ ಜಮೀರ್ ಅಹ್ಮದ್?
ಮತ್ತಷ್ಟು ಮಾಹಿತಿ:
ಅಧಿಸೂಚನೆಯಲ್ಲಿನ ಅರ್ಹತೆ, ನಿಬಂಧನೆ, ಮಾರ್ಗಸೂಚಿಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಅಭ್ಯರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ನಿಗದಿತ ಸಮಯದೊಳಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
More Stories
ಕರ್ನಾಟಕದಲ್ಲಿ ‘ಪುಷ್ಪ 2’ಗೆ ಶಾಕ್- ಪ್ರದರ್ಶನ ರದ್ದಿಗೆ ಆದೇಶ
ಮುಂದಿನ ಪೀಳಿಗೆಗೊಂದು ಉತ್ತಮ ಸಂದೇಶ
ಮೈಸೂರಿನಲ್ಲಿ ಚಲಿಸುತ್ತಿದ್ದ KSRTC ಬಸ್ಗೆ ಬೆಂಕಿ: 50 ಕ್ಕೂ ಹೆಚ್ಚು ಪ್ರಯಾಣಿಕರು ರಕ್ಷಣೆ