December 5, 2024

Newsnap Kannada

The World at your finger tips!

WhatsApp Image 2024 12 02 at 3.12.14 PM

ಮಂಡ್ಯ ಎಡಿಸಿ ಸನ್ಯಾಸ ದೀಕ್ಷೆ ಸ್ವೀಕರಿಸಲು ನಿರ್ಧಾರ

Spread the love

ಮಂಡ್ಯ: ಮಂಡ್ಯ ಅಪರ ಜಿಲ್ಲಾಧಿಕಾರಿ (ಎಡಿಸಿ) ಹೆಚ್.ಎಲ್. ನಾಗರಾಜು ಸರ್ಕಾರಿ ಸೇವೆಯನ್ನು ತ್ಯಜಿಸಿ ಸನ್ಯಾಸ ದೀಕ್ಷೆ ಸ್ವೀಕರಿಸಲು ನಿರ್ಧರಿಸಿರುವ ಸುದ್ದಿ ಜನರಲ್ಲಿ ಅಚ್ಚರಿಯ ಕಾಯಕವಾಗಿದೆ.

ಹೆಚ್.ಎಲ್. ನಾಗರಾಜು, ಇನ್ನೂ ಕೆಲವು ದಿನಗಳಲ್ಲಿ ತನ್ನ ಅಧಿಕಾರದಿಂದ ನಿವೃತ್ತಿ ಪಡೆದು ಸನ್ಯಾಸ ದೀಕ್ಷೆ ಸ್ವೀಕರಿಸುವ ತಯಾರಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಶೀಘ್ರದಲ್ಲೇ ತನ್ನ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ.

ಸನ್ಯಾಸ ದೀಕ್ಷೆಯು ವಿಶ್ವ ಒಕ್ಕಲಿಗರ ಸಂಸ್ಥಾನ ಮಠದಲ್ಲಿ ನಡೆಯಲಿದ್ದು, ಚಂದ್ರಶೇಖರನಾಥ ಶ್ರೀಗಳ ಶಿಷ್ಯರಾಗುವ ನಿರೀಕ್ಷೆಯಿದೆ.

ಈ ಹಿಂದೆಯೂ 2011ರಲ್ಲಿ ಆದಿಚುಂಚನಗಿರಿ ಮಠದಲ್ಲಿ ಅವರು ‘ನಿಶ್ಚಲಾನಂದನಾಥ’ ಎಂಬ ಹೆಸರಿನಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದರು. ಆ ಸಮಯದಲ್ಲಿ ಅವರು ತಹಶೀಲ್ದಾರ್ ಹುದ್ದೆ ತ್ಯಜಿಸಿ ಸ್ವಾಮೀಜಿಯಾಗಿ ಮುಂದುವರಿದಿದ್ದರು. ಆದರೆ, ಆ ಸಮಯದಲ್ಲಿ ಹಿತೈಷಿಗಳು ಮತ್ತು ಸಾರ್ವಜನಿಕರ ಒತ್ತಾಯದ ಮೇರೆಗೆ ಅವರು ಮತ್ತೆ ತನ್ನ ಅಧಿಕಾರವನ್ನು ಕೈಗೊಳ್ಳುವ ನಿರ್ಧಾರ ಮಾಡಿದ್ರು.ಇದನ್ನು ಓದಿ –ಕರ್ನಾಟಕ SSLC, ದ್ವಿತೀಯ PUC ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

ಈಗ ಮತ್ತೆ ಅವರು ಕಾವಿ ಧರಿಸಲು ಸಜ್ಜಾಗಿದ್ದು, ಸನ್ಯಾಸ ದೀಕ್ಷೆ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.

Copyright © All rights reserved Newsnap | Newsever by AF themes.
error: Content is protected !!