December 5, 2024

Newsnap Kannada

The World at your finger tips!

WhatsApp Image 2022 08 24 at 7.17.11 PM

ರಾಜ್ಯ ಸರ್ಕಾರದಿಂದ 6 ಕೆಎಎಸ್ ಅಧಿಕಾರಿಗಳ ಸ್ಥಳಾಂತರ: ಹೊಸ ಆದೇಶ ಹೊರಡಿಕೆ

Spread the love

ಬೆಂಗಳೂರು: ರಾಜ್ಯ ಸರ್ಕಾರವು ಆಡಳಿತ ಯಂತ್ರದಲ್ಲಿ ಮತ್ತೊಮ್ಮೆ ಬದಲಾವಣೆ ಮಾಡಿದ್ದು, 6 ಮಂದಿ ಕೆಎಎಸ್ (ಕರ್ನಾಟಕ ಆಡಳಿತ ಸೇವೆ) ಅಧಿಕಾರಿಗಳನ್ನು ಸ್ಥಳಾಂತರಿಸಿ ಹೊಸ ಆದೇಶವನ್ನು ಹೊರಡಿಸಿದೆ. ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ಸ್ಥಳಾಂತರವು ತಕ್ಷಣ ಜಾರಿಗೆ ಬರುವಂತೆ ಸೂಚಿಸಲಾಗಿದೆ ಮತ್ತು ಮುಂದಿನ ಆದೇಶದವರೆಗೆ ಹುದ್ದೆಗಳ ಪಟ್ಟಿಯನ್ನು ನಿಗದಿಪಡಿಸಲಾಗಿದೆ.

ಸ್ಥಳಾಂತರಗೊಂಡ ಅಧಿಕಾರಿಗಳ ವಿವರ:

ಡಾ. ಷಣ್ಮುಖ ಡಿ

  • ಕೆಎಎಸ್ (ಸೂಪರ್ ಟೈಮ್ ಸ್ಕೇಲ್) ಅಧಿಕಾರಿ
  • ಸ್ಥಾನ: ಸ್ಥಳ ನಿರೀಕ್ಷಣೆ

ಅಶೋಕ್ ದುಡಗುಂಟಿ

  • ಕೆಎಎಸ್ (ಸೂಪರ್ ಟೈಮ್ ಸ್ಕೇಲ್) ಅಧಿಕಾರಿ
  • ಸ್ಥಾನ:ಸ್ಥಳ ನಿರೀಕ್ಷಣೆ

ಮಲ್ಲಿಕಾರ್ಜುನ ಬಿ

  • ಕೆಎಎಸ್ (ಹಿರಿಯ ಶ್ರೇಣಿ) ಅಧಿಕಾರಿ
  • ಹುದ್ದೆ: ವಿಶೇಷ ಭೂಸ್ವಾಧೀನ ಅಧಿಕಾರಿ, ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಹೆಬ್ಬಾಳ, ಬೆಂಗಳೂರು

ಕೆ. ರಂಗನಾಥ

  • ಕೆಎಎಸ್ (ಹಿರಿಯ ಶ್ರೇಣಿ) ಅಧಿಕಾರಿ
  • ಹುದ್ದೆ: ಆಯುಕ್ತರು, ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ, ಹಂಪಿ, ವಿಜಯನಗರ ಜಿಲ್ಲೆ, ಹೊಸಪೇಟೆ

ಶೈಲಜಾ ಎಸ್

  • ಕೆಎಎಸ್ (ಹಿರಿಯ ಶ್ರೇಣಿ) ಅಧಿಕಾರಿ
    -ಸ್ಥಾನ: ಸ್ಥಳ ನಿರೀಕ್ಷಣೆ

ಜಯಲಕ್ಷ್ಮೀ

  • ಕೆಎಎಸ್ (ಹಿರಿಯ ಶ್ರೇಣಿ) ಅಧಿಕಾರಿ
  • ಹುದ್ದೆ: ಕುಲಸಚಿವರು, ಕರ್ನಾಟಕ ಕೃಷಿ ವಿಶ್ವವಿದ್ಯಾಲಯ, ಧಾರವಾಡ

ಈ ಎಲ್ಲಾ ಸ್ಥಳಾಂತರಗಳು ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಲಾಗಿದ್ದು, ಅಧಿಕಾರಿಗಳು ತಮ್ಮ ಹೊಸ ಹುದ್ದೆಗಳಿಗೆ ಆಯ್ಕೆಯಾದ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸಬೇಕಾಗಿ ಕೋರಲಾಗಿದೆ. ಇದನ್ನು ಓದಿ –ಮೈಸೂರು ಜಿಲ್ಲೆಯಾದ್ಯಂತ ಇಂದು ಶಾಲಾ ಕಾಲೇಜಿಗೆ ರಜೆ

image 1
image 2
Copyright © All rights reserved Newsnap | Newsever by AF themes.
error: Content is protected !!