November 25, 2024

Newsnap Kannada

The World at your finger tips!

muda

ಮುಡಾ ಹಗರಣಕ್ಕೆ ಬಿಗ್ ಟ್ವಿಸ್ಟ್: ಸರ್ಚ್ ವಾರೆಂಟ್ ಮುನ್ನವೇ ಕಡತಗಳ ಸ್ಥಳಾಂತರ ಮಾಡಿದ ಲೋಕಾಯುಕ್ತ ಡಿವೈಎಸ್‌ಪಿ!

Spread the love

ಮೈಸೂರು: ಮುಡಾ ಹಗರಣದ ತನಿಖೆಗೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳ ನಡೆ ಅನುಮಾನಗಳಿಗೆ ಕಾರಣವಾಗಿದ್ದು, ಪ್ರಕರಣ ಇದೀಗ ಸ್ಪೋಟಕ ತಿರುವು ಪಡೆದುಕೊಂಡಿದೆ. ಲೋಕಾಯುಕ್ತ ಡಿವೈಎಸ್‌ಪಿ ಎಸ್.ಕೆ. ಮಾಲತೇಶ್ ಅವರು ಸರ್ಚ್ ವಾರೆಂಟ್ ಜಾರಿಯಾದ ಕೂಡಲೇ, ಮುಡಾ ಕಚೇರಿಗೆ ಆಗಮಿಸಿ ಸುಮಾರು 144 ಕಡತಗಳನ್ನು ಸ್ಥಳಾಂತರಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಸರ್ಚ್ ವಾರೆಂಟ್ ಮತ್ತು ಸ್ಥಳಾಂತರ ಆರೋಪ:
ಜೂನ್ 28ರಂದು ಲೋಕಾಯುಕ್ತ ಕಚೇರಿಯಲ್ಲಿ ದಾಳಿ ನಡೆಸಲು ಸರ್ಚ್ ವಾರೆಂಟ್ ಸಿದ್ಧವಾಗಿತ್ತು. ಆದರೆ, ವರದಿ ಪ್ರಕಾರ, ಸರ್ಚ್ ವಾರೆಂಟ್ ಜಾರಿಯಾದ 12 ತಾಸುಗಳೊಳಗೆ ಡಿವೈಎಸ್‌ಪಿ ಮಾಲತೇಶ್ ಅವರು ಮುಡಾ ಕಚೇರಿಗೆ ಭೇಟಿ ನೀಡಿ, 144 ಕಡತಗಳನ್ನು ತೆಗೆದುಕೊಂಡು ಹೋಗಿದ್ದಾರೆ.ಈ ವಿಷಯವನ್ನು ಲೋಕಾಯುಕ್ತ ವರದಿಯಲ್ಲಿಯೇ ಉಲ್ಲೇಖಿಸಲಾಗಿದೆ.

ಆರೋಪಗಳ ಪ್ರಕಾರ, ಡಿವೈಎಸ್‌ಪಿ ಮಾಲತೇಶ್ ಅವರು ದಾಳಿಯ ಮುನ್ನವೇ ಮಾಹಿತಿ ನಗರಾಭಿವೃದ್ಧಿ ಸಚಿವರಿಗೆ ನೀಡಿದ್ದು, ಈ ಹಿನ್ನೆಲೆ ದಾಖಲಾತಿಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗಿದೆ ಎಂಬ ಅನುಮಾನ ಮೂಡಿಸಿದೆ.

ತೀವ್ರ ತನಿಖೆಯ ಅವಶ್ಯಕತೆ:
ಮುಡಾ ಕಚೇರಿಯಿಂದ ದಾಖಲೆಗಳನ್ನು ಸ್ಥಳಾಂತರ ಮಾಡಿರುವ ಆರೋಪದಿಂದ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಇದು ಇನ್ನಷ್ಟು ಗಂಭೀರ ತನಿಖೆಗೆ ದಾರಿ ಮಾಡಿಕೊಡುವ ಸಾಧ್ಯತೆಯಿದೆ.ಇದನ್ನು ಓದಿ –ಮುಡಾ ಹಗರಣ: ಲೋಕಾಯುಕ್ತ ಸಂಸ್ಥೆಯೇ ಅಪರಾಧಿ ಸ್ಥಾನದಲ್ಲಿದೆ- ಸ್ನೇಹಮಯಿ ಕೃಷ್ಣ ಆರೋಪ

ಈ ಘಟನೆ ಮುಡಾ ಹಗರಣದ ತನಿಖೆಯ ನೈತಿಕತೆಗೆ ಗಂಭೀರ ಪ್ರಶ್ನೆ ಎತ್ತುತ್ತಿದ್ದು, ಪ್ರಾಮಾಣಿಕ ಮತ್ತು ತ್ವರಿತ ತನಿಖೆ ಮೂಲಕ ಸತ್ಯ ಬಯಲಾಗಬೇಕಾಗಿದೆ.

Copyright © All rights reserved Newsnap | Newsever by AF themes.
error: Content is protected !!