ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ರೋಹಿತ್ ದಂಪತಿ ಮನೆಗೆ ಈಗ ಎರಡನೇ ಅತಿಥಿಯ ಆಗಮನವಾಗಿದೆ.
ರೋಹಿತ್ ಹಾಗೂ ರಿತಿಕಾ ದಂಪತಿಗೆ ಈಗಾಗಲೇ ಸಮೈರಾ ಹೆಸರಿನ 6 ವರ್ಷದ ಮಗಳು ಇದ್ದು, ಈಗ ಗಂಡು ಮಗುವಿನ ಮೂಲಕ ಅವರ ಕುಟುಂಬದ ಸಂತೋಷ ಇನ್ನಷ್ಟು ಹೆಚ್ಚಾಗಿದೆ.
ಈ ವೇಳೆಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಭಾಗಿಯಾಗಲು ಸಾಧ್ಯವಾಗುವುದೇ ಎಂಬ ಸಂದೇಹವಿತ್ತು. ಆದರೆ, ಮಗುವಿನ ಜನ್ಮದ ನಂತರ ಶೀಘ್ರದಲ್ಲೇ ರೋಹಿತ್ ಆಸ್ಟ್ರೇಲಿಯಾಗೆ ತೆರಳಬಹುದು ಎಂದು ಊಹಿಸಲಾಗುತ್ತಿದೆ.
ರೋಹಿತ್ ಕೊರತೆಯಲ್ಲಿ, ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕತ್ವ ಜಸ್ಪ್ರೀತ್ ಬುಮ್ರಾ ವಹಿಸಿಕೊಳ್ಳುವ ಸಾಧ್ಯತೆಗಳಿವೆ. ಟೀಂ ಇಂಡಿಯಾ WTC ಫೈನಲ್‌ಗೆ ಅರ್ಹತೆ ಪಡೆಯಲು ಆಸ್ಟ್ರೇಲಿಯಾದಲ್ಲಿ 4 ಅಥವಾ ಹೆಚ್ಚು ಪಂದ್ಯಗಳನ್ನು ಗೆಲ್ಲುವ ಅಗತ್ಯವಿದೆ.ಇದನ್ನು ಓದಿ –ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
ಕ್ರಿಕೆಟಿಗ ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನಿಸಿದ್ದಕ್ಕೆ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. “ಜೂನಿಯರ್ ಹಿಟ್‌ಮ್ಯಾನ್‌ಗೆ ಸ್ವಾಗತ. ದೇವರು ಅವರನ್ನು ಮತ್ತು ಅವರ ಕುಟುಂಬವನ್ನು ಸಂತೋಷದಿಂದ ಕಾಪಾಡಲಿ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ.
More Stories
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ