March 10, 2026

Newsnap Kannada

The World at your finger tips!

WhatsApp Image 2024 11 14 at 5.06.30 PM

ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ

Spread the love

ಮಂಡ್ಯ :ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ಮಧ್ಯವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮಂಡ್ಯದಲ್ಲಿ ಸೋರಿಕೆಯಾಗಿದೆ.

ಮಂಡ್ಯ ನಗರದ ಕಾರ್ಮೆಲ್ ಶಿಕ್ಷಣ ಸಂಸ್ಥೆಯಲ್ಲಿ ಪಿಇಯುಸಿ ಮಧ್ಯವಾರ್ಷಿಕ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದೆ, ಈ ಹಿನ್ನೆಲೆಯಲ್ಲಿ ಮಂಡ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಭಾರ ಉಪನಿರ್ದೇಶಕರು ಕಾರ್ಮೆಲ್ ಶಿಕ್ಷಣ ಸಂಸ್ಥೆ ಮೇಲೆ ಶಿಸ್ತು ಕ್ರಮಕ್ಕೆ ನೋಟಿಸ್ ಜಾರಿ ಮಾಡಿದ್ದಾರೆ.

ಇಂದು ನಡೆಯಬೇಕಿದ್ದ ಜೀವಶಾಸ್ತ್ರ ವಿಷಯದ ಪರೀಕ್ಷೆಯನ್ನು ನವೆಂಬರ್ 19ಕ್ಕೆ ಮುಂದೂಡಲಾಗಿದೆ. ನವೆಂಬರ್ 6ರಿಂದ 16ರವರೆಗೆ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿತ್ತು. ಪ್ರಶ್ನೆ ಪತ್ರಿಕೆಯನ್ನು ನೋಡಲ್ ಅಧಿಕಾರಿ ಮೂಲಕ ಹಂಚಲಾಗಿದೆ.ಇದನ್ನು ಓದಿ –ಟಿಪ್ಪು ಸುಲ್ತಾನ್‌ನ ಖಡ್ಗ 3.4 ಕೋಟಿಗೆ ಹರಾಜು

ಜೀವಶಾಸ್ತ್ರ ಪರೀಕ್ಷಾ ದಿನಾಂಕಕ್ಕಿಂತ ಮುಂಚೆಯೇ ಪ್ರಶ್ನೆ ಪತ್ರಿಕೆ ಬಹಿರಂಗವಾಗಿದೆ. ಇಂದು ನಡೆಯಬೇಕಿದ್ದ ಜೀವಶಾಸ್ತ್ರ ಪರೀಕ್ಷೆ ಎರಡು ದಿನಗಳ ಹಿಂದೆಯೇ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಪರೀಕ್ಷೆ ಮುಂದೂಡಿ ನ.19ಕ್ಕೆ ನಿಗದಿ ಮಾಡಲಾಗಿದೆ.

error: Content is protected !!