October 31, 2024

Newsnap Kannada

The World at your finger tips!

alcohol

ಅಕ್ರಮ ಗೋವಾ ಮದ್ಯ ಜಪ್ತಿ: 5 ಲಕ್ಷ ರೂ. ಮೌಲ್ಯದ 144 ಬಾಟಲ್ ವಶಕ್ಕೆ

Spread the love

ಬೆಂಗಳೂರು: ನಗರದ ದಕ್ಷಿಣ ವಿಭಾಗದ ಅಬಕಾರಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ 5 ಲಕ್ಷ ರೂ. ಮೌಲ್ಯದ ಗೋವಾ ಮೂಲದ 144 ಮದ್ಯ ಬಾಟಲ್‌ಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.

ಕಾನೂನು ಉಲ್ಲಂಘನೆ ಮಾಡಿರುವ ಆರೋಪಿಯನ್ನು ಬೆಂಗಳೂರಿನ ಕತ್ರಿಗುಪ್ಪೆ ನಿವಾಸಿ ಪುರುಷೋತ್ತಮ್ ಎಂದು ಗುರುತಿಸಲಾಗಿದೆ.

ಮದ್ಯವನ್ನು ಕಡಿಮೆ ಬೆಲೆಗೆ ಗೋವಾಗೆ ತೆರಳಿ ಖರೀದಿಸಿ, ಬೆಂಗಳೂರಿನಲ್ಲಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ಎಂಬ ಆರೋಪವಿದೆ. ಗೋವಾದ ಮದ್ಯ ಅಂಗಡಿಗಳ ಮಾಲೀಕರೊಂದಿಗೆ ಸಂಪರ್ಕ ಹೊಂದಿದ ಪುರುಷೋತ್ತಮ್, ಬಸ್ ಮೂಲಕ ಮದ್ಯವನ್ನು ಬೆಂಗಳೂರಿಗೆ ತರಿಸುತ್ತಿದ್ದ. ಅ.27ರಂದು ಬನಶಂಕರಿ ಎರಡನೇ ಹಂತದಲ್ಲಿ ದ್ವಿಚಕ್ರ ವಾಹನದಲ್ಲಿ ನಿಂತಿದ್ದಾಗ ಪುರುಷೋತ್ತಮ್‌ನ ಚಲನವಲನ ಅಬಕಾರಿ ಅಧಿಕಾರಿಗಳಿಗೆ ಅನುಮಾನಾಸ್ಪದವಾಗಿ ಕಂಡಿತು. ಪರಿಶೀಲನೆ ವೇಳೆ ಬ್ಯಾಗ್‌ನಲ್ಲಿ ಗೋವಾ ಮಾರ್ಕೆಡ್ ಮದ್ಯದ ಬಾಟಲ್‌ಗಳು ಪತ್ತೆಯಾದವು.

ಆತನ ಮೊಬೈಲ್ ಪರಿಶೀಲಿಸಿದಾಗ ಗೋವಾ ರಾಜ್ಯದ ಮದ್ಯ ಅಂಗಡಿಗಳೊಂದಿಗೆ ಇಡೀ ವ್ಯಾಪಾರ ಸಂಬಂಧ ಇರುವ ಮಾಹಿತಿ ಲಭಿಸಿತು. ಬಿಲ್ಲುಗಳು ಕೂಡ ಪತ್ತೆಯಾದವು. ಬಳಿಕ ಕತ್ರಿಗುಪ್ಪೆಯ ಮನೆ ಶೋಧಿಸಿದಾಗ, ಅಕ್ರಮವಾಗಿ ಸಂಗ್ರಹಿಸಿದ್ದ 144 ಬಾಟಲ್‌ಗಳು ಪತ್ತೆಯಾದವು.ವಕ್ಫ್ ಆಸ್ತಿ ವಿವಾದ: ರೈತರಿಗೆ ನೀಡಿದ ನೋಟಿಸ್ ಹಿಂಪಡೆ – ವಿಜಯಪುರ ಡಿಸಿ ಸ್ಪಷ್ಟನೆ

ಈ ಘಟನೆಯು ಅಬಕಾರಿ ಅಧಿಕಾರಿಗಳಲ್ಲಿ ಆಶ್ಚರ್ಯ ಮೂಡಿಸಿದ್ದು, ಅಬಕಾರಿ ಕಾಯ್ದೆ 1965ರ ಕಲಂ 11, 14, 15, 38(ಎ), ಮತ್ತು 43(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!