December 22, 2024

Newsnap Kannada

The World at your finger tips!

BJP , JDS , alliance

ಚನ್ನಪಟ್ಟಣ ಮತ್ತು ರಾಮನಗರ ಅವಳಿ ನಗರ: ಎಚ್‌.ಡಿ. ಕುಮಾರಸ್ವಾಮಿ

Spread the love

ಚನ್ನಪಟ್ಟಣ (ರಾಮನಗರ): “ಉತ್ತರ ಕರ್ನಾಟಕದ ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡದಂತೆ ಚನ್ನಪಟ್ಟಣ ಮತ್ತು ರಾಮನಗರ ನಗರಗಳನ್ನು ಸಹ ಅವಳಿ ನಗರಗಳಾಗಿ ಅಭಿವೃದ್ಧಿ ಮಾಡಲಾಗುವುದು. ಇದರಿಂದ ಈ ಪ್ರದೇಶದ ಆರ್ಥಿಕ ಶಕ್ತಿ ಹೆಚ್ಚುವ ಜೊತೆಗೆ ಜನಜೀವನದ ಮಟ್ಟವೂ ಸುಧಾರಿಸಲಿದೆ” ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ತಾಲ್ಲೂಕಿನ ನೀಲಕಂಠನಹಳ್ಳಿಯಲ್ಲಿ ಸೋಮವಾರ ಪ್ರಚಾರ ನಡೆಸಿದ ಅವರು, “ಅಭಿವೃದ್ಧಿ ಎಂದರೆ ಈ ಭಾಗವನ್ನು ಬೆಂಗಳೂರು ನಗರಕ್ಕೆ ಸೇರಿಸುವುದಲ್ಲ. ಪ್ರತಿ ಭೌಗೋಳಿಕ ಪ್ರದೇಶವನ್ನು ಸ್ವತಂತ್ರವಾಗಿ ಅಭಿವೃದ್ದಿ ಮಾಡಬೇಕು” ಎಂದು ಹೇಳಿದರು. ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಮಾಡಲು ಮುಂದಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ತಿರುಗೇಟು ನೀಡಿದರು.

“ಈ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ ಅಗತ್ಯವಿದೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಈ ಯೋಜನೆಗೆ ₹97 ಕೋಟಿ ಬಿಡುಗಡೆ ಮಾಡಿದ್ದೆ. ಆದಾಗ್ಯೂ, ಮೂರು ವರ್ಷ ಕಳೆದರೂ ಕೆಲಸ ಪ್ರಗತಿಸಿಲ್ಲ. ಟೆಂಡರ್ ಪ್ರಕ್ರಿಯೆಯನ್ನು ಮುಗಿಸಿ, ಗುತ್ತಿಗೆದಾರರಿಗೆ ಸಮರ್ಪಕವಾಗಿ ನಿರ್ದೇಶನ ನೀಡದಿರುವುದರಿಂದ, ಯುಜಿಡಿ ಯೋಜನೆ ನಿರ್ಲಕ್ಷ್ಯಕ್ಕೀಡಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದಲಿತರನ್ನು ಪ್ರೋತ್ಸಾಹಿಸುವ ಹೀನ ರಾಜಕೀಯವನ್ನು ಕಾಂಗ್ರೆಸ್ ನಡೆಸುತ್ತಿದೆ ಎಂದು ಅವರು ಆರೋಪಿಸಿದರು. “ಅಂಬೇಡ್ಕರ್ ಅವರನ್ನು ರಾಜಕೀಯವಾಗಿ ನಿರ್ನಾಮ ಮಾಡಲು ಕಾಂಗ್ರೆಸ್ ಮುನ್ನಡೆಯಿತ್ತು. ಆದರೆ, ಅಂಬೇಡ್ಕರ್ ಕನಸುಗಳನ್ನು ನನಸಾಗಿಸಲು ಮೋದಿ ಬದ್ಧರಾಗಿದ್ದಾರೆ. ಸಂವಿಧಾನ ಅಂಗೀಕರಿಸಿದ ನ.26ನ್ನು ಸಂವಿಧಾನ ದಿನವನ್ನಾಗಿ ಆಚರಿಸಲು ಕ್ರಮ ಕೈಗೊಂಡಿದ್ದು, ಅಂಬೇಡ್ಕರ್ ಅವರ ಆದರ್ಶಗಳನ್ನು ಜಾರಿಗೆ ತರುತ್ತಿದ್ದಾರೆ” ಎಂದರು.

“ದಲಿತರ ಹಿತಾಸಕ್ತಿಯನ್ನು ಬಾಯಿ ಮಾತಿಗೆ ಮಾತ್ರ ಮಿತಿಗೊಳಿಸಿದವರು, ವಾಲ್ಮೀಕಿ ನಿಗಮದ ಹಣವನ್ನು ಅಕ್ರಮವಾಗಿ ರಾಜಕೀಯ ಉದ್ದೇಶಕ್ಕಾಗಿ ಬಳಸಿದವರು” ಎಂದು ಕಾಂಗ್ರೆಸ್‌ ವಿರುದ್ಧ ಟೀಕಿಸಿದರು.

ಈ ಸಂದರ್ಭ, ಬಿಜೆಪಿ ಸಂಸದ ಯದುವೀರ್ ಕೃಷ್ನದತ್ತ ಚಾಮರಾಜ ಒಡೆಯರ್, ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಮಾಜಿ ಸಚಿವ ಸಾ.ರಾ. ಮಹೇಶ್, ಮಾಜಿ ಶಾಸಕರಾದ ಡಾ. ಅನ್ನದಾನಿ, ಚೌಡರೆಡ್ಡಿ ತೂಪಲ್ಲಿ, ನಿಸರ್ಗ ನಾರಾಯಣಸ್ವಾಮಿ ಮತ್ತು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.ಇದನ್ನು ಓದಿ –ಮುಡಾ ಹಗರಣ- ಬೆಂಗಳೂರು ಮೈಸೂರು ಸೇರಿ 9 ಕಡೆಗಳಲ್ಲಿ ED ದಾಳಿ

ಹೆಣ್ಣು ಮಕ್ಕಳ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಗಾರ್ಮೆಂಟ್ಸ್ ಕಾರ್ಖಾನೆ ಸ್ಥಾಪನೆಗೆ ಸಲಹೆ ನೀಡಿರುವ ಸ್ಥಳೀಯರು, ಅವರಿಗೆ ಟೈಲರಿಂಗ್ ತರಬೇತಿ ನೀಡುವ ಬಗ್ಗೆ ಕುಮಾರಸ್ವಾಮಿ ಗಂಭೀರವಾಗಿ ಯೋಚಿಸುತ್ತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!