December 3, 2024

Newsnap Kannada

The World at your finger tips!

, suicide , rape , crime

ಮಂಡ್ಯದಲ್ಲಿ ಅಕ್ರಮ ಸಂಬಂಧಕ್ಕೆ ಯುವಕನ ಬರ್ಬರ ಕೊಲೆ

Spread the love

ಮಂಡ್ಯ: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿಕನಕುರುಳಿ ಗ್ರಾಮದಲ್ಲಿ ಅಕ್ರಮ ಸಂಬಂಧ ಕಾರಣವಾಗಿ ಯುವಕನೊಬ್ಬನನ್ನು ತನ್ನ ಸ್ನೇಹಿತರೆ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ನಾಗಮಂಗಲ ತಾಲೂಕಿನ ತಿರುಮಲಾಪುರ ಗ್ರಾಮದ 23 ವರ್ಷದ ಅರವಿಂದ್‌ ಈ ದುರ್ಘಟನೆಯ ಬಲಿಯಾಗಿದ್ದು, ಚಿನಕುರುಳಿ ಗ್ರಾಮದ ಕುಮಾರ್ ಎಂಬುವರ ಬಾಡಿಗೆ ಮನೆಯಲ್ಲಿ ತನ್ನ ಸ್ನೇಹಿತರ ಜೊತೆ ವಾಸವಿದ್ದ. ರಾತ್ರಿ ಮದ್ಯ ಸೇವಿಸಿದ ನಂತರ ಮಲಗಿದ್ದ ಅರವಿಂದ್‌ನನ್ನು, ಅವನ ಜೊತೆಯಲ್ಲಿದ್ದ ಸ್ನೇಹಿತರಾದ ವಿಜಯ್ ಮತ್ತು ಏಳುಮಲೈ ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಹತ್ಯೆಗೆ ಒಳಗಾದ ಇಬ್ಬರು ಆರೋಪಿ ಸ್ನೇಹಿತರು ಕೂಡ ತಿರುಮಲಾಪುರದವರಾಗಿದ್ದು, ಅರವಿಂದ್‌ ಅವರ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಕಾರಣ ಈ ಕೃತ್ಯ ಎಸಗಿದ್ದಾರೆ .

ಪಾಂಡವಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!