ಶ್ರೀರಂಗಪಟ್ಟಣ: ತಾಲೂಕಿನ ಕಿರಂಗೂರು ಗ್ರಾಮದ ಮಧ್ಯೆ ಹಾದು ಹೋಗಿರುವ ಚಾಮರಾಜನಗರ -ಜೀವರ್ಗಿ ಹೆದ್ದಾರಿ 150 ಎ ರಸ್ತೆಯು ಕಿರಿದಾಗಿದ್ದು ಹಲವು ಅಪಘಾತಗಳು ಘಟಿಸಿದ್ದವು .ಇದರಿಂದ ಮನನೊಂದು ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಸಲ್ಲಿಸಿದ್ದ ರಸ್ತೆ ಅಗಲೀಕರಣ ಮನವಿ ಪತ್ರಕ್ಕೆ ಮಣಿದ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ರಸ್ತೆ ವಿಸ್ತರಣೆ ಮಾಡಲು ತೀರ್ಮಾನಿಸಿ ಭಾನುವಾರ ಬೆಳಿಗ್ಗೆ ಕೇಂದ್ರ ಸಚಿವರಾದ ಎಚ್. ಡಿ ಕುಮಾರಸ್ವಾಮಿ ಅವರಿಂದ ಕಿರಂಗೂರಿನ ಬನ್ನಿಮಂಟಪದ ಬಳಿ ಗುದ್ದಲಿ ಪೂಜೆ ನೆರವೇರಿಸಿದರು.
ಕಿರಂಗೂರಿನ ರಸ್ತೆಯಿಂದ ಬನಘಟ್ಟ ರಸ್ತೆಯವರೆಗೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಜಾಗವಿದ್ದರೆ ಅಂತಹ ಜಾಗಗಳಲ್ಲಿ 4 ಪಥ ರಸ್ತೆಯನ್ನು ಹಾಗೂ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರದ ಜಾಗವಿದ್ದಲ್ಲಿ 2 ಪಥ ರಸ್ತೆಯನ್ನು ನಿರ್ಮಾಣ ಮಾಡಲು 46 ಕೋಟಿ ರೂಪಾಯಿಯ ದರಖಾಸ್ತು ನೀಡಲಾಗಿದೆ ಎಂದು ತಿಳಿದು ಬಂದಿದೆ.
ಈಗಿನ ಚಾಮರಾಜನಗರ ಜೀವರ್ಗಿ 150-ಎ ರಸ್ತೆಯ ಅಗಲ 21 ಅಡಿ ಇದ್ದು ಎಡ ಭಾಗದಲ್ಲಿ 3.5 ಮೀಟರ್ ಹಾಗೂ ಬಲ ಭಾಗದಲ್ಲಿ 3.5 ಮೀಟರ್ ಒಟ್ಟು 7 ಮೀಟರ್ ವಿಸ್ತರಣೆಯಾಗಲಿದೆ.
ಈ ಹಿಂದೆ ಜನಪ್ರತಿನಿಧಿಗಳು, ಸಂಘಟನೆಗಳು ಹಾಗೂ ಅಧಿಕಾರಿಗಳು ಹಲವು ಬಾರಿ ಮನವಿ ಸಲ್ಲಿಸಿದ್ದರು ಗಮನ ಕೊಟ್ಟಿರಲಿಲ್ಲ ಈ ಬಾರಿ ಮನವಿಗೆ ಗಮನ ಹರಿಸಿದಕ್ಕೆ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಮಂಡ್ಯ ರಕ್ಷಣಾ ವೇದಿಕೆಯ ವತಿಯಿಂದ ಧನ್ಯವಾದಗಳನ್ನು ತಿಳಿಸಲಾಯಿತು.ಇದನ್ನು ಓದಿ –ನಟ ಕಿಚ್ಚ ಸುದೀಪ್ ತಾಯಿ ನಿಧನ
ರಸ್ತೆ ಕಿರಿದಾದ ಕಾರಣ 17 ಜನರ ಪ್ರಾಣ ಅಪಘಾತಕ್ಕೆ ತುತ್ತಾಗಿವೆ, ಅಪಘಾತದಲ್ಲಿ ಹೋಗಿರುವ 17 ವ್ಯಕ್ತಿಗಳ ಮನೆಯವರಿಗೆ ತಲಾ 10 ಲಕ್ಷ ರೂಪಾಯಿ ಅಷ್ಟು ಪರಿಹಾರ ನೀಡಬೇಕೆಂದು ಮಂಡ್ಯ ರಕ್ಷಣಾ ವೇದಿಕೆಯ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಗುದ್ದಲಿ ಪೂಜೆ ನೆರವೇರಿಸಿದ ಕೇಂದ್ರ ಸಚಿವರಾದ H.D.ಕುಮಾರಸ್ವಾಮಿಯವರಿಗೆ ಮನವಿ ಪತ್ರ ಸಲ್ಲಿಸಿದರು.
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ