March 11, 2026

Newsnap Kannada

The World at your finger tips!

WhatsApp Image 2024 10 19 at 9.52.10 PM

ಬೊಮ್ಮಾಯಿ ಪುತ್ರನಿಗೆ ಶಿಗ್ಗಾವಿ,ಬಂಗಾರುಗೆ ಸಂಡೂರು ಬಿಜೆಪಿ ಟಿಕೆಟ್

Spread the love

ಬೆಂಗಳೂರು: ಪ್ರತಿಷ್ಠೆಯ ಕಣವಾಗಿರುವ ಶಿಗ್ಗಾಂವಿ, ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ಟಿಕೆಟ್ ಘೋಷಿಸಿದೆ.

ಶಿಗ್ಗಾಂವಿಯಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿಗೆ ಮತ್ತು ಸಂಡೂರಿನಲ್ಲಿ ಬಂಗಾರು ಹನಮಂತು ಅವರನ್ನು ಕಣಕ್ಕೆ ಇಳಿಸುತ್ತಿರುವುದಾಗಿ ಬಿಜೆಪಿ ಹೈಕಮಾಂಡ್ ಪ್ರಕಟಿಸಿದೆ. ಆದರೆ ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಮಾತ್ರ ಘೋಷಣೆಯಾಗಿಲ್ಲ.



ಈ ಕ್ಷೇತ್ರದ ಟಿಕೆಟ್​ ಯಾರಿಗೆ ಎಂಬ ಕುತೂಹಲ ಮೂಡಿಸಿದೆ.ಇದನ್ನು ಓದಿ –ಯಜಮಾನಿಯರಿಗೆ ಸಿಹಿಸುದ್ದಿ: 2 ತಿಂಗಳ ಗೃಹಲಕ್ಷ್ಮಿ ಹಣ ಖಾತೆಗೆ ಜಮಾ!

ಉಪಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ರಿಲೀಸ್: ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯು ಇಂದು ವಯನಾಡು ಲೋಕಸಭಾ ಮತ್ತು ಕರ್ನಾಟಕ ಸೇರಿ ಹಲವು ರಾಜ್ಯ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

error: Content is protected !!