December 18, 2024

Newsnap Kannada

The World at your finger tips!

crime,bengaluru,racecourse

ಕಲಬುರ್ಗಿ ಜೈಲಲ್ಲಿ ಕೈದಿಗಳಿಗೆ ‘ರಾಜಾತಿಥ್ಯ’ ಆರೋಪ: ಸಿಸಿಬಿ ತನಿಖೆಗೆ ಕಮಿಷನರ್ ಆದೇಶ

Spread the love

ಕಲಬುರ್ಗಿ: ಕಲಬುರ್ಗಿ ಕೇಂದ್ರ ಕಾರಾಗೃಹದಲ್ಲಿ ನಡೆದ ‘ರಾಜಾತಿಥ್ಯ’ ಕೇಸ್ ಸಂಬಂಧಿತ ಪ್ರಕರಣಕ್ಕೆ ಈಗ ಸಿಸಿಬಿ (ಕೇಂದ್ರ ಅಪರಾಧ ವಿಭಾಗ) ತನಿಖೆ ನಡೆಸುವಂತೆ ಕಲಬುರ್ಗಿ ಪೊಲೀಸ್ ಕಮಿಷನರ್ ಡಾ. ಶರಣಪ್ಪ ಆದೇಶಿಸಿದ್ದಾರೆ. ಈ ಪ್ರಕರಣವನ್ನು ಎಸಿಪಿ ನೇತೃತ್ವದಲ್ಲಿ ತನಿಖೆ ಮಾಡುವಂತೆ ತಿಳಿಸಲಾಗಿದೆ.

ಪ್ರಕರಣದ ಹಿನ್ನೆಲೆ:

ಇದು ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಿದ್ದು, ನಟ ದರ್ಶನ್ ಮೊದಲಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದರು. ಅಲ್ಲಿ ಅವರಿಗೆ ವಿಶೇಷ ಸೌಲಭ್ಯ ಸಿಕ್ಕ ವಿಷಯ ಹೊರಬಂದ ನಂತರ, ಅವರನ್ನು ಬಳ್ಳಾರಿ ಜೈಲಿಗೆ ವರ್ಗಿಸಲಾಗಿತ್ತು. ಈ ಮಧ್ಯೆ, ಕಲಬುರ್ಗಿ ಕೇಂದ್ರ ಕಾರಾಗೃಹದಲ್ಲೂ ಈ ರೀತಿಯ ಘಟನೆಗಳು ನಡೆದಿರುವ ಆರೋಪ ಕೇಳಿ ಬಂದಿದೆ.

ತಿಂಗಳ ಹಿಂದೆ ಜೈಲಿನಲ್ಲಿರುವ ಕೈದಿಗಳು, ಸ್ಮಾರ್ಟ್‌ಫೋನ್ ಬಳಸಿ ವಿಡಿಯೋ ಕರೆ ಮಾಡಿ ಮಾತನಾಡುತ್ತಿದ್ದ ಫೋಟೋಗಳು ಹಾಗೂ ಗಾಂಜಾ ಸೇದುತ್ತಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವಿಶೇಷವಾಗಿ, ಕೈದಿಗಳು ಜೈಲಿನಲ್ಲಿಯೇ ಐಷಾರಾಮಿ ಸೌಲಭ್ಯ ಪಡೆಯುತ್ತಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿವೆ.

ಈ ಪ್ರಕರಣದಲ್ಲಿ ವಿಪುಲ, ಸಾಗರ್ ಹಾಗೂ ಸೋನು ಎಂಬ ಮೂರು ಕೈದಿಗಳು, ಜೈಲಿನ ಕೋಣೆಯೊಳಗೆ ಕುಳಿತು ಸ್ಮಾರ್ಟ್‌ಫೋನ್ ಮೂಲಕ ವಿಡಿಯೋ ಕರೆ ಮಾಡುತ್ತಾ, ಗಾಂಜಾ ಸೇದುತ್ತಿರುವ ದೃಶ್ಯಗಳು ಬಹಿರಂಗವಾಗಿವೆ. ಕಳೆದ ತಿಂಗಳು ಜೈಲಿನಲ್ಲಿಯೇ ಗಾಂಜಾ ಸಾಗಣೆ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಯೊಬ್ಬರು ಬಂಧಿತರಾಗಿದ್ದರು.ಇದನ್ನು ಓದಿ –ಜೈಲಿನಲ್ಲಿರುವ ದರ್ಶನ್‌ಗೆ ಮತ್ತೊಂದು ಸಂಕಷ್ಟ: ನಿರ್ಮಾಪಕನ ಬೆದರಿಕೆ ದೂರು ಪ್ರಕರಣ ಮತ್ತೆ ಮುಂದುವರಿಕೆ

ಈ ಹಿನ್ನಲೆಯಲ್ಲಿ, ಕಲಬುರ್ಗಿ ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿರುವ ಈ ರೀತಿಯ ಘಟನೆಗಳ ತನಿಖೆಯನ್ನು ಸಿಸಿಬಿ ಗೆ ವಹಿಸಿ, ಕಠಿಣ ಕ್ರಮ ಕೈಗೊಳ್ಳಲು ಆದೇಶ ನೀಡಲಾಗಿದೆ.

Copyright © All rights reserved Newsnap | Newsever by AF themes.
error: Content is protected !!