ಇಂದು ಸಂಜೆ ಮೈಸೂರಿನಿಂದ ದರ್ಬಾಂಗ್ ಗೆ ತೆರಳುತ್ತಿದ್ದ Mysuru-Darbhanga Express ರೈಲು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತ ತಮಿಳುನಾಡಿನ ಚೆನ್ನೈ ರೈಲ್ವೇ ವಿಭಾಗದ ಗುಮ್ಮಿಡಿಪೊಂಡಿ ಬಳಿಯ ಕವರಪೇಟೈ ಬಳಿ ಸಂಭವಿಸಿದೆ.
ಅಪಘಾತದ ಪರಿಣಾಮ, Mysuru-Darbhanga Express ರೈಲಿನ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ರಕ್ಷಣಾ ಪಡೆಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿವೆ.ಇದನ್ನು ಓದಿ –ರಾತ್ರೋರಾತ್ರಿ ಕೋಟ್ಯಧಿಪತಿಯಾದ ಮಂಡ್ಯದ ಮೆಕ್ಯಾನಿಕ್: ಕೇರಳದ ಓಣಂ ಲಾಟರಿಯಲ್ಲಿ 25 ಕೋಟಿ ಗೆಲುವು
ಈ ಘಟನೆ ಸಂಬಂಧ ಹೆಚ್ಚಿನ ಮಾಹಿತಿಗಳು ಇನ್ನೂ ಲಭ್ಯವಾಗಬೇಕಿದೆ. ಇದಲ್ಲದೆ, ಹಲವು ಪ್ರಯಾಣಿಕರು ತಮ್ಮ ಸ್ಥಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ ಸಹಿತ ಹಂಚಿಕೊಂಡು, ರಕ್ಷಣಾ ತಂಡಗಳ ಸಹಾಯವನ್ನು ಕೋರಿದ್ದಾರೆ.
More Stories
ಬೊಲೆರೋ ಡಿಕ್ಕಿಯಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ
ಗೃಹಲಕ್ಷ್ಮಿ ಯೋಜನೆ ಸ್ಥಗಿತ ಮಾಡುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇತಿಹಾಸ ಸೃಷ್ಟಿಸಲಿದೆ: ಸಚಿವ ಚಲುವರಾಯಸ್ವಾಮಿ