ಮಂಡ್ಯ: ಪಾಂಡವಪುರದ ಮೆಕ್ಯಾನಿಕ್ ಅಲ್ತಾಫ್ ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಘಟನೆ ನಡೆದಿದೆ. ಕೇರಳದ ಓಣಂ ಲಾಟರಿಯಲ್ಲಿ 25 ಕೋಟಿ ರೂ. ಗೆದ್ದಿದ್ದಾರೆ.
ಪಾಂಡವಪುರ ನಿವಾಸಿ ಅಲ್ತಾಫ್, ವಯನಾಡಿನಲ್ಲಿ ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದ ವೇಳೆ ಕೇವಲ 250 ರೂ. ನೀಡಿ ಲಾಟರಿ ಟಿಕೆಟ್ ಖರೀದಿಸಿದ್ದರು. ಈ ಓಣಂ ಲಾಟರಿಗಾಗಿ ಸುಮಾರು 71 ಲಕ್ಷ ಜನರು ಟಿಕೆಟ್ ಖರೀದಿಸಿದ್ದರ ನಡುವೆ, ಅದೃಷ್ಟ ಅಲ್ತಾಫ್ ಅವರ ಮೊರೆ ಹೊತ್ತಿತ್ತು.
ಲಾಟರಿ ಫಲಿತಾಂಶ ಪ್ರಕಟವಾದ ನಂತರ, ಪಾಂಡವಪುರದ ಈ ಸಾಮಾನ್ಯ ಮೆಕ್ಯಾನಿಕ್ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ. ಅಲ್ತಾಫ್ ಈಗ ಲಾಟರಿ ಹಣ ಪಡೆಯಲು ಕೇರಳಕ್ಕೆ ತೆರಳಿದ್ದು, ಪ್ರಸ್ತುತ ಸಂಪರ್ಕಕ್ಕೆ ಸಿಗುತ್ತಿಲ್ಲ.ದರ್ಶನ್ , ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ಪೂರ್ಣ- ಅ.14ರಂದು ಆದೇಶ ಪ್ರಕಟ
25 ಕೋಟಿ ರೂ. ಗೆದ್ದರೂ, ತೆರಿಗೆ ಮತ್ತು ಇತರ ಕಡಿತಗಳನ್ನು ಹೊರತುಪಡಿಸಿ, ಸುಮಾರು 13 ಕೋಟಿ ರೂ. ಹಣ ಪಡೆಯುವ ನಿರೀಕ್ಷೆಯಿದೆ.
More Stories
ಬೊಲೆರೋ ಡಿಕ್ಕಿಯಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ
ಗೃಹಲಕ್ಷ್ಮಿ ಯೋಜನೆ ಸ್ಥಗಿತ ಮಾಡುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇತಿಹಾಸ ಸೃಷ್ಟಿಸಲಿದೆ: ಸಚಿವ ಚಲುವರಾಯಸ್ವಾಮಿ