ಸಿಎಂ ಗೆ ಶಿಕ್ಷೆ ಕೊಡಿಸುವವರೆಗೂ ನನ್ನ ಹೋರಾಟ ಮುಂದುವರೆಯುತ್ತೆ: ಸ್ನೇಹಮಯಿ ಕೃಷ್ಣ

Team Newsnap
1 Min Read

ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಅಧಿಕಾರಿಗಳ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿದೆ.

ಈ ಹಿನ್ನೆಲೆಯಲ್ಲಿ, ದೂರುದಾರ ಸ್ನೇಹಮಯಿ ಕೃಷ್ಣ ಅವರು ಇಂದು ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿ, “ಸಿಎಂಗೆ ಶಿಕ್ಷೆ ನೀಡುವವರೆಗೂ ನನ್ನ ಹೋರಾಟ ಮುಂದುವರೆಯುತ್ತದೆ” ಎಂದು ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಇದು ಹೋರಾಟದ ಆರಂಭ ಮಾತ್ರ, ಅಂತ್ಯವಲ್ಲ. ನಾನು ಇಂದು ಲೋಕಾಯುಕ್ತ ಕಚೇರಿಗೆ ಮನವಿ ನೀಡಲು ಬಂದಿದ್ದೇನೆ. ತನಿಖೆಯ ಕುರಿತಂತೆ ಮನವಿ ಸಲ್ಲಿಸಿದೆ. ಯಾವುದೇ ಕೇಸ್ ದಾಖಲಾಗಿದ್ರೆ, ನಾನು ಫಾಲೋ ಅಪ್ ಮಾಡುವೆ ಮತ್ತು ತನಿಖೆಗೆ ಸಹಕಾರಿ ಆಗುವ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿದೆ” ಎಂದರು.ತಿರುಪತಿ ಲಡ್ಡು ವಿವಾದ: ರಾಜಕೀಯದಿಂದ ಧರ್ಮವನ್ನು ದೂರವಿಡಲು ಸುಪ್ರೀಂ ಕೋರ್ಟ್ ಸೂಚನೆ

“ನನಗೆ ಈಗಲೂ ಲೋಕಾಯುಕ್ತ ತನಿಖೆ ಮೇಲೆ ನಂಬಿಕೆ ಇಲ್ಲ. ಆದ್ದರಿಂದ, ಇಂದು ನೇರವಾಗಿ ದೂರನ್ನು ಸಲ್ಲಿಸಲಾಗಿದೆ. ಸಿಬಿಐ ಮತ್ತು ಇಡಿಯನ್ನು ಮಾತ್ರ ನ್ಯಾಯ ಸಿಗಲಿದೆ” ಎಂದು ಅವರು ಹೋರಾಟ ಮುಂದುವರಿಸುವ ನಿರ್ಧಾರವನ್ನು ಪುನಃ ವ್ಯಕ್ತಪಡಿಸಿದ್ದಾರೆ.

Share This Article
Leave a comment