March 13, 2026

Newsnap Kannada

The World at your finger tips!

police 1

ಪಾದಚಾರಿಗಳ ಮೇಲೆ ಬೈಕ್ ಹರಿದು ನಾಲ್ವರು ಸಾವು

Spread the love

ವಿಜಯಪುರ: ಮೂತ್ರ ವಿಸರ್ಜನೆಗೆಂದು ರಸ್ತೆ ದಾಟುತ್ತಿದ್ದ ಯುವಕರ ಮೇಲೆ ಬೈಕ್ ಹರಿದು ಜಾತ್ರೆಗೆಂದು ಬಂದ ಯುವಕರು ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.

ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದ್ದು ,ಅಪಘಾತದಲ್ಲಿ ಇಬ್ಬರು ಪಾದಚಾರಿಗಳು ಹಾಗೂ ಬೈಕ್ ಸವಾರರಿಬ್ಬರು ಸೇರಿ ಒಟ್ಟು ನಾಲ್ವರು ಯುವಕರ ಮೃತಪಟ್ಟಿದ್ದಾರೆ.

ನಿನ್ನೆ ರಾತ್ರಿ 11 ಗಂಟೆಗೆ ಘಟನೆ ನಡೆದಿದ್ದು ಮೂವರು ಸಾವನ್ನಪ್ಪಿದ್ದು, ಇನ್ನೋರ್ವ ಆಸ್ಪತ್ರೆಯಲ್ಲಿ ಕೊನೆಯುಸಿರೆಳದಿದ್ದಾನೆ.

ಅನಿಲ ಖೈನೂರ (23), ಚೌಡಕಿ (22), ಕುಮಾರ ಪ್ಯಾಟಿ (18), ರಾಯಪ್ಪ ಬಾಗೇವಾಡಿ (24) ಮೃತ ದುರ್ದೈವಿಗಳಾಗಿದ್ದಾರೆ.

ಶಾಹಿದ ಹುನಗುಂದ, ಪ್ರಶಾಂತ ಕುರುಬಗೌಡರ, ಹನಮಂತ ಕರುಬಗೌಡರಗೆ ಗಂಭಿರ ಗಾಯಗಳಾಗಿದ್ದು, ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!