ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ 85 ಸಾವಿರ ಜನ ನಿವೇಶನಕ್ಕಾಗಿ ಅರ್ಜಿ ಹಾಕಿ ಕಾಯುತ್ತಿದ್ದಾರೆ ಎಂದು ಕೆ ಆರ್ ಕ್ಷೇತ್ರದ ಶಾಸಕ ಶ್ರೀವತ್ಸ ಹೇಳಿದರು
ವರ್ತಮಾನದ ಜೊತೆ ಮಾತನಾಡಿದ ಶಾಸಕರು ಮೂಡಾದಿಂದ ಕಳೆದ 15 ವರ್ಷಗಳಿಂದಲೂ ಆಕಾಂಕ್ಷಿತರಿಗೆ ಒಂದೇ ಒಂದು ಸೈಟ್ ನೀಡಿಲ್ಲ. ಆದರೆ, ರಿಯಲ್ ಎಸ್ಟೇಟ್ ದಂಧೆ ಮಾಡುವುದರಲ್ಲಿ ಮೂಡ ಒಂದು ಕೈ ಮುಂದಿದೆ ಎಂದು ಕುಟುಕಿದರು.
ಮೂಡಾದಲ್ಲಿ ನಡೆದಿರುವ ಎಲ್ಲಾ ಅವ್ಯವಹಾರಗಳ ಕುರಿತು ತನಿಖೆ ಮಾಡಿಸಬೇಕು. ಕಾನೂನು ಉಲ್ಲಂಘನೆ ಮಾಡಿರುವ ಮತ್ತು ಬೇಕಾಬಿಟ್ಟಿ ನಿವೇಶನ ಹಂಚಿರುವ ನಿವೇಶನಗಳನ್ನು ಮತ್ತೆ ವಾಪಸ್ ಪಡೆದು ಬಡವರಿಗೆ ಹಂಚುವ ಕೆಲಸ ಆಗಬೇಕು ಎಮದು ಶಾಸಕ ಶ್ರೀವತ್ಸ ಆಗ್ರಹಿಸಿದರು.ಮುಡಾ ಕೇಸ್: ಸಿಎಂ ಸಿದ್ದು ಅರ್ಜಿ ವಿಚಾರಣೆ ಆ.31ಕ್ಕೆ
ಮುಡಾದಲ್ಲಿ ಮೂಲ ದಾಖಲಾತಿಗಳೇ ಮಾಯವಾಗಿವೆ ಅವುಗಳ ಬಗ್ಗೆ ತನಿಖೆಯಾಗಬೇಕು. ಸಿಎಂ ಸಿದ್ದರಾಮಯ್ಯ ಪತ್ನಿಯ ಪ್ರಕರಣವೂ ಸೇರಿದಂತೆ ಮುಡಾದ ಎಲ್ಲಾ ಅವ್ಯವಹಾರಗಳ ಬಗ್ಗೆಯೂ ತನಿಖೆ ನಡೆಸಬೇಕು. ಹಗರಣದಲ್ಲಿ ಯಾವುದೇ ಪಕ್ಷದವರಿದ್ದರೂ ತಪ್ಪಿತಸ್ಥರಿದ್ದರೆ ಶಿಕ್ಷೆಯಾಗಬೇಕು. ಅಕ್ರಮವಾಗಿ ಹಂಚಿರುವ ನಿವೇಶನಗಳನ್ನು ವಾಪಸ್ ಪಡೆದು ಮುಡಾ ನಿವೇಶನಕ್ಕಾಗಿ ಅರ್ಜಿ ಹಾಕಿರುವ ಸುಮಾರು 85 ಸಾವಿರ ಆಕಾಂಕ್ಷಿಗಳಿಗೆ ನಿವೇಶನ ಹಂಚಬೇಕು ಎಂದು ಒತ್ತಾಯಿಸಿದರು.
More Stories
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ