ಇಂದು ಟಾಲಿವುಡ್ ನಟ ನಾಗಚೈತನ್ಯ ತಮ್ಮ ಹೈದರಾಬಾದ್‌ನ ನಿವಾಸದಲ್ಲಿ ನಟಿ ಶೋಭಿತಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಈ ಸಿಹಿಸುದ್ದಿಯನ್ನು ನಾಗಾರ್ಜುನ ಅಕ್ಕಿನೇನಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಮ್ಮ ಮಗ ನಾಗಚೈತನ್ಯ ಮತ್ತು ಶೋಭಿತಾ ಅವರೊಂದಿಗೆ ಇಂದು ಬೆಳಗ್ಗೆ 9:42ಕ್ಕೆ ನಡೆದ ನಿಶ್ಚಿತಾರ್ಥವನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಶೋಭಿತಾಳನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸಲು ಖುಷಿಯಾಗುತ್ತಿದೆ. ಈ ಜೋಡಿಗೆ ಅಭಿನಂದನೆಗಳು. ಅವರಿಗೆ ಜೀವನಪೂರ್ತಿ ಸಂತೋಷ ಮತ್ತು ಪ್ರೀತಿಯಿಂದ ಕೂಡಿರಲಿ ಎಂದು ಹಾರೈಸುತ್ತೇನೆ. ದೇವರು ಒಳ್ಳೆಯದು ಮಾಡಲಿ. 8-8-8 ಪ್ರೀತಿಯ ಆರಂಭ ಎಂದು ಈ ಜೋಡಿಗೆ ನಾಗಾರ್ಜುನ ಶುಭಕೋರಿದ್ದಾರೆ.
ಸಮಂತಾ ಜೊತೆಗಿನ ಹಲವು ವರ್ಷಗಳ ಪ್ರೀತಿಗೆ ನಾಗಚೈತನ್ಯ 2021ರಲ್ಲಿ ಡಿವೋರ್ಸ್ ಪಡೆಯುವ ಮೂಲಕ ಬೇರೆಯಾದರು.SSLC ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು
ಇದೀಗ ನಿಶ್ಚಿತಾರ್ಥ ಸುದ್ದಿ ಮೂಲಕ ಅವರು ಅಭಿಮಾನಿಗಳಿಗೆ ಸ್ಪಷ್ಟತೆ ನೀಡಿದ್ದಾರೆ.
More Stories
ಮಂಡ್ಯ: ಕಾವೇರಿ ನದಿಯಲ್ಲಿ ಮುಳುಗಿ ಬಿ.ಇ ವಿದ್ಯಾರ್ಥಿ ದುರ್ಮರಣ
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ 89 ಉದ್ಯೋಗಾವಕಾಶ
ಕೆನರಾ ಬ್ಯಾಂಕ್ನಲ್ಲಿ 60 ಹುದ್ದೆಗಳಿಗೆ ಅರ್ಜಿ ಆಹ್ವಾನ