ತ್ರಿಮೂರ್ತಿ ರೂಪನೆ ಗುರುವೆ,ಹೇ ವರಕಲ್ಪ ತರುವೆ!
ನಿನ ಪಾದ ಸೇವೆಯಲಿ,ಧನ್ಯಳು ನಾನಾಗುವೆ!
ವೈರಾಗ್ಯ ಸಾಮ್ಮಾಜ್ಯವ ಆಳುವಾ ಪ್ರಭುವೇ!
ಸಚ್ಚಿದಾನಂದ ಗುರುವೆ,
ನಿನ ಪಾದಕೆರಗುವೆ!
ಬ್ರಹ್ಮ ಗೀಚಿದಾ ಬರಹದ, ತಾಪಕೆ ತಂಪೆರೆಯುವೆ!
ಪಾಪ ಕರ್ಮದಾ ಫಲಕೆ, ಪರಿಹಾರ ಹುಡುಕುವೆ!
ಆಪತ್ತನು ಕಂಡೊಡನೆ,ಉಪಾಯವ ತೋರುವೆ!
ಗುರು ಸಾಕ್ಷಾತ್ ಪರಂಬ್ರಹ್ಮ! ನಿನ ಪಾದಕೆರಗುವೆ!
ಭವ ಭಾದೆಯ ನಾವೆಯ, ಸುಲಭದೆ ದಾಟಿಸುವೆ!
ಮೋಹ ಮಮಕಾರಗಳ,ಬಂಧವ ಸಡಿಲಿಸುವೆ!
ವಿರಾಗದ ಹಾದಿಯ ಸುಗಮವ ನೀ ಮಾಡುವೆ!
ಗುರು ಸಾಕ್ಷಾತ್ ಮಹಾವಿಷ್ಣುವೆ, ನಿನ ಪಾದಕೆರಗುವೆ!
ಒಡಲಿನ ಅರಿಗಳ ಬೆಂಕಿಗೆ, ಜಲ ನೀನಾಗಿರುವೆ!
ಉಡುಗಿಸಿ ಬೆಡಗಿನ ಬಾಳ್ವೆಯ, ಸರಳ ದಾರಿ ತೋರುವೆ!
ಹೀನ ಗುಣಗಳನ್ನೆಲ್ಲ ತರಿದು, ದೀನಳನ್ನ ಮಾಡುವೆ!
ಗುರು ಸಾಕ್ಷಾತ್ ಪರಮೇಶ್ವರ, ನಿನ ಪಾದಕೆರಗುವೆ!

ರೂಪ ಮಂಜುನಾಥ
ಹೊಳೆನರಸೀಪುರ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು