February 21, 2026

Newsnap Kannada

The World at your finger tips!

dr. B N gangadhar

ಡಾ.ಬಿ.ಎನ್.ಗಂಗಾಧರ್ ರಾಷ್ಟ್ರೀಯ ವೈದ್ಯಕೀಯ ಆಯೋಗದ ಮುಖ್ಯಸ್ಥರಾಗಿ ನೇಮಕ

Spread the love

ಬೆಂಗಳೂರು : ಕನ್ನಡಿಗ ಡಾ.ಬಿ.ಎನ್ ಗಂಗಾಧರ್ ರಾಷ್ಟ್ರೀಯ ವೈದ್ಯಕೀಯ ಆಯೋಗದ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.

ನಿಮ್ಹಾನ್ಸ್ (NIMHANS) ನಿರ್ದೇಶಕರಾಗಿ ಗಂಗಾಧರ್ ಅವರು ಕಾರ್ಯನಿರ್ವಹಿಸಿದ್ದು, ಪದ್ಮಶ್ರೀ ಪುರಸ್ಕೃತರೂ ಆಗಿದ್ದಾರೆ.

ಡಾ.ಗಂಗಾಧರ್ ಪ್ರಸ್ತುತ ವೈದ್ಯಕೀಯ ಮೌಲ್ಯಮಾಪನ ಹಾಗೂ ರೇಟಿಂಗ್ ಮಂಡಳಿ ಅಧ್ಯಕ್ಷರಾಗಿದ್ದಾರೆ. ರಾಷ್ಟ್ರೀಯ ವೈದ್ಯಕೀಯ ಮಂಡಳಿ ಮುಖ್ಯಸ್ಥರಾಗಿದ್ದ ಡಾ.ಎಸ್.ಸಿ ಶರ್ಮಾ ಅಧಿಕಾರ ಅವಧಿ ಕಳೆದ ಸಪ್ಟಂಬರ್‌ನಲ್ಲಿ ಮುಗಿದಿದ್ದು ,ಡಾ.ಸಂಜಯ್ ಬಿಹಾರಿ ಅವರನ್ನು ವೈದ್ಯಕೀಯ ಮೌಲ್ಯಮಾಪನ ಮತ್ತು ರೇಟಿಂಗ್ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.ಮೈಸೂರಿನಲ್ಲಿ ಡೆಂಗ್ಯೂ ಮಹಾಮಾರಿಗೆ ಆರೋಗ್ಯಾಧಿಕಾರಿ ಬಲಿ

ಡಾ.ಅನಿಲ್ ಡಿಕ್ರೂಜ್ ಅವರನ್ನು ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮಂಡಳಿ ಪೂರ್ಣಾವಧಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದ್ದು , ಡಾ.ಅನಿಲ್ ಡಿಕ್ರೂಜ್ ಮುಂಬೈನ ಅಪೊಲೊ ಆಸ್ಪತ್ರೆಯ ಕ್ಯಾನ್ಸರ್ ಚಿಕಿತ್ಸಾ ವಿಭಾಗದ ನಿರ್ದೇಶಕರಾಗಿದ್ದಾರೆ. ಡಾ ರಾಜೇಂದ್ರ ಅಚ್ಯುತ ಬಡ್ಡೆ ಅರೆಕಾಲಿಕ ಸದಸ್ಯರಗಿ ನೇಮಕಗೊಂಡಿದ್ದಾರೆ.

error: Content is protected !!