ಬೆಂಗಳೂರು :ಜೂನ್ 7ರಂದು ಸ್ಯಾಂಡಲ್‌ವುಡ್ ನಟ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಡಿವೋರ್ಸ್ ಪಡೆದಿದ್ದದ್ದು ,ಸೋಷಿಯಲ್ ಮೀಡಿಯಾದಲ್ಲಿ ಇಬ್ಬರ ಡಿವೋರ್ಸ್ ಬಗ್ಗೆ ಹಲವು ವದಂತಿಗಳು ಹಬ್ಬಿತ್ತು.
ಬೆಂಗಳೂರಿನ ರೆಸಾರ್ಟ್‌ವೊಂದರಲ್ಲಿ ಚಂದನ್ ಮತ್ತು ನಿವೇದಿತಾ ಸುದ್ದಿಗೋಷ್ಠಿ ಆಯೋಜಿಸಿ ,ನಮ್ಮಿಬ್ಬರನಡುವೆ ಹೊಂದಾಣಿಕೆ ಇಲ್ಲದ ಕಾರಣ ಡಿವೋರ್ಸ್ ಪಡೆದಿದ್ದೇವೆ ಎಂದು ಚಂದನ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
ಚೆನ್ನಾಗಿದ್ದ ಜೋಡಿ ಯಾಕೆ ಡಿವೋರ್ಸ್ ಪಡೆದರು ಎಂಬ ಬಗ್ಗೆ ಹಲವರಿಗೆ ಅನುಮಾನ ಇದೆ. ಹೀಗಾಗಿ ಈ ಎಲ್ಲದರ ಬಗ್ಗೆ ಸ್ಪಷ್ಟನೆ ಕೊಡುತ್ತೇವೆ ಎಂದು ಚಂದನ್ ಶೆಟ್ಟಿ ಮಾತನಾಡಿದ್ದಾರೆ.
ನಮ್ಮಿಬ್ಬಿರ ಜೀವನ ಶೈಲಿ ಬೇರೆ ,ಇಬ್ಬರ ನಡುವೆ ಸಾಕಷ್ಟು ಸಮಸ್ಯೆ ಆಗುತ್ತಿತ್ತು. ಸಂಬಂಧ ಸರಿ ಮಾಡಲು ಸಾಕಷ್ಟು ಪ್ರಯತ್ನ ಮಾಡಿದ್ದೇವೆ , ಆದರೆ ಇಬ್ಬರೂ ಒಮ್ಮತದಿಂದ ಡಿವೋರ್ಸ್ ಪಡೆದಿದ್ದೇವೆ ಎಂದು ಚಂದನ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
ನಮ್ಮಿಬ್ಬರ ನಡುವೆ ದ್ವೇಷ, ಭಿನ್ನಾಭಿಪ್ರಾಯ ಇಲ್ಲ ,ಇಬ್ಬರೂ ಗೌರವಯುತವಾಗಿಯೇ ಬೇರೆಯಾಗಿದ್ದೇವೆ.ಯುವರಾಜ್‌ಕುಮಾರ್ ಶ್ರೀದೇವಿ ದಾಂಪತ್ಯದಲ್ಲಿ ಬಿರುಕು- ಡಿವೋರ್ಸ್‌ಗೆ ಮುಂದಾದ ದಂಪತಿ
ಮಗುವಿನ ವಿಚಾರಕ್ಕೆ ನಾವಿಬ್ಬರೂ ಬೇರೇ ಆಗಿಲ್ಲ , ಇದು ಸುಳ್ಳು ಸುದ್ದಿ ಎಂದಿದ್ದಾರೆ. ನಿವೇದಿತಾ ನನ್ನ ಕಡೆಯಿಂದ ಜೀವನಾಂಶ ಕೇಳಿಲ್ಲ, ನಾನು ಕೊಟ್ಟಿಲ್ಲ ಎಂದು ಚಂದನ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
More Stories
ವಕ್ಫ್ ಆಸ್ತಿ ಸಂಬಂಧ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚನೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ರಾಜ್ಯಾದ್ಯಂತ ಡಿ. 31 ರಿಂದ ಸಾರಿಗೆ ನೌಕರರ ಮುಷ್ಕರ
ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಬೆಂ-ಮೈ ಎಕ್ಸ್ಪ್ರೆಸ್ವೇ ಸಂಚಾರ ಮಾರ್ಗದಲ್ಲಿ ಬದಲಾವಣೆ