October 18, 2024

Newsnap Kannada

The World at your finger tips!

family

ಯಾರಿಗೆ ಯಾರೋ ..

Spread the love

ರಾಮು ಅವರದು ಪ್ರತಿಷ್ಠಿತ ಕುಟುಂಬ. ರವಿ ಅವರ ಮೊದಲ ಹೆಂಡತಿಯ ಮಗ. ಎಳೆ ಪ್ರಾಯದಲ್ಲೇ ಹೆಂಡತಿಯನ್ನು ಕಳೆದುಕೊಂಡ ರಾಮು ಸುಮಿತ್ರಳನ್ನು ಮದುವೆಯಾಗಿದ್ದಾರೆ. ಆಕೆಯ ಮಗಳು ಪ್ರಿಯ. ಸುಮಿತ್ರ ರವಿಯನ್ನು ತಾಯಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಾಳೆ.

PUC ಮುಗಿಸಿದ ರವಿಗೆ ಮೆಡಿಕಲ್ ಸೀಟು ಸಿಗುತ್ತದೆ. ಅವನು ಹಾಸ್ಟೆಲ್ ಸೇರುತ್ತಾನೆ.

ಈಗ ರವಿ ಹೆಸರಾಂತ ಡಾಕ್ಟರ್. ವಯಸ್ಸಾದ ತಂದೆ ತಾಯಿಯನ್ನು ತನ್ನ ಜತೆಯಲ್ಲಿ ಇಟ್ಟುಕೊಂಡಿದ್ದಾನೆ. ತಂಗಿ ಮದುವೆಯಾಗಿ ಅದೇ ನಗರದಲ್ಲಿ ಇದ್ದಾಳೆ.

ತಂದೆ ತಾಯಿಗೆ ಮಗನಿಗೆ ಮದುವೆ ಮಾಡುವ ಹಂಬಲ. ರವಿ ತಾನೊಬ್ಬ ಡಾಕ್ಟರ್ ಹುಡುಗಿಯನ್ನು ಪ್ರೀತಿಸಿರುವುದಾಗಿ ಆಕೆ ವಿದೇಶದಲ್ಲಿ MS ಓದುತ್ತಿರುವುದಾಗಿ ತಿಳಿಸುತ್ತಾನೆ. ಓದು ಮುಗಿದ ನಂತರ ಮದುವೆ ಎಂದು ತಂದೆ ತಾಯಿಗೆ ತಿಳಿಸಿದ್ದಾನೆ.

ರವಿಗೆ ಅಘಾತ. ಪ್ರೀತಿಸಿದ ಹುಡುಗಿ ವಿದೇಶದಲ್ಲಿಯೇ ಒಬ್ಬನನ್ನು ಮದುವೆಯಾಗಿ ಅಲ್ಲೇ ನೆಲೆಸುತ್ತಾಳೆ. ಕೆಲ ಕಾಲದ ನಂತರ ತನ್ನ ಜತೆಯೇ ಕೆಲಸಮಾಡುತ್ತಿದ್ದ ಡಾಕ್ಟರನ್ನು ರವಿ ಮದುವೆಯಾಗುತ್ತಾನೆ. ಈಗ ಅವರದು ಸುಖಿ ಕುಟುಂಬ.

ವರುಷಗಳು ಉರುಳಿವೆ. ರವಿಯ ಹೆಂಡತಿ ತಾನೊಬ್ಬ ರೋಗಿಗೆ ಚಿಕಿತ್ಸೆ ನೀಡುತ್ತಿರುವುದಾಗಿ ಆಕೆಗೆ ಮೆದುಳು ಸಂಬಂಧಿ ಕಾಯಿಲೆ ಎಂದು ತಿಳಿಸುತ್ತಾಳೆ. ಒಂದು ದಿನ ತಾನು ಆ ರೋಗಿಯನ್ನು ನೋಡಲು ಹೋಗುವುದಾಗಿ ತಿಳಿಸುತ್ತಾಳೆ. ರವಿ ತನಗೂ ಏನು ಕೆಲಸವಿಲ್ಲ, ತಾನು ಬರುವುದಾಗಿ ಹೇಳಿ ಹೆಂಡತಿಯೊಡನೆ ತೆರಳುತ್ತಾನೆ. ರೋಗಿಯನ್ನು ನೋಡಲು ತೆರಳಿದ ರವಿಗೆ ಆಶ್ಚರ್ಯ. ರೋಗಿ ಮತ್ತಾರು ಅಲ್ಲ ತನ್ನ ಪ್ರೇಯಸಿಯೇ.

ನಡೆದದ್ದು ಇಷ್ಟೆ. ತನ್ನ ಹೆಂಡತಿ ರೋಗಿ ಎಂದು ತಿಳಿದಮೇಲೆ ಗಂಡ ಆಕೆಯಿಂದ ಬೇರಾಗುತ್ತಾನೆ. ವಿದೇಶದಿಂದ ಮರಳಿದ ಆಕೆ ಒಂದು ಹೋಂ ನಲ್ಲಿ ಆಶ್ರಯ ಪಡೆಯುತ್ತಾಳೆ.

ರವಿ ಹೆಂಡತಿಗೆ ಆಕೆ ತನ್ನ ಪ್ರೇಯಸಿ ಎಂದು ತಿಳಿಸುತ್ತಾನೆ. ಆಕೆ ಬಹಳ ದಿನ ಬದುಕುವುದಿಲ್ಲ ಎಂಬುದು ಡಾಕ್ಟರಿಗೂ, ರೋಗಿಗೂ ತಿಳಿದಿರುತ್ತದೆ.

ಆಕೆಯನ್ನು ಮನೆಗೆ ಕರೆತರುತ್ತಾರೆ. ಕೊನೆಯ ದಿನಗಳಲ್ಲಿ ನೆಮ್ಮದಿಯಿಂದ ಇರಲೆಂದು. ಆಕೆ ಹೇಳುತ್ತಾಳೆ ತಾನು ಸಾಯುತ್ತೇನೆ ಎನ್ನುವುದಕ್ಕಿಂತಲೂ ರವಿಗೆ ಮೋಸ ಮಾಡಿದೆನಲ್ಲ ಎಂಬ ಚಿಂತೆಯೇ ತನ್ನನ್ನು ಕಾಡುತ್ತಿರುವುದೆಂದು. ರವಿ ಸಮಾಧಾನ ಪಡುಸುತ್ತಾನೆ.

ಎರಡು ತಿಂಗಳ ನಂತರ ಆಕೆ ಇಹಲೋಕ ಯಾತ್ರೆ ಮುಗಿಸುತ್ತಾಳೆ. ರವಿಯೇ ಆಕೆಯ ಅಪರ ಕರ್ಮ ನೆರವೇರಿಸುತ್ತಾನೆ.

ganesh jagannath

ವಿಧಿಯ ಆಟವೇ ಹಾಗೆ. ಆಕೆಯ ಕೊನೆಯ ದಿನಗಳನ್ನು ರವಿಯ ಮನೆಯಲ್ಲಿ ಕಳೆಯುವಂತೆ ಮಾಡಿತ್ತು.

ಗಣೇಶ್ ಜಗನ್ನಾಥ್

Copyright © All rights reserved Newsnap | Newsever by AF themes.
error: Content is protected !!