December 24, 2024

Newsnap Kannada

The World at your finger tips!

tech summit

ನಾವೀನ್ಯತೆ- ಉದ್ದಮಶೀಲತೆಗೆ ಹೆಚ್ಚು ಪ್ರಾಶಸ್ತ್ಯ – ಸೆಲ್ವಕುಮಾರ್

Spread the love
  • ಬೆಂಗಳೂರಿನಲ್ಲಿ ನಡೆಯುವ ಟೆಕ್ ಶೃಂಗಸಭೆಗೆ ಪೂರ್ವ ಸಿದ್ದತೆ

ಬೆಂಗಳೂರು :ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಅಸೋಸಿಯೇಷನ್ (ELCIA) ಜುಲೈ 26 -2024 ರಂದು ನಡೆಯುವ ಬಹು ನಿರೀಕ್ಷಿತ ELCIA ಟೆಕ್ ಶೃಂಗಸಭೆಗಾಗಿ ಪೂರ್ವಸಿದ್ದತಾ ಕಾರ್ಯಕ್ರಮವನ್ನು ನಗರದ ಖಾಸಗಿ ಹೋಟೆಲ್‌ ನಲ್ಲಿ ಹಮ್ಮಿಕೊಳ್ಳಲಾಗಿತ್ತು .

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‌ ಕಾರ್ಯಕ್ರಮಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು .

ಉದ್ಯಮದಿಂದ ಚರ್ಚೆಗಳು, ನಾವೀನ್ಯತೆಗಳು ಮತ್ತು ಪ್ರದರ್ಶನಗಳ ಒಂದು ಶ್ರೇಣಿಗೆ ವೇದಿಕೆಯನ್ನು ಹೊಂದಿಸುತ್ತದೆಎಂದು ಹೇಳಿದ ಸೆಲ್ವಕುಮಾರ್ ತಮ್ಮ ಮುಖ್ಯ ಭಾಷಣದಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಾಣಿಜ್ಯ ಮತ್ತು ಕೈಗಾರಿಕೆ ಕ್ಷೇತ್ರಗಳಲ್ಲಿ ಕರ್ನಾಟಕ ಸಾಧಿಸಿರುವ ಅಗಾಧ ಬೆಳವಣಿಗೆಯನ್ನು ಮತ್ತಷ್ಟು ವಿಸ್ತಾರವಾಗಿ ಪ್ರಸಾರ ಪಡಿಸಲು ಈ ಕಾರ್ಯಕ್ರಮ ಒತ್ತುನೀಡಲಿದೆ ಎಂದು ತಿಳಿಸಿದರು .

image 1

ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಕ್ರಿಯಾತ್ಮಕ ಪರಿಸರ ಈಗ ರಾಜ್ಯದಲ್ಲಿ ನಿರ್ಮಾಣವಾಗಿದೆ ಎಂದು ತಿಳಿಸಿದರು .

ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ: “ಕರ್ನಾಟಕ ಸರ್ಕಾರವು ಸ್ಟಾರ್ಟ್‌ಅಪ್‌ಗಳು ಅಭಿವೃದ್ಧಿ ಹೊಂದಲು ಮತ್ತು ಆರ್ಥಿಕತೆಗೆ ಗಮನಾರ್ಹ ಕೊಡುಗೆಗಳನ್ನು ನೀಡಲು ಅಗತ್ಯವಾದ ಮೂಲಸೌಕರ್ಯ, ಹಣಕಾಸು ಮತ್ತು ಮಾರ್ಗದರ್ಶನವನ್ನು ಒದಗಿಸಲು ಸಿದ್ದವಾಗಿದ್ದು ಈ ಕುರಿತು ನಾವು ಉಪಕ್ರಮಗಳನ್ನು ಕೈಗೊಳ್ಳಲಾಗಿದ್ದು ಸರ್ಕಾರದಿಂದ ಒದಗಿಸಲಾದ ಸೌಲಭ್ಯಗಳು ಮತ್ತು ಬೆಂಬಲ ವ್ಯವಸ್ಥೆಗಳನ್ನು ಬಳಸಿಕೊಳ್ಳುವಂತೆ ನಾನು ಎಲ್ಲಾ ಉದ್ಯಮಿಗಳು ಮತ್ತು ನವೋದ್ಯಮಿಗಳಿಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.‘ಗ್ಯಾರಂಟಿ ಯೋಜನೆ’ ನಿಲ್ಲಿಸಿ: ಕಾಂಗ್ರೆಸ್ ನಾಯಕ ಎಂ.ಲಕ್ಷ್ಮಣ್ ಆಗ್ರಹ

ಕಾರ್ಯಕ್ರಮದಲ್ಲಿ ELCIA ಅ‍ಧ್ಯಕ್ಷ ಶ್ರೀ ರಾಮ್‌ ಕುಮಾರ್‌ ಇದ್ದರು.

Copyright © All rights reserved Newsnap | Newsever by AF themes.
error: Content is protected !!