ಸ್ವಾರ್ಥಕ್ಕಿಂತಲೂ ದೇಶ ದೊಡ್ಡದು, ಉಸಿರಿರೋವರೆಗೂ ಭಾರತದ ನಿಸ್ವಾರ್ಥ ಸೇವೆಗೆ ತನ್ನ ಜೀವನವನ್ನು ಮುಡಿಪಾಗಿರಿಸಿರುವ ಮೋದಿಯವರ ವಿಜಯ, ಸಮಸ್ತ ಭಾರತೀಯರಿಗೆ ಪ್ರಜಾತಂತ್ರದ ಅತ್ಯಮೋಘ ಉಡುಗೊರೆ.
ಬಿಸಿಲು ಮಳೆ ಚಳಿ ಇದಾವುದನ್ನೂ ಲೆಕ್ಕಿಸದೇ ಸದಾ ದೇಶಸೇವೆಯಲ್ಲಿ ತನ್ನನ್ನು ತಾನು ಅರ್ಪಿಸಿಕೂಂಢಿರುವ ಈ
ಮಹಾನುಭಾವ, ಭಾರತದ ಮೇಲೆ ಅದೆಂತಹ ಪ್ರೀತಿ, ಮಮತೆಯನ್ನು ತನ್ನ ಹೃದಯದಲ್ಲಿ ತುಂಬಿಕೊಂಡಿರಬೇಕು!…
ತನ್ನವರೆಲ್ಲಾ ಈ ಭವ್ಯಭಾರತದ ಪ್ರಜೆಗಳು, ಇದೇ ನನ್ನ ಕುಟುಂಬ ಎನ್ನುವುದರ ಮೂಲಕ ಭಾರತೀಯರ ಧಮನಿಯಲ್ಲಿ
ನೆಲೆಸಿದ್ದಾರೆ. ಮೋದಿಯವರ ವಿಜಯ ನಿಜಕ್ಕೂ ಭಾವೋದ್ವೇಗ ಉಂಟು ಮಾಡಿದೆ. ಸಂತೋಷದ ಆನಂದಭಾಷ್ಪ ಹರಿಸುತ್ತದೆ, ಸಾರ್ಥಕತೆಯ ಭಾವಮನದಲ್ಲಿ ಮೂಡಿದೆ. ಮೋದಿಯಂತಹ ನಾಯಕ ಭಾರತೀಯರ ಅನೇಕ ವರ್ಷಗಳ ಹಂಬಲ ಹಾಗೂ ತಪಸ್ಸಿನ ಫಲ. ಇಂತಹ ನಾಯಕನನ್ನು ಪಡೆದ ನಾವೇ ಧನ್ಯರು.
ಸದಾ ಸಂಯಮ ನಿರ್ಭೀತಭಾವ, ಕಾರ್ಯಮಗ್ನ ನಡೆ ಮೋದಿಯವರ ಮಹತ್ವಾಕಾಂಕ್ಷೆಯ ಪ್ರತೀಕ. ದೇಶದ
ಬಗ್ಗೆ ಕಳಕಳಿ ಹಾಗೂ ಅದರ ಉನ್ನತಿಯ ಮನಸ್ಥಿತಿಯೇ ಇಂದು ಅವರನ್ನು ಭಾರತೀಯರ ಮನದಲ್ಲಿ ನೆಲೆಸುವಂತೆ ಮಾಡಿದೆ. ತಾನು ಮಾಡುವ ಪ್ರತೀ ಕಾರ್ಯವೂ ದೇಶಕ್ಕೆ ಮೀಸಲು,ತೆಗೆದುಕೊಳ್ಳುವ ನಿರ್ಧಾರ ದೇಶದ ಅಭ್ಯುದಯ.
ಭಾರತವಲ್ಲದೇ ಬೇರೇನಿಲ್ಲ ಎಂದು ಇಳಿವಯಸ್ಸಿನಲ್ಲೂ ರಜೆ ಇಲ್ಲದೇ ಅವಿರತವಾಗಿ ಹದಿನಾರು ಘಂಟೆ ಕೆಲಸಮಾಡುವ ಈ ಕರ್ಮಯೋಗಿ ಭಾರತ ಕಂಡ ಅನನ್ಯ ಸಂತ, ನಾಯಕ. ತನ್ನ ಸ್ನೇಹಪರ ನಡವಳಿಕೆಯಿಂದ ಜಗತ್ತಿನ ಗಮನವನ್ನು ಸೆಳೆದು ಅನೇಕ ದೇಶಗಳೊಂದಿಗೆ ಗೆಳೆತನದ ಬೆಸುಗೆ ಬೆಸೆದಿದ್ದಾರೆ, ಭಾರತೀಯರ ಸಮ್ಮಾನವನ್ನು ಮರಳಿ
ದೊರಕಿಸಿದ್ದಾರೆ. ಜಾತಿ, ವರ್ಣ ಭೇದವಿಲ್ಲದೇ ಕಾರ್ಯವೆಸಗುವ ಸರ್ವಹಿತಕಾರೀ ಮನೋಭಾವ
ಅವರ ನಿಷ್ಕಲ್ಮಶ ಮನೋಭಾವದ ಅನುಭವ ಉಂಟುಮಾಡುತ್ತದೆ.
ಇಂದು ಮೋದಿ ಕೇವಲ ವ್ಯಕ್ತಿಯಾಗುಳಿಯದೇ, ಹೆಸರಾಗುಳಿಯದೇ, ಒಂದು ಅನುಭೂತಿಯಾಗಿದ್ದಾರೆ, ಭಾವನೆಯಾಗಿದ್ದಾರೆ. ಮೋದಿ ಉತ್ಸಾಹದ ಚಿಲುಮೆ, ಆಶಾಭಾವ, ಸ್ಪೂರ್ತಿ, ಭದ್ರತೆ, ಬದ್ಧತೆ, ತ್ಯಾಗ, ಅಂತಃಕರಣ ಎಂದರೆ ಅತೀ ಸಮಂಜಸ.
ಸಾಮಾನ್ಯವಾಗಿ ಯಾವುದೇ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದರೂ, ದೇಶದ ಹಿತಕ್ಕಾಗಿಯೇ ಕೆಲಸ
ಮಾಡುತ್ತವೆ. ಸಾಂವಿಧಾನಿಕ ಪರಿಧಿಯಲ್ಲಿ ದೇಶದ ನೆಲ, ಜಲ, ಕಾನೂನು, ವ್ಯವಸ್ಥೆ ಹಾಗೂ ರಕ್ಷಣೆ
ಇವೆಲ್ಲವನ್ನೂ ನಿಭಾಯಿಸುತ್ತವೆ. ಆದರೆ ದೇಶದ ನಾಯಕನಾಗಿ, ಸೇವಕನೂ ಆಗಿ ಜನತೆಯ ಮನಸ್ಸಿನ ಸಂಪರ್ಕ ಸಾಧಿಸಲು ಎಲ್ಲರಿಂದಲೂ ಸಾಧ್ಯವಿಲ್ಲ.
ಕೋಟಿ ಕೋಟಿ ಕಣ್ಣುಗಳು ಕಿವಿಗಳು ಮನಸ್ಸುಗಳು ನಾಯಕನ ಮೇಲೆ ನಿಗಾ ಇಟ್ಟಿರುವಾಗ ಕೇವಲ
ಪ್ರಾಮಾಣಿಕ ನಡವಳಿಕೆ ಹಾಗೂ ಉದ್ದೇಶಗಳಿಂದ ಮಾತ್ರ ನಂಬಿಕೆಯನ್ನು ಗಳಿಸಬಹುದು. ಇಷ್ಟು ದೊಡ್ಡ ದೇಶದ ಜನತೆಯ ನಂಬಿಕೆ, ಪ್ರೀತಿಗೆ ಪಾತ್ರರಾಗುವುದೆಂದರೆ ಅಸಾಧ್ಯದ ಸಂಗತಿ. ಮೋದಿಯವರು ಈ ಅಸಾಧ್ಯವನ್ನು ಸಾಧ್ಯವಾಗಿಸಿದ್ದಾರೆ. ಈ ದೇಶ ಕಂಡ ಅಪರೂಪದ ನಾಯಕ ಮೋದಿ ಜಿ. ಅವರ ಸಾಧನೆ ಶ್ಲಾಘನೀಯ.
ಹಗರಣ ರಹಿತ, ಸ್ವಚ್ಛ, ರಕ್ಷಾತ್ಮಕ, ಪ್ರಗತಿಶೀಲ ರಾಜ್ಯಭಾರವನ್ನು ನಾವೆಲ್ಲ ಇಂದು ಕಂಡಿದ್ದೇವೆ. ಭಾರತ
ಇತಿಹಾಸದಲ್ಲಿ ಗುಲಾಮಗಿರಿಯ ಕಹಿ ಉಂಡಿರುವ ದೇಶ. ಅನೇಕ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿದ
ದೇಶ. ಬಡತನದ ಬೇಗೆಯನ್ನು ಜನರು ಕಣ್ಣೀರು ಸುರಿಸುತ್ತ ಅಸಹಾಯಕರಂತೆ ಬಾಳಿ ಬಸವಳಿದು ಹೋಗಿದ್ದಾರೆ. ಭಾರತ ಪ್ರತಿಭೆಯ ಸಂಕೇತ, ಪ್ರತಿಭಾಶಾಲಿಗಳಿಂದ ತುಂಬಿದೆ. ಕೇವಲ ಸಾಧು ಸಂನ್ಯಾಸಿಗಳ ದೇಶವಲ್ಲಾ. ಭಾರತ ಬಲಿಷ್ಟ ಭದ್ರ
ಪ್ರಗತಿಶೀಲ ದೇಶವಾಗಬೇಕು. ತಾಂತ್ರಿಕತೆಯಿಂದ ಆಧ್ಯಾತ್ಮದ ತನಕ ಸರ್ವ ಕ್ಷೇತ್ರಗಳಲ್ಲೂ ಸಂಪನ್ನತೆ ಹೊಂದಿರುವ ಈ ದೇಶ ಜಗತ್ತಿನ ಅಗ್ರಗಣ್ಯ ದೇಶವಾಗಲೇ ಬೇಕು. ಆದರೆ ಭಾರತಕ್ಕೆ ಸಲ್ಲಬೇಕಾದ ಮಹತ್ವವಾಗಲೀ, ಸಮ್ಮಾನವಾಗಲೇ ಹಿಂದೆ ಸಿಕ್ಕಿರಲಿಲ್ಲ. ಮೋದಿಯವರ ಸಮರ್ಥ ನಾಯಕತ್ವದಿಂದ ಇಂದು ಭಾರತ ಪ್ರಪಂಚದ ಗಮನ ಸೆಳೆಯುತ್ತಿದೆ. ಎಂತಹ ರೋಮಾಂಚಕಾರೀ ಬದಲಾವಣೆ! ನಮ್ಮ ದೇಶ ಸಂಕೀರ್ಣ ಜಟಿಲ ಹಾಗೂ ವೈವಿಧ್ಯತೆಯ ನಾಡು. ಆದರೆ ಭಾರತೀಯರ ಮನಸ್ಸೆಲ್ಲವೂ ಒಂದೇ. ಅದರ ಪರಿಣಾಮವೇ ಇಂದಿನ ಫಲಿತಾಂಶ.ಇದನ್ನು ಓದಿ – ತಮ್ಮನಿಂದಲೆ ಅಣ್ಣನ ಬರ್ಬರ ಹತ್ಯೆ
ರಾಷ್ಟ್ರಹಿತ ಹಾಗೂ ರಾಷ್ಟ್ರಭಕ್ತಿ ಪ್ರತಿಯೊಬ್ಬ ಭಾರತೀಯನ ಮನಸ್ಥಿತಿ. ರಾಷ್ಟ್ರಸಮರ್ಪಣೆ ಪ್ರತಿಯೊಬ್ಬ ಭಾರತೀಯನ ಮನದ ಇಂಗಿತ. ಆದರೆ ಈವರೆಗೆ ಇದ್ದ ಒಂದೇ ಕೊರತೆ ಎಂದರೆ ಸ್ಪೂರ್ತಿದಾಯಕ ನಾಯಕತ್ವ. ನುಡಿದಂತೆ ನಡೆಯುವ ಅವ್ಯಭಿಚಾರೀ ವ್ಯಕ್ತಿತ್ವ. ಮೋದಿ ಜೇ ಇಂದು ಈ ಕೊರತೆಯನ್ನು ನೀಗಿಸಿದ್ದಾರೆ. ಭಾರತೀಯರೆಲ್ಲರೂ ದೇಶದ ಉನ್ನತಿಗಾಗಿ ಶ್ರಮಿಸೋಣ, ದೇಶದ ನಾಯಕನ ಶೈ ಬಲ ಪಡಿಸೋಣ. ಭವ್ಯ ಭಾರತದ ಕನಸು ನನಸಾಗಿಸೋಣ.
ಜೈ ಹಿಂದ್
ಅರುಣ ಕುಲಕರ್ಣಿ
More Stories
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
ಚುನಾವಣೆಗೂ ಮುನ್ನ ಕೇಜ್ರಿವಾಲ್ ಸಂಕಷ್ಟ – ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಇಡಿಗೆ ರಾಜ್ಯಪಾಲರ ಅನುಮತಿ