ಬೆಂಗಳೂರು: ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ ಆರೋಪಿ ಪ್ರಜ್ವಲ್ ರೇವಣ್ಣ ಅವರನ್ನು ಒಂದು ವಾರ ಎಸ್‌ಐಟಿ ಕಸ್ಟಡಿಗೆ ನೀಡಲಾಗಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ 42ನೇ ಎಸಿಎಂಎಂ ಕೋರ್ಟ್ ಇಂದಿನಿಂದ ಜೂನ್ 6ರವರೆಗೂ SIT ಕಸ್ಟಡಿಗೆ ನೀಡಿ ಮಹತ್ವದ ಆದೇಶ ನೀಡಿದೆ.
ಜರ್ಮನಿಯಿಂದ ಬೆಂಗಳೂರಿಗೆ ಆಗಮಿಸಿದ ಪ್ರಜ್ವಲ್ ರೇವಣ್ಣರನ್ನು ಎಸ್ ಐಟಿ ಅಧಿಕಾರಿಗಳು ಬಂಧಿಸಿದ್ದರು.
ಇಂದು ಬೆಳಗ್ಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ ಪ್ರಜ್ವಲ್ ರೇವಣ್ಣರನ್ನು 42ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿತ್ತು.
ಈ ವೇಳೆ ವಿಚಾರಣೆ 42ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಧೀಶರು ಎರಡು ಕಡೆಯ ವಾದಗಳನ್ನು ಆಲಿಸಿದರು. ಎಸ್‌ಐಟಿ ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಕೋರ್ಟ್‌ಗೆ ಮನವಿ ಮಾಡಿತ್ತು. ಇದಕ್ಕೆ ಪ್ರಜ್ವಲ್ ರೇವಣ್ಣ ಪರ ವಕೀಲರಾದ ಅರುಣ್ ಅವರು ಆಕ್ಷೇಪ ವ್ಯಕ್ತಪಡಿಸಿರು. ಜಾಮೀನು ನೀಡುವಂತೆ ವಾದ ಮಂಡಿಸಿದ್ದಾರೆ.
ಆರೋಪಿಯನ್ನು ಕೋರ್ಟ್‌ಗೆ ಹಾಜರುಪಡಿಸುತ್ತಿದ್ದಂತೆ ಎಸ್ಐಟಿ ಪ್ರಕರಣದ ಕೇಸ್ ಡೈರಿ (ಸಿಡಿ) ಕೋರ್ಟ್‌ಗೆ ಸಲ್ಲಿಸಿತು. ಆಗ ನ್ಯಾಯಾಧೀಶ ಕೆ.ಎನ್ ಶಿವಕುಮಾರ್ ಅವರು ಆರೋಪಿಯನ್ನು ಹಾಜರು ಪಡಿಸಲು ಸೂಚಿಸಿದ್ದರು. ಇಂದು ಮಧ್ಯಾಹ್ನ 3 ಗಂಟೆಗೆ ಪ್ರಜ್ವಲ್ ರೇವಣ್ಣ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ನ್ಯಾಯಾಲಯ ಸೂಚಿಸಿತ್ತು.
ಕೋರ್ಟ್ ಕಟಕಟೆಯಲ್ಲಿ ನಿಂತ ಪ್ರಜ್ವಲ್ ರೇವಣ್ಣ ಅವರನ್ನು ಜಡ್ಜ್ ಮೊದಲಿಗೆ ಕೆಲವು ಪ್ರಶ್ನೆಗಳನ್ನು ಕೇಳಿದರು. ನಿಮ್ಮ ಹೆಸರೇನು? ಅಂತ ಕೇಳಿದ ಪ್ರಶ್ನೆಗೆ ಪ್ರಜ್ವಲ್ ರೇವಣ್ಣ ಅವರು ಉತ್ತರ ನೀಡಿದ್ದಾರೆ. ಇದೇ ವೇಳೆ ನಿಮಗೇನಾದ್ರೂ ಟಾರ್ಚರ್ ಆಯ್ತಾ? ನಿಮ್ಮನ್ನು ಬಂಧಿಸಿರುವ ವಿಷಯವನ್ನು ನಿಮ್ಮ ತಂದೆ-ತಾಯಿಗೆ ತಿಳಿಸಿದರೆ ಎಂದು ನ್ಯಾಯಾಧೀಶರು ಪ್ರಶ್ನಿಸಿ, ಉತ್ತರ ಪಡೆದರು
ಪ್ರಜ್ವಲ್ ರೇವಣ್ಣ ಅವರು ಉತ್ತರಿಸಿ ಇಲ್ಲ ಟಾರ್ಚರ್ ಏನು ಆಗಿಲ್ಲ. ಆದರೆ ಎಸ್ಐಟಿ ಕಚೇರಿಯ ಶೌಚಾಲಯದ ಬಗ್ಗೆ ಪ್ರಜ್ವಲ್ ರೇವಣ್ಣ ದೂರು ನೀಡಿದ್ದಾರೆ.
ಎಸ್‌ಐಟಿಯಲ್ಲಿರುವ ಶೌಚಾಲಯದಲ್ಲಿ ತುಂಬಾ ವಾಸನೆ ಇದೆ ಎಂದು ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ಅವರ ಈ ಮಾತು ಕೇಳಿ ಕೋರ್ಟ್ ಹಾಲ್‌ನಲ್ಲಿದ್ದ ಕೆಲವರು ನಕ್ಕಿದ್ದಾರೆ. ಆಗ ಜಡ್ಜ್ ಎಲ್ಲರೂ ಸುಮ್ಮನಿರಲು ಸೂಚನೆ ನೀಡಿದ್ದಾರೆ.
ಇದೇ ವೇಳೆ ಎಸ್‌ಐಟಿ ಕಸ್ಟಡಿಯಲ್ಲಿರುವಾಗ ಮನೆಯೂಟ ನೀಡಲು ಪ್ರಜ್ವಲ್ ರೇವಣ್ಣ ಪರ ವಕೀಲರು ಮನವಿ ಮಾಡಿದ್ದಾರೆ. ಇದಕ್ಕೆ ಎಸ್‌ಐಟಿ ಅಧಿಕಾರಿಗಳು ಮನೆಯೂಟ ಬೇಡ. ಅದಕ್ಕೆ ನಾವೇ ಊಟ ಕೊಡ್ತೀವಿ ಎಂದು ಹೇಳಿದ್ದಾರೆ.ಕರ್ನಾಟಕ ರಾಜ್ಯವನ್ನು ಮುಸ್ಲಿಂ ರಾಜ್ಯವೆಂದು ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಲಿ : ಕೆ.ಎಸ್ ಈಶ್ವರಪ್ಪ
ಬೌರಿಂಗ್ ಆಸ್ಪತ್ರೆಯ ಡಾಕ್ಟರ್ ಧನಂಜಯ್ ಸಿ.ಎಂ ಅವರು ಪ್ರಜ್ವಲ್ ಅವರ ವೈದ್ಯಕೀಯ ಪರೀಕ್ಷೆ ಮಾಡಿದ್ದರು. ಪ್ರಜ್ವಲ್ ಅವರ ಆರೋಗ್ಯ ಸ್ಥಿರವಾಗಿದೆ. ಬಿಪಿ, ಶುಗರ್, ಇಸಿಜಿ & ಹಾರ್ಟ್ ಬೀಟ್ ರೇಟ್ ಚೆಕಪ್ ಮಾಡಿ ಅವರ ಆರೋಗ್ಯದಲ್ಲಿ ಯಾವುದೇ ತೊಂದರೆಯಿಲ್ಲ, ಆರೋಗ್ಯದ ಸ್ಥಿತಿ ಚೆನ್ನಾಗಿದೆ. ಯಾವುದೇ ಸಮಸ್ಯೆ ಇಲ್ಲ ಎಂದು ಎಸ್ಐಟಿಗೆ ವರದಿ ನೀಡಿದ ಬಳಿಕವೇ ಕೋರ್ಟ್‌ಗೆ ಪ್ರಜ್ವಲ್ರನ್ನು ಹಾಜರು ಪಡಿಸಲಾಗಿಯಿತು.
More Stories
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ