November 6, 2024

Newsnap Kannada

The World at your finger tips!

postal voting

ನಾಳೆಯಿಂದ 14 ಕ್ಷೇತ್ರಗಳಲ್ಲಿ 2ನೇ ಹಂತದ ಅಂಚೆ ಮತದಾನ

Spread the love

ಬೆಂಗಳೂರು : ರಾಜ್ಯದ ಎರಡನೇ ಹಂತದ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಗತ್ಯ ಸೇವೆಗಳ ಇಲಾಖೆಗಳ ಸಿಬ್ಬಂದಿಗೆ ನಾಳೆಯಿಂದ 3 ದಿನಗಳ ಕಾಲ ಅಂಚೆ ಮತದಾನಕ್ಕೆ ಅವಕಾಶ ನೀಡಿದೆ .

ಅಂಚೆ ಮತದಾನ ಕೇಂದ್ರಗಳನ್ನು ಉತ್ತರ ಕರ್ನಾಟಕ ಭಾಗದ 14 ಲೋಕಸಭಾ ಕ್ಷೇತ್ರತಗಳಲ್ಲಿ ತೆರೆಯಲಾಗಿದ್ದು , ನಾಳೆಯಿಂದ ಮೇ 3ರವರೆಗೆ ಪ್ರತಿ ದಿನ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಅಂಚೆ ಮತದಾನ ಮಾಡಬಹುದು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಳಾಖೆಗಳ ಸಿಬ್ಬಂದಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಭಾರತ ಚುನಾವಣಾ ಆಯೋಗ ಅಂಚೆ ಮತದಾನ ಕೇಂದ್ರಗಳನ್ನು ತೆರೆದಿದ್ದು, ಅರ್ಹ ಮತದಾರರ ಅಂಚೆ ಮತಪತ್ರಗಳ ಸೌಲಭ್ಯವನ್ನು ಬಳಸಿಕೊಳ್ಳುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.SSLC ಪರೀಕ್ಷೆ : ಮೇ.10ರಂದು ಫಲಿತಾಂಶ ಪ್ರಕಟ

ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ ,ಶಿವಮೊಗ್ಗ ,ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು,ಚಿಕ್ಕೋಡಿ, ಬೆಳಗಾವಿ, ಬೀದರ್‌ ಹಾಗೂ ಕೊಪ್ಪಳ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅಂಚೆ ಮತದಾನ ಕೇಂದ್ರಗಳನ್ನು ತೆರೆಯಲಾಗಿದೆ.

Copyright © All rights reserved Newsnap | Newsever by AF themes.
error: Content is protected !!