March 11, 2026

Newsnap Kannada

The World at your finger tips!

WhatsApp Image 2024 04 15 at 6.22.32 PM

11 ಕೆಜಿ ಚಿನ್ನ,54 ಕೋಟಿ ಮನೆ, ₹1 ಕೋಟಿಯ ಕಾರು: ‌ ಗೀತಾ ಶಿವರಾಜ್‌ ಕುಮಾರ್‌ ಆಸ್ತಿ ಘೋಷಣೆ

Spread the love
  • 11 ಕೆಜಿ ಚಿನ್ನ, 54 ಕೋಟಿ ಮನೆ, 1 ಕೋಟಿಯ ಕಾರು

ಶಿವಮೊಗ್ಗ: ಇದು ಶಿವಮೊಗ್ಗದಿಂದ ಎರಡನೇ ಬಾರಿ ಲೋಕಸಭಾ ಚುನಾವಣೆಗೆ ಕಣದಲ್ಲಿರುವ ಮಾಜಿ ಸಿಎಂ ಬಂಗಾರಪ್ಪರವರ ಮಗಳು ಗೀತಾ ಶಿವರಾಜ್ ಕುಮಾರ್ ಆಸ್ತಿ ವಿವರ

ಇಂದು ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿರುವ ಆಸ್ತಿ ಅಫಿಡವಿಟ್‌ ವಿವರ ಇಲ್ಲಿದೆ.

40.04 ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡಿರುವ ಗೀತಾ, ಪತಿ ಶಿವರಾಜ್‌ ಕುಮಾರ್‌ ಬಳಿ ಇದೆ 49 ಕೋಟಿ ರೂ. ಆಸ್ತಿ ಅಂತ ತಿಳಿಸಿದ್ದಾರೆ.

ಒಟ್ಟಾರೆ ಪತಿ-ಪತ್ನಿ ಬಳಿ 89.04 ಕೋಟಿ ರೂ. ಆಸ್ತಿ ಇರುವುದಾಗಿ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ಗೀತಾಶಿವರಾಜ್‌ಕುಮಾರ್‌. ಇದಲ್ಲದೇ 2022-23ರಲ್ಲಿ ತಮ್ಮ ವಾರ್ಷಿಕ ಆದಾಯ 1.48 ಕೋಟಿ ರೂ. ಎಂದು ಗೀತಾ ಶಿವರಾಜ್‌ ಕುಮಾರ್‌ ಹೇಳಿದ್ದು, ಪತಿ ಆದಾಯ 2.97 ಕೋಟಿ ರೂ. ಎಂದು ತಿಳಿಸಿದ್ದಾರೆ. ಜೊತೆಗೆ ತಮ್ಮ ಮೇಲೆ ಯಾವುದೇ ಕ್ರಿಮಿನಲ್‌ ಪ್ರಕರಣವಿಲ್ಲ ಅಂತ ಉಲ್ಲೇಖ ಮಾಡಿದ್ದಾರೆ.


ಶಿವಣ್ಣ ಬಳಿ 22,58,338 ರು ಹಾಗೂ ಗೀತಾ ಅವರ ಬಳಿ 3 ಲಕ್ಷ ರೂಪಾಯಿ ಕ್ಯಾಶ್ ಇದೆ ಅಂತ ಹೇಳಿದ್ದಾರೆ.

ಗೀತಾ ಅವರ ಬಳಿಯಲ್ಲಿ ಬರೋಬ್ಬರಿ 11.54 ಕೆಜಿ ತೂಕದ ಚಿನ್ನ ಹಾಗೂ ವಜ್ರದ ಆಭರಣಗಳಿವೆ. ಇದರ ಮೌಲ್ಯ 3.5 ಕೋಟಿ ರೂ. ಆಗಿದೆ. 30 ಕೆಜಿ ಬೆಳ್ಳಿಯೂ ಅವರ ಬಳಿ ಇದೆಯಂತೆ.‘ಕಳ್‌ ನನ್ಮಗ ಯಾರು ಎಂದು ತೋರಿಸಿ’- ಹೆಚ್‌ಡಿಕೆ ವಿರುದ್ಧ ನಟ ಪ್ರಕಾಶ್‌ ರಾಜ್ ವಾಗ್ದಾಳಿ

ಗೀತಾ ಶಿವರಾಜ್‌ ಕುಮಾರ್‌ ಹಾಗೂ ಶಿವರಾಜ್ ಕುಮಾರ್‌ ಜಂಟಿ ಒಡೆತನದಲ್ಲಿ ಕನಕಪುರದಲ್ಲಿ 5.05 ಎಕರೆ ವಿಸ್ತೀರ್ಣದ ಕೃಷಿ ಭೂಮಿ ಹೊಂದಿದ್ದಾರೆ. ಇದರ ಮೌಲ್ಯ ಒಟ್ಟು 3 ಕೋಟಿ ರೂ. ಎಂದು ಉಲ್ಲೇಖ ಮಾಡಿದ್ದಾರೆ. ಮಾನ್ಯತಾ ರೆಸಿಡೆನ್ಸಿಯಲ್ಲಿ ಬರೋಬ್ಬರಿ 1.48 ಎಕರೆಯಲ್ಲಿ ಜಂಟಿಯಾಗಿ ಗೀತಾ ಶಿವರಾಜ್‌ ಕುಮಾರ್‌ ಹಾಗೂ ಶಿವರಾಜ್‌ಕುಮಾರ್‌ ಮನೆ ಹೊಂದಿದ್ದು, ಇದರ ಮೌಲ್ಯವೇ 54 ಕೋಟಿ ರೂ. (ತಲಾ 27 ಕೊಟಿ ರೂ.) ಎಂದು ಹೇಳಿದ್ದಾರೆ.

error: Content is protected !!