November 22, 2024

Newsnap Kannada

The World at your finger tips!

underwater metro

ಪ್ರಧಾನಿ ಮೋದಿಯಿಂದ ಭಾರತದ ಮೊದಲ ಅಂಡರ್ ವಾಟರ್ ಮೆಟ್ರೋ ಮಾರ್ಗ ಉದ್ಘಾಟನೆ

Spread the love

ಇಂದು ಕೋಲ್ಕತ್ತಾದಲ್ಲಿ ಭಾರತದ ಮೊದಲ ನೀರೊಳಗಿನ ಮೆಟ್ರೋ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದಾರೆ.

ಈ ಅಂಡರ್ ವಾಟರ್ ಸೇವೆಯು ಕೋಲ್ಕತ್ತಾ ಮೆಟ್ರೋದ ಪೂರ್ವ-ಪಶ್ಚಿಮ ಕಾರಿಡಾರ್ನ ಹೌರಾ ಮೈದಾನ್-ಎಸ್ಪ್ಲನೇಡ್ ವಿಭಾಗದ ಭಾಗವಾಗಿದ್ದು, ಹೂಗ್ಲಿ ನದಿಯ ಕೆಳಗೆ 16.6 ಕಿ.ಮೀ ವ್ಯಾಪಿಸಿದೆ.

ಕೊಲ್ಕತ್ತಾದ ಅವಳಿ ನಗರಗಳಾದ ಹೌರಾ ಮತ್ತು ಸಾಲ್ಟ್ ಲೇಕ್ ಅನ್ನು ಸಂಪರ್ಕಿಸುವ ಮೆಟ್ರೋ ಮಾರ್ಗವು ಮೂರು ಭೂಗತ ನಿಲ್ದಾಣಗಳನ್ನು ಹೊಂದಿದೆ. ಇದು ಹೂಗ್ಲಿ ನದಿಯ ಅಡಿಯಲ್ಲಿ 520 ಮೀಟರ್ ದೂರವನ್ನು ಕೇವಲ 45 ಸೆಕೆಂಡುಗಳಲ್ಲಿ ಕ್ರಮಿಸುವ ನಿರೀಕ್ಷೆಯಿದೆ.

ಏಪ್ರಿಲ್ 2023 ರಲ್ಲಿ ಕೋಲ್ಕತ್ತಾ ಮೆಟ್ರೋ ಪ್ರಯೋಗಗಳ ಸಮಯದಲ್ಲಿ ನೀರೊಳಗಿನ ಸುರಂಗದ ಮೂಲಕ ರೈಲನ್ನು ಯಶಸ್ವಿಯಾಗಿ ಓಡಿಸಿದ ಐತಿಹಾಸಿಕ ಕ್ಷಣವನ್ನು ನಿರ್ಮಿಸಿದೆ.ಮಾರ್ಚ್ 11 ಕ್ಕೆ ದೇವನಹಳ್ಳಿ ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆಗಮನ

ಪ್ರಧಾನಮಂತ್ರಿಯವರು ಕೋಲ್ಕತ್ತಾದಲ್ಲಿ ಕವಿ ಸುಭಾಷ್-ಹೇಮಂತ ಮುಖೋಪಾಧ್ಯಾಯ ಮತ್ತು ತರತಲಾ-ಮಜೆರ್ಹತ್ ಮೆಟ್ರೋ ವಿಭಾಗಗಳನ್ನು ಸಹ ಉದ್ಘಾಟಿಸಲಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!