December 23, 2024

Newsnap Kannada

The World at your finger tips!

accident yesterday

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ : ದಂಪತಿ ಪ್ರಣಾಪಾಯದಿಂದ ಪಾರು

Spread the love

ಮೈಸೂರು : ದಟ್ಟಗಳ್ಳಿ ರಿಂಗ್ ರಸ್ತೆಯ ಸಾ.ರಾ ಕನ್ವೆನ್ಷನ್ ಹಾಲ್ ಎದುರು ಭಾನುವಾರ ಬೆಳಗ್ಗೆ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಕ್ಷಣ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು , ಕಾರು ಸಂಪೂರ್ಣವಾಗಿ ಬೆಂಕಿ ಗಾಹುಯಾಗಿರುವ ಘಟ‌ನೆ ನಡೆದಿದೆ.

ಕುವೆಂಪು ನಗರದ ನಿವಾಸಿ ಚಂದ್ರು ಹಾಗೂ ಪತ್ನಿ ನೇಹಾ ಎಂಬ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದು , ಕಾರಿನಲ್ಲಿ ದಟ್ಟಗಳ್ಳಿ ಕಡೆ ತೆರಳುತ್ತಿದ್ದ ವೇಳೆ ಕಾರಿನ ಟೈರ್ ಸ್ಫೋಟಗೊಂಡಿದೆ.

ಕಾರು ಚಾಲನೆಯಲ್ಲಿ ನಿಯಂತ್ರಣ ತಪ್ಪಿದ ಪರಿಣಾಮ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು , ತಕ್ಷಣ ದಂಪತಿಗಳು ಕಾರಿನಿಂದ ಇಳಿದಿದ್ದಾರೆ.

ಸ್ಥಳೀಯ ಆಸ್ಪತ್ರೆಗೆ ತಕ್ಷಣ ಅವರನ್ನು ದಾಖಲಿಸಲಾಗಿದೆ.ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಬಂದು ಬೆಂಕಿಯನ್ನು ನಂದಿಸಿದೆ.ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ಕಾರು ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬ ಕೂಡ ಜಖಂಗೊಂಡಿದ್ದು , ಕೆ.ಆರ್. ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Copyright © All rights reserved Newsnap | Newsever by AF themes.
error: Content is protected !!