ಬೆಂಗಳೂರು: ಇಂದು ಸಾರಿಗೆ ನೌಕರರು ವೇತನ ಹೆಚ್ಚಳ (Salary Hike) ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫ್ರೀಡಂಪಾರ್ಕ್‌ನಲ್ಲಿ ಉಪವಾಸ ಸತ್ಯಾಗ್ರಹ (Hunger Strike) ನಡೆಸಲು ಮುಂದಾಗಿದ್ದಾರೆ.
ಬೆಳಗ್ಗೆ 10:30 ರಿಂದ 5 ಗಂಟೆಯವರೆಗೆ ಸಾರಿಗೆ ಮುಖಂಡ ಅನಂತ ಸುಬ್ಬರಾವ್ ನೇತೃತ್ವದಲ್ಲಿ ಸರ್ಕಾರದ ವಿರುದ್ದ , ನೌಕರರ ಉಪವಾಸ ಸತ್ಯಾಗ್ರಹ ನಡೆಯಲಿದೆ.
ಜನವರಿ 1ರಿಂದ ಸಾರಿಗೆ ನೌಕರರಿಗೆ ಹೊಸ ಒಪ್ಪಂದದ ಪ್ರಕಾರ ವೇತನ ಪರಿಷ್ಕರಣೆ ಆಗಬೇಕಾಗಿದ್ದು,ಇಲ್ಲಿಯವರೆಗೆ ವೇತನ ಪರಿಷ್ಕರಣೆ ವಿಚಾರವನ್ನು ಸಾರಿಗೆ ನಿಗಮಗಳು ಪ್ರಸ್ತಾಪಿಸಿಲ್ಲ.
ಇದರಿಂದಾಗಿ ಸಾರಿಗೆ ನೌಕರರು ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳನ್ನಿಟ್ಟು ಪ್ರತಿಭಟನೆಗೆ ಸಜ್ಜಾಗಿದ್ದಾರೆ.ವಕೀಲರ ಹೋರಾಟಕ್ಕೆ ಮಣಿದ ಸರ್ಕಾರ – ಐಜೂರು ಠಾಣೆಯ PSI ಅಮಾನತು
ಸಾರಿಗೆ ನೌಕರರ ಬೇಡಿಕೆಗಳೇನು?
- ಎಲೆಕ್ಟ್ರಿಕ್ ಬಸ್‌ಗಳಲ್ಲಿ ಸಾರಿಗೆ ನಿಗಮದ ನೌಕರರನ್ನೇ ಚಾಲಕರಾಗಿ ನೇಮಿಸಿಕೊಳ್ಳುವುದು.
- ನಿವೃತ್ತಿ ನೌಕರರಿಗೆ ಅಂತಿಮವಾಗಿ ಬರಬೇಕಾದ ಹಣ ಕೊಡಬೇಕು ಮತ್ತು 38 ತಿಂಗಳ ವೇತನ ಹೆಚ್ಚಳದ ಬಾಕಿ ನೌಕರರಿಗೆ ನೀಡಬೇಕು.
- ಮೂಲ ವೇತನದ 25% ವೇತನ ಹೆಚ್ಚಿಸಬೇಕು.
- ಉಚಿತ ಔಷಧಿ ಸೇರಿದಂತೆ ವೈದ್ಯಕೀಯ ಸೌಲಭ್ಯ ನೀಡಬೇಕು.
- ಎಲ್ಲಾ ನಿಗಮಗಳ ನೌಕರರ ಮುಂಬಡ್ತಿಗೆ ಕ್ರಮವಹಿಸುವುದು. ವಿವಿಧ ಭತ್ಯೆಗಳನ್ನ ಐದು ಪಟ್ಟು ಹೆಚ್ಚಿಸುವುದು.
More Stories
ಕರ್ನಾಟಕ ಸೇರಿದಂತೆ 14 ರಾಜ್ಯಗಳಲ್ಲಿ 2 ದಿನ ಭಾರೀ ಮಳೆಯ ಮುನ್ಸೂಚನೆ
ನಂಬುಗೆಯೇ ಇಂಬು
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ