January 29, 2026

Newsnap Kannada

The World at your finger tips!

press meet mandya

ಮಂಡ್ಯಕ್ಕೆ ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆ ಘೋಷಿಸಿದ ಸಿಎಂಗೆ ಧನ್ಯವಾದ: ಶಾಸಕ ರವಿಕುಮಾರ್

Spread the love

ಮಂಡ್ಯ: ೨೦೨೩ ರ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರು ಭರವಸೆ ನೀಡಿದಂತೆ ೭೫ ಕೋಟಿ ನೀಡಿ ಮೈಷುಗರ್ ಕಾರ್ಖಾನೆ ಪುನರಾರಂಭಿಸಿದ್ದಲ್ಲದೇ ಇದೀಗ ನುಡಿದಂತೆ ನೂತನ ಸಕ್ಕರೆ ಕಾರ್ಖಾನೆಯನ್ನು ೫೦೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವುದಾಗಿ ಬಜೆಟ್ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪ್ರಕಟಿಸಿದ್ದಾರೆ . ಅದಕ್ಕಾಗಿ ಮಂಡ್ಯ ಜಿಲ್ಲೆಯ ಸಮಸ್ತ ಜನತೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಗಣಿಗ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ನಾಲ್ವಡಿಯವರ ದೂರದೃಷ್ಟಿಯಿಂದ ಸ್ಥಾಪಿತವಾದ ಮಂಡ್ಯದ ಸಕ್ಕರೆ ಕಾರ್ಖಾನೆ ಜಿಲ್ಲೆಯ ರೈತರ ಜೀವನಾಡಿಯಾಗಿ,ಜಿಲ್ಲೆಯ ಅಸ್ಮಿತೆಯಾಗಿದೆ.ಜನರ ಜೀವನದ ಜೊತೆ ಬೆರೆತು ಬಂದಿರುವ ಇದು ಕಾಶಿ ವಿಶ್ವನಾಥ ಮಂದಿರ ಹಾಗೂ ಅಯೋಧ್ಯೆಯ ಶ್ರೀ ರಾಮಮಂದಿರದಷ್ಟೇ ಪವಿತ್ರವಾದುದು. ಇಂತಹ ಮೈಸೂರು ಸಕ್ಕರೆ ಕಾರ್ಖಾನೆಗೆ ಶತಮಾನದಷ್ಟು ಇತಿಹಾಸವಿದ್ದು,ಕುಂಟುತ್ತಾ ತೆವಳುತ್ತಾ ಸಾಗುತ್ತಿದ್ದ ಈ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ,ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿಯವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಇವರೆಲ್ಲರ ಇಚ್ಛಾಶಕ್ತಿಯಿಂದ ನೂತನ ಕಾರ್ಖಾನೆ ಸ್ಥಾಪನೆ ಆಗುತ್ತಿದ್ದು, ಶೀಘ್ರ ಭೂಮಿ ಪೂಜೆ ನಡೆಯಲಿದೆ ಎಂದರು.

ಆಧುನಿಕ ತಂತ್ರಜ್ಞಾನದ ಸಕ್ಕರೆ ಕಾರ್ಖಾನೆ:

ಬಜೆಟ್ ನಲ್ಲಿ ಸರ್ಕಾರ ಹೊಸ ಕಾರ್ಖಾನೆಗೆ ೧೦೦ ಕೋಟಿ ಅನುದಾನವನ್ನು ಮೀಸಲಿಟ್ಟಿದ್ದು, ಉಳಿದ ೪೦೦ ಕೋಟಿ ಹಣವನ್ನು ಸರ್ಕಾರವೇ ಮುಂದೆ ನಿಂತು ಸಾಲ ಸೌಲಭ್ಯದ ಮೂಲಕ ಕೊಡಿಸಲಿದೆ.ಅಗತ್ಯ ಬಿದ್ದರೆ ಮೈಷುಗರ್ ಹೆಸರಿನ ಆಸ್ತಿಯನ್ನು ಸದುಪಯೋಗಪಡಿಸಿಕೊಳ್ಳಲಾಗುವುದು. ಈ ಹಣದಲ್ಲಿ ಆಧುನಿಕ ತಂತ್ರಜ್ಞಾನದ ಸಕ್ಕರೆ ಕಾರ್ಖಾನೆ ನಿರ್ಮಾಣವಾಗಲಿದೆ.ಜೊತೆಗೆ ವಿದ್ಯುತ್ ಘಟಕ,ಎಥೆನಾಲ್ ಘಟಕವನ್ನು ನಿರ್ಮಿಸಲಾಗುವುದು ಎಂದರು

ನೂತನ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಸಾತನೂರು ಫಾರಂನಲ್ಲಿ ಜಾಗ ಗುರುತಿಸಲಾಗಿದೆ. ಈಗಿರುವ ಸಕ್ಕರೆ ಕಾರ್ಖಾನೆ ಜಾಗದಲ್ಲಿ ಸಾಫ್ಟ್ ವೇರ್ ಪಾರ್ಕ್ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇನೆ. ಸಾಫ್ಟ್ ವೇರ್
ಪಾರ್ಕ್ ನಿರ್ಮಾಣವಾದರೆ ಸಾವಿರಾರು ಉದ್ಯೋಗದ ಅವಕಾಶಗಳು ದೊರಕಲಿವೆ ಎಂದರು.

ಎಲ್ಲರಿಗೂ ಕಾರ್ಖಾನೆ ನಮ್ಮದು ಎಂಬ ಭಾವನೆ ಮೂಡಿಸಲು ಪ್ರತಿ ಮನೆಯಿಂದ ಒಂದು ಹಿಡಿ ಮಣ್ಣನ್ನು ಸಂಗ್ರಹಿಸಿ ಮೈ ಶುಗರ್ ಕಾರ್ಖಾನೆ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುವುದು ಎಂದರು.

ಶೀಘ್ರದಲ್ಲೇ ಭೂಮಿಪೂಜೆ ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರವಾಗಿದ್ದು, ಈ ಹಿಂದೆ ೨೦೧೯ ರ ಜೆಡಿಎಸ್ ಸರ್ಕಾರದಂತೆ ಕೇವಲ ಘೋಷಣೆ ಮಾಡಿ ಸುಮ್ಮನಿರುವ ಸರ್ಕಾರ ನಮ್ಮದಲ್ಲ. ಶೀಘ್ರ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಯವರನ್ನು ಕರೆದುಕೊಂಡು ಬಂದು ಭೂಮಿ ಪೂಜೆ ಮಾಡುತ್ತೇನೆ ಎಂದು ತಿಳಿಸಿದರು.

ವಿ.ಸಿ.ಫಾರಂ ನಲ್ಲಿ ಕೃಷಿ ವಿವಿ ಸ್ವಾಗತಾರ್ಹ:

ಕೃಷಿ ಆಧಾರಿತ ಜಿಲ್ಲೆಯಾದ ಮಂಡ್ಯದ ವಿ.ಸಿ.ಫಾರಂನಲ್ಲಿ ಕೃಷಿ ವಿಶ್ವವಿದ್ಯಾನಿಲಯ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಕೃಷಿ ಆಧಾರಿತ ಜಿಲ್ಲೆಯಾದ ್ಲ ಕೃಷಿ ವಿವಿ ಸ್ಥಾಪನೆಯಾದರೆ ಬೆಂಗಳೂರು, ಧಾರವಾಡದಂತೆ ಕೃಷಿ ವಿಶ್ವವಿದ್ಯಾನಿಲಯ ವಿಸ್ತಾರವಾಗಿ ಹೊಸ ಹೊಸ ಸಂಶೋಧನೆಗಳು ನಡೆಯಲು ಅನುಕೂಲವಾಗುತ್ತದೆ ಎಂದರು.

ಬಸರಾಳು, ದುದ್ದ, ನಾಗಮಂಗಲ ಭಾಗದ ನಾಲೆಗಳ ದುರಸ್ತಿಗೂ ಬಜೆಟ್‌ನಲ್ಲಿ ಹಣ ನೀಡಲಾಗಿದೆ.ಜಿಲ್ಲಾಸ್ಪತ್ರೆಯಲ್ಲಿ ಸಾರ್ವಜನಿಕ ಆರೋಗ್ಯ ಪ್ರಯೋಗ ಶಾಲೆಗಳ ನಿರ್ಮಾಣ,ಮಿಮ್ಸ್ ಆಸ್ಪತ್ರೆ ಮೇಲ್ದರ್ಜೆಗೇರಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.ಕೆಆರ್‌ಎಸ್ ಪಕ್ಷದಿಂದ ‘ಕರ್ನಾಟಕಕ್ಕಾಗಿ ನಾವು’ ಬೈಕ್ ಜಾಥಾ

ಸುದ್ದಿಗೋಷ್ಠಿಯಲ್ಲಿ ನಗರಸಭಾ ಸದಸ್ಯ ಶ್ರೀಧರ್, ತಾ.ಪಂ.ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಚ್.ಕೆ.ರುದ್ರಪ್ಪ, ಜಿ.ಪಂ. ಮಾಜಿ ಸದಸ್ಯ ಜಿ.ಸಿ.ಆನಂದ್, ರಾಮೇಗೌಡ ಉಪಸ್ಥಿತರಿದ್ದರು.

error: Content is protected !!