ರೋಲ್ ಕಾಲ್ ಹೋರಾಟಗಾರರಿಗೆ ಹೆದರಬೇಡಿ ಸಿಎಂ ಗೆ ಯತ್ನಾಳ್ ಅಭಯ

Team Newsnap
2 Min Read
  • ನಕಲಿ ಹೋರಾಟಗಾರರಿಗೆ ಹೆದರಬೇಡಿ . ವಿಜಯಪುರ ದಲ್ಲಿ ಯಾರು ಬಂದ್ ಮಾಡಿಸುತ್ತಾರೆ ನಾನೂ ನೋಡುವೆ
  • ಮರಾಠಾ ಭಾಷೆ, ಬೆಳಗಾವಿ ವಿಚಾರದಲ್ಲಿ ಶಿವಸೇನಾ, ಶರದ್ ಪವಾರ್, ಅಯೋಗ್ಯ ಅಜೀತ ಪವಾರ್ ವಿರೋಧಿಸುತ್ತೇನೆ. 
  • ಕನ್ನಡಿಗರ ಮತ ಹೋಗುತ್ತೆ ಎಂದು ಸಿಎಂ ಹೆದರಬೇಡಿ. ಶಿವಾಜಿ
    ಮಾಹಾರಾಜರ ಸಮುದಾಯಕ್ಕೆ ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸಬೇಕು
  • ವಾಟಾಳ್​ ನಾಗರಾಜ ಮತ್ತು ಕನ್ನಡ ಪರ ಸಂಘಟನೆಗಳು  ಹೇಗೆ ಬಂದ್ ಮಾಡುತ್ತಾರೋ ನಾನು ನೋಡುವೆ
  • ಮರಾಠಾ ಸಮುದಾಯಕ್ಕೆ ನೀಡಿರುವ ನಿಗಮಕ್ಕೆ ಬೆಂಬಲವಿದೆ.  ಸಿಎಂ ಏನಾದರೂ ಅಭಿವೃದ್ಧಿ ನಿಗಮ ಹಿಂಪಡೆದರೆ ದೊಡ್ಡ ಅನಾಹುತವಾಗುತ್ತದೆ.

ಕನ್ನಡ ಪರ ನಕಲಿ ಹೋರಾಟಗಾರರು ಮತ್ತು ರೋಲ್ ಕಾಲ್ ಹೋರಾಟ ಗಾರರಿಗೆ ಮುಖ್ಯಮಂತ್ರಿಗಳು ಹೆದರಬಾರದು. ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಕೆಲ ಕನ್ನಡ ಸಂಘಟನೆಯವರು ಡಿ. 5 ರಂದು  ನೀಡಿರುವ ಬಂದ್​ ಜಿಲ್ಲೆಯಲ್ಲಿ  ಹೇಗೆ ನಡೆಯುತ್ತದೆ. ಹೇಗೆ ಅವರು ಬಂದ್​ ಆಚರಿಸುತ್ತಾರೆ ನೋಡೋಣ ಎಂದು ಬಿಜೆಪಿ ಶಾಸಕ ಬಸನಗೌಡ ರಾ. ಪಾಟೀಲ .ಯತ್ನಾಳ ಸವಾಲು ಹಾಕಿದ್ದಾರೆ.

YADIYURAPPA1

ಮರಾಠಾ ಭಾಷೆ, ಬೆಳಗಾವಿ ವಿಚಾರದಲ್ಲಿ ಶಿವಸೇನಾ, ಶರದ ಪವಾರ, ಆಯೋಗ್ಯ ಅಜೀತ ವವಾರ ವಿರೋಧಿಸುತ್ತೇನೆ.  ಕನ್ನಡಿಗರ ಮತ ಹೋಗುತ್ತೆ ಎಂದು ಸಿಎಂಹಾರಾಜರ ಸಮುದಾಯಕ್ಕೆ ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ ವಾಟಾಳ್​ ನಾಗರಾಜ ಮತ್ತು ಕನ್ನಡ ಪರ ಸಂಘಟನೆಗಳು  ಹೇಗೆ ಬಂದ್ ಮಾಡುತ್ತಾರೋ ನೋಡೋಣ ಎಂದಿದ್ದಾರೆ.

ಕನ್ನಡದ ಹೆಸರಿನಲ್ಲಿ ಸುಮ್ಮನೆ ಹೋರಾಟ ಸಲ್ಲದು.  ಕನ್ನಡ ಮತ್ತು ಸಂಸ್ಕೃತಿ ಹೆಸರಿನಲ್ಲಿ  ವಾಟಾಳ್ ನಾಗರಾಜ, ಕನ್ನಡ ಪರ ಸಂಘಟನೆಗಳ ಮುಖಂಡ ಎಷ್ಟು ಅನುದಾನ ಪಡೆದಿದ್ದಾರೆ? ಸರಕಾರದಿಂದ ಪಡೆದ ರೂ. 50 ಲಕ್ಷ ಹಣವನ್ನು ಕನ್ನಡಪರ ಹೋರಾಟಗಾರರು ಎಲ್ಲ ಕನ್ನಡಪರ ಸಂಘಟನೆಗಳಿಗೆ ಹಂಚಿಕೆ ಮಾಡಿದ್ದಾರಾ ಎಂದು ಅವರು ಪ್ರಶ್ನಿಸಿದ್ದಾರೆ.

ಇವರೆಲ್ಲಾ ಬೆಂಗಳೂರಿನ ಹೋಟೇಲಿನಲ್ಲಿ ಕುಳಿತು ಹೋಟೇಲ್ ತಮ್ಮದೆಂದು ಹೇಳುತ್ತಾರೆ.  ವಾಟಾಳ್​​ ನಾಗರಾಜ ಅವರಿಂದ ನಾವೇನು ಕಲಿಯಬೇಕಾಗಿಲ್ಲ.  ಮರಾಠಾ ಸಮುದಾಯಕ್ಕೆ ನೀಡಿರುವ ನಿಗಮಕ್ಕೆ ಬೆಂಬಲವಿದೆ.  ಸಿಎಂ ಏನಾದರೂ ಅಭಿವೃದ್ಧಿ ನಿಗಮ ಹಿಂಪಡೆದರೆ ದೊಡ್ಡ ಅನಾಹುತವಾಗುತ್ತೆ ಎಂದು ಯತ್ನಾಳ ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ಸರಕಾರ ಮರಾಠಿ ಅಭಿವೃದ್ಧಿ ನಿಗಮ ಮಾಡಿಲ್ಲ.  ಮರಾಠಾ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪಿಸಿದೆ.  ದೇಶದಲ್ಲಿ ಹಿಂದೂ ಧರ್ಮ ಉಳಿಯಲು ಮತ್ತು ಇಂದು ನಾವೆಲ್ಲ ಹಿಂದೂಗಳಾಗಿ ಉಳಿಯಲು ಛತ್ರಪತಿ ಶಿವಾಜಿ ಮಹಾರಾಜರು ಕಾರಣ.  ಶಿವಾಜಿ ಮಹಾರಾಜರು ಹುಟ್ಟಿರದಿದ್ದರೆ ಭಾರತ ಯಾವತ್ತೊ ಪಾಕಿಸ್ತಾನದ ಭಾಗವಾಗುತ್ತಿತ್ತು ಎಂದು ಕವಿಯೊಬ್ಬರು ಹೇಳಿದ್ದಾರೆ.  ಶಿವಾಜಿ ಮಹಾರಾಜರು ಕನ್ನಡಿಗರೇ.  ಆದಿಲ್ ಶಾಹಿ ಕಾಲದಲ್ಲಿ ಶಿವಾಜಿ ಮಹಾರಾಜರ ತಂದೆ ಶಹಾಜಿ ರಾಜೆ ಬೆಂಗಳೂರಿನ ಸರದಾರರಾಗಿದ್ದರು.  ಬೆಂಗಳೂರನ್ನು ಕಂಟ್ರೋಲ್ ಮಾಡುತ್ತಿದ್ದರು.  ಬೆಂಗಳೂರು ಆದಿಲ್ ಶಾಹಿ ಮನೆತನದ ಕಂಟ್ರೋಲ್ ಲ್ಲಿತ್ತು.  ಮರಾಠಾ ಸುಮದಾಯ ಯಾವಾಗಲೂ ಹಿಂದೂ ಪರವಾಗಿದೆ.  ಧರ್ಮದ ಪರವಾಗಿದೆ.  ದೇಶದ ಪರವಾಗಿ ಹೋರಾಟ ಮಾಡಿದ ಸಮುದಾಯ ಇದಾಗಿದೆ ಎಂದು ಯತ್ನಾಳ ತಿಳಿಸಿದರು.

ಮರಾಠಾ ಸಮುದಾಯಕ್ಕೆ ಸರಕಾರ ಕಾನೂನಾತ್ಮಕವಾಗಿ ಆ ಪ್ರಾಧಿಕಾರಕ್ಕೆ ಏನೆಲ್ಲ ಕೊಡಲು ಸಾಧ್ಯವೋ ಅದನ್ನೆಲ್ಲ ಕೊಡಬೇಕು.  ಆದರೆ, ಮರಾಠಾ ಸಮುದಾಯದ ಕೊಡುಗೆ ದೊಡ್ಡದಿದೆ.  ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮರಾಠಾ ಸಮುದಾಯವರಿದ್ದಾರೆ.  ಮೈಸೂರು ಭಾಗದಲ್ಲಿ, ಬೀದರ ಜಿಲ್ಲೆಯಲ್ಲಿ, ದಾವಣಗೆರೆ ಜಿಲ್ಲೆ, ವಿಜಯಪುರ ಜಿಲ್ಲೆಯೂ ಮರಾಠಾ ಸಮುದಾಯದವರಿದ್ದಾರೆ.  ಆ ನಿಗಮಕ್ಕೆ ಸಿಎಂ ಇನ್ನೂ ಹೆಚ್ಚಿನ ಅನುದಾನ ನೀಡಬೇಕು ಎಂದು ಯತ್ನಾಳ ಆಗ್ರಹಿಸಿದ್ದಾರೆ.

Share This Article
Leave a comment