March 10, 2026

Newsnap Kannada

The World at your finger tips!

indira

ಇಂದಿರಾ ಫೋಟೊ ಮೂಲಕ , ಬಿಜೆಪಿ ಸಂಸದರು ಗಂಡಸರಲ್ಲ ಎಂಬ ಹೇಳಿಕೆಗೆ ವಿಜಯೇಂದ್ರ ಉತ್ತರ

Spread the love

ಬೆಂಗಳೂರು : ಮಾಗಡಿ ಕಾಂಗ್ರೆಸ್‌ ಶಾಸಕ (Magadi Congress MLA) ಎಚ್‌.ಸಿ. ಬಾಲಕೃಷ್ಣ (HC Balakrishna) ಅವರ ಬಿಜೆಪಿ ಸಂಸದರು ಬರೀ ಶೋ ಪೀಸ್‌ಗಳು, ಅವರಲ್ಲಿ ಯಾರೂ ಗಂಡಸರಿಲ್ಲ ಎಂಬ ವಿವಾದಾತ್ಮಕ ಹೇಳಿಕೆಗೆ (controversial Statement) ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಅವರು ಇಂದಿರಾ ಗಾಂಧಿ ಅವರ ಫೋಟೊ ಮೂಲಕ ತಿರುಗೇಟು ನೀಡಿದ್ದಾರೆ.

ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಪಾಲನ್ನು ನೀಡದೆ ಅನ್ಯಾಯ ಮಾಡುತ್ತಿದೆ ಎಂದು ರಾಮನಗರದ ನಾಗರಕಲ್ಲುದೊಡ್ಡಿ ಗ್ರಾಮದಲ್ಲಿ ಮಾತನಾಡಿದ ಶಾಸಕ ಎಚ್.ಸಿ.ಬಾಲಕೃಷ್ಣ, ದಿಲ್ಲಿಯಲ್ಲಿ ಆಯೋಜಿಸಲಾಗಿರುವ ಜಂತರ್‌ ಮಂತರ್‌ ಪ್ರತಿಭಟನೆಗೆ ಸಂಬಂಧಿಸಿ ಹೇಳಿಕೆ ನೀಡಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ʻʻಬಿಜೆಪಿಯ ಸಂಸದರು ನರೇಂದ್ರ ಮೋದಿ ಮುಂದೆ ಕೂರೋದು ಇಲ್ಲ, ಏಳೋದು ಇಲ್ಲ. ಕೇವಲ ಮೋದಿ ಹೆಸರಲ್ಲಿ ಗೆಲ್ತಾರೆ, ಆದರೆ ವೈಯಕ್ತಿಕ ವರ್ಚಸ್ಸು ಇಲ್ಲ. ಪಕ್ಕದ ತಮಿಳುನಾಡು ತನ್ನ ಹಕ್ಕಿಗಾಗಿ ಮಾಡುವ ಹೋರಾಟವನ್ನ ನೋಡಿ ಕಲಿಯಲಿ. ಬಿಜೆಪಿ ಸಂಸದರೆಲ್ಲಾ ಶೋ ಪೀಸ್ ಗಳು. ಕೇವಲ ದೆಹಲಿಗೆ ಹೋಗೋದು ಟಿಎ-ಡಿಎ ತಕೊಂಡು ಬರೋದು ಅಷ್ಟೇ ಇವರ ಕೆಲಸ. ಬಿಜೆಪಿ ಎಂಪಿಗಳು, ಮಂತ್ರಿಗಳು ರಾಜ್ಯದ ಧ್ವನಿ ಎತ್ತಿಲ್ಲ. ಹಾಗಾಗಿ ನಾವು ಹೋರಾಟ ಮಾಡ್ತಿದ್ದೀವಿʼʼ ಎಂದು ಹೇಳಿದರು.

” ಬಿಜೆಪಿಯ ಗಂಡಸರು ನಮ್ಮ ಹೋರಾಟ ನೋಡಿಯಾದರೂ ಹೋರಾಟ ಮಾಡ್ತಾರಾ ನೋಡೋಣ.. ಇದರ ಅರ್ಥ ಬಿಜೆಪಿಯಲ್ಲಿ ಯಾರು ಗಂಡಸರು ಇಲ್ಲ ಅಂತ.! ಈಗಿರುವ ಬಿಜೆಪಿ ಎಂಪಿಗಳು ಯಾರು ಗಂಡಸರಲ್ಲ ಎಂದು ಅರ್ಥʼʼ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಬಿಜೆಪಿ ಸಂಸದರ ವಿರುದ್ಧ ವಾಗ್ದಾಳಿ ನಾಡೆಸಿದರು.

ಟ್ವಿಟರ್ ನಲ್ಲಿ ಇಂದಿರಾ ಫೋಟೊ ಹಂಚಿಕೊಂಡ ವಿಜಯೇಂದ್ರ:

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ , ಬಾಲಕೃಷ್ಣ ಅವರ ಹೇಳಿಕೆಗೆ ಪ್ರತಿಯಾಗಿ ಕಾಂಗ್ರೆಸ್‌ನ ಗುಲಾಮಿತನವನ್ನು ಪ್ರತಿಪಾದಿಸುವ ಚಿತ್ರವೊಂದನ್ನು ಹಂಚಿಕೊಂಡು ತಿರುಗೇಟು ನೀಡಿದ್ದಾರೆ .

ದೇಶಬಿಟ್ಟು ಬ್ರಿಟಿಷರು ತೊಲಗಿದರೂ ನೆಹರೂ ಕುಟುಂಬದ ಗುಲಾಮಗಿರಿಯ ನೆರಳಲ್ಲೇ ಇರುವ ಶಾಸಕ ಬಾಲಕೃಷ್ಣನವರಂತಹ ಕಾಂಗ್ರೆಸ್ಸಿಗರು ಇಂದು ನಮ್ಮ ಪಕ್ಷದ ಸಂಸದರುಗಳನ್ನು ಕುರಿತು ನೀಡಿರುವ ಕೀಳುಮಟ್ಟದ ಹೇಳಿಕೆಗೆ ಈ ಚಿತ್ರವೇ ಉತ್ತರ ಹೇಳುತ್ತದೆ ಎಂದು ಬರೆದಿದ್ದಾರೆ.ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್: ಸಚಿವ ಮಧು ಬಂಗಾರಪ್ಪ

ಟ್ವಿಟರ್‌ನಲ್ಲಿ ಪ್ರಕಟಿಸಿರುವ ಚಿತ್ರದಲ್ಲಿ ಇಂದಿರಾ ಗಾಂಧಿ ಅವರು ಕುರ್ಚಿಯೊಂದರಲ್ಲಿ ಕುಳಿತುಕೊಂಡಿರುವುದು, ಉಳಿದ ನಾಯಕರೆಲ್ಲ ಸುತ್ತ ದೈನ್ಯ ಸ್ಥಿತಿಯಲ್ಲಿ ನಿಂತಿರುವುದು ಕಾಣುತ್ತದೆ.

error: Content is protected !!