- ದಳಪತಿ ವಿಜಯ್ ಹೊಸ ಪಕ್ಷದ ಹೆಸರು ತಮಿಳಗ ವಿಟ್ರಿ ಕಜಂ (ತಮಿಳಿಗನ ಯಶಸ್ಸಿನ ಕಾಲ)
- ತಮಿಳುನಾಡಿನಲ್ಲಿ ಹೊಸ ರಾಜಕೀಯದ ಅಲೆ ಸೃಷ್ಟಿಸಲು ಪ್ಲಾನ್
- 2024ರ ಚುನಾವಣೆಯಲ್ಲಿ ಸ್ಪರ್ಧಿಸೋದಿಲ್ಲ ಎಂದ ವಿಜಯ್
ಚೆನ್ನೈ: ದಳಪತಿ, ತಮಿಳು ನಟ ವಿಜಯ್ ಅಧಿಕೃತವಾಗಿ ರಾಜಕೀಯ ರಂಗ ಪ್ರವೇಶ ಮಾಡಿದ್ದಾರೆ. ತಮ್ಮ ಹೊಸ ಪಕ್ಷಕ್ಕೆ ದಳಪತಿ ವಿಜಯ್ ತಮಿಳಗ ವಿಟ್ರಿ ಕಜಂ ಎಂಬ ಹೆಸರಿಟ್ಟಿದ್ದಾರೆ.
ತಮಿಳಗ ವಿಟ್ರಿ ಕಜಂ ಅಂದ್ರೆ ತಮಿಳಿಗನ ಯಶಸ್ಸಿನ ಕಾಲ ಎಂದು ಅರ್ಥ. ತಮಿಳುನಾಡಿನಲ್ಲಿ ಹೊಸ ರಾಜಕೀಯದ ಅಲೆ ಸೃಷ್ಟಿಸಲು ಸಜ್ಜಾಗಿರುವ ನಟ ವಿಜಯ್ ಯಶಸ್ಸಿನ ಕಾಲ ಸೃಷ್ಟಿಸಲು ಹೊಸ ಹೆಜ್ಜೆ ಹಾಕಿದ್ದಾರೆ. ಹೊಸ ಪಕ್ಷದ ಹೆಸರು ಘೋಷಿಸಿರುವ ವಿಜಯ್ ತಮ್ಮ ರಾಜಕೀಯದ ಪರ್ವ ಕಾಲಕ್ಕೆ ಭದ್ರ ಬುನಾದಿ ಹಾಕುತ್ತಿದ್ದಾರೆ.
ಇತ್ತೀಚೆಗೆ 200 ಸದಸ್ಯರ ಸಾಮಾನ್ಯ ಸದಸ್ಯರ ಸಭೆ ನಡೆಸಿದ್ದ ವಿಜಯ್ ರಾಜಕೀಯ ಪಕ್ಷದ ಹೆಸರಿಗಾಗಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಇದೀಗ ಚುನಾವಣಾ ಆಯೋಗದ ಒಪ್ಪಿಗೆ ಬಳಿಕ ಪಕ್ಷದ ಹೆಸರು ಪ್ರಕಟವಾಗಿದೆ.
ಹೊಸ ರಾಜಕೀಯ ಪಕ್ಷ ಘೋಷಿಸಿರುವ ನಟ ವಿಜಯ್ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧಾರ ಮಾಡಿದ್ದಾರೆ. ತಮಿಳಗ ವಿಟ್ರಿ ಕಜಂ 2024ರ ಚುನಾವಣೆಯಲ್ಲಿ ಸ್ಪರ್ಧಿಸೋದಿಲ್ಲ. ಹಾಗೆಯೇ ಬೇರೆ ಪಕ್ಷಗಳಿಗೆ ಬೆಂಬಲ ನೀಡಲ್ಲ ಎಂದು ನಟ ವಿಜಯ್ ಘೋಷಿಸಿದ್ದಾರೆ.Ind vs Eng : ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ
ಪಕ್ಷದ ಅಧ್ಯಕ್ಷರಾಗಿಯೂ ಆಯ್ಕೆಯಾಗಿರುವ ನಟ ವಿಜಯ್ ಅವರು ಪಕ್ಷದ ಸಾಮಾನ್ಯ ಹಾಗೂ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ತೀರ್ಮಾನ ಮಾಡುವುದಾಗಿ ಹೇಳಿದ್ದಾರೆ. ತಮಿಳುನಾಡಿನಲ್ಲಿ 2026ಕ್ಕೆ ವಿಧಾನಸಭಾ ಚುನಾವಣೆ ಎದುರಾಗಲಿದೆ. ಆಗ ದಳಪತಿ ವಿಜಯ್ ರಾಜಕೀಯದ ಖದರ್ ಅನಾವರಣ ಆಗುವ ಸಾಧ್ಯತೆ ಇದೆ.
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ